ಓದುಗರಿಗೆ ಮರೀಚಿಕೆಯಾದ ಗ್ರಂಥಾಲಯ!
ಪಟ್ಟಣದಿಂದ ಬಹು ದೂರದಲ್ಲಿರುವುದೇ ಸಮಸ್ಯೆ ತುಂಗಾ ತೀರ ನಿವಾಸಿಗರ ಬೇಸರ
Team Udayavani, Oct 18, 2019, 3:50 PM IST
ಶೃಂಗೇರಿ: ಪಟ್ಟಣದಿಂದ ಬಹು ದೂರವಿರುವ ಗ್ರಂಥಾಲಯದಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಯಾವುದೇ ಉಪಯೋಗವಿಲ್ಲ. ಪಟ್ಟಣದ ಹೃದಯ ಭಾಗದಲ್ಲಿದಿದ್ದರೆ ಎಲ್ಲರಿಗೂ ಅನುಕೂಲವಾಗುತ್ತಿತ್ತು…
ಇದು ಪಟ್ಟಣದ ಹೊರವಲಯದ ಕಾಳಿಕಾಂಬಾ ದೇವಸ್ಥಾನದ ಬಳಿ ಇರುವ ಸಾರ್ವಜನಿಕ ಗ್ರಂಥಾಲಯದ ಬಗ್ಗೆ ಜನರು ಆಡಿಕೊಳ್ಳುತ್ತಿರುವ ಮಾತು. ಬಸ್ ನಿಲ್ದಾಣದ ಕಟ್ಟಡದ ಒಂದು ಕೊಠಡಿಯಲ್ಲಿ 1980ರಿಂದಲೂ ಪುರಸಭೆ ವಾಚನಾಲಯವಾಗಿ ನಂತರ ಜಿಲ್ಲಾಡಳಿತದ ಕೃಪಕಟಾಕ್ಷದಿಂದ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಗೊಂಡಿತ್ತು. ಆಗ ಸಾರ್ವಜನಿಕ ಗ್ರಂಥಾಲಯದಲ್ಲಿ ಪ್ರತಿನಿತ್ಯ ಓದುಗರ ಸಂಖ್ಯೆ ಹರಿದು ಬರುತ್ತಿತ್ತು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರು ಇಲ್ಲಿ ಬಂದು ಪುಸ್ತಕ, ಮ್ಯಾಗಝಿನ್ ಹಾಗೂ ದಿನಪತ್ರಿಕೆಗಳನ್ನು ಓದುತ್ತಿದ್ದರು.
ನಂತರ 1985ರಲ್ಲಿ ಅಂದಿನ ಪ್ರಾಥಮಿಕ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡರು ಪಟ್ಟಣದ ಹೊರವಲಯದ ಕಾಳಿಕಾಂಬಾ ದೇವಸ್ಥಾನದ ಸಮೀಪ ಕಾಲು ಎಕರೆ ಜಾಗದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ, 1986ರಲ್ಲಿ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಸಾರ್ವಜನಿಕ ಗ್ರಂಥಾಲಯ ಇಲ್ಲಿ ತನ್ನ ಸ್ವಂತ ಕಟ್ಟಡ ಹೊಂದಿದೆ. ಈಗ್ಗೆ 7 ವರ್ಷದ ಹಿಂದೆ ಈ ಕಟ್ಟಡದ ಪಕ್ಕದಲ್ಲಿಯೇ ಮತ್ತೊಂದು ಕೊಠಡಿಯನ್ನು ನಿರ್ಮಿಸಿ ಗ್ರಂಥಾಲಯದ ಸುತ್ತಲೂ ಸುಸಜ್ಜಿತ ಕಾಂಪೌಂಡ್ ನಿರ್ಮಿಸಲಾಗಿದೆ. ಆರಂಭದಲ್ಲಿ ಈ ಗ್ರಂಥಾಲಯಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು ಇಲ್ಲಿಗೆ ಅಧ್ಯಯನಕ್ಕಾಗಿ ಬರುತ್ತಿದ್ದರು. ಇದೀಗ ಸಮೀಪದಲ್ಲಿಯೇ ಬಿಜಿಎಸ್ ಕಾಲೇಜು, ಜೆಸಿಬಿಎಂ ಕಾಲೇಜಿನಲ್ಲಿ ಗ್ರಂಥಾಲಯ ಇರುವುದರಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.
ನಿರ್ವಹಣೆ ಕೊರತೆ: ಗ್ರಂಥಾಲಯ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಮಳೆಗಾಲದ ಸಮಯದಲ್ಲಿ ಕಟ್ಟಡದ ಒಳಗೆ ಸೋರುತ್ತದೆ. ಇದರಿಂದ ಪುಸ್ತಕದ ಕಪಾಟುಗಳಿಗೆ ಹಾಗೂ ಓದುಗರಿಗೆ ತೊಂದರೆ ಉಂಟಾಗಿದೆ. ಅಲ್ಲದೇ, ಗ್ರಂಥಾಲಯದ ಹೊರ ಆವರಣದಲ್ಲಿ ಕುರುಚಲು ಪೊದೆಗಳು, ಗಿಡಗಂಟಿಗಳು, ಮುಳ್ಳಿನ ಗಿಡಗಳು ಬೆಳೆದು ಗ್ರಂಥಾಲಯದ ಪರಿಸರವೇ ನಿರ್ವಹಣೆ ಕೊರತೆಯಿಂದ ಹಾಳು ಕೊಂಪೆಯಂತಾಗಿದೆ. ಇಲ್ಲಿಗೆ ಬರುವ ಓದುಗರಿಗೂ ಕಿರಿಕಿರಿ ಉಂಟಾಗಿದೆ.
ಗ್ರಂಥಾಲಯದಲ್ಲಿ ಸುಮಾರು 28 ರಿಂದ 30,000 ಕಾದಂಬರಿ, ಪುಸ್ತಕಗಳು ಸೇರಿದಂತೆ ಹಲವಾರು ಸಾಹಿತ್ಯ ಪುಸ್ತಕಗಳು ಇವೆ. ಆದರೆ, ಓದುಗರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಪುಸ್ತಕಗಳು ಇದೀಗ ಧೂಳು ಹಿಡಿಯುತ್ತಿವೆ. ಈ ಗ್ರಂಥಾಲಯದಲ್ಲಿ 200 ಮಹಿಳಾ ಓದುಗ ಸದಸ್ಯರು ಸೇರಿದಂತೆ 2139ಮಂದಿ ಓದುಗರು ಸದಸ್ಯತ್ವ ಪಡೆದಿದ್ದಾರೆ. ನಿತ್ಯ 40-50 ಜನ ಓದುಗರು ಬರುತ್ತಾರೆ.
ಇರುವ ಕಟ್ಟಡದ ಜಾಗ ಚಿಕ್ಕದಾಗಿರುವುದರಿಂದ ಅವಶ್ಯವಿರುವ ಕುರ್ಚಿ- ಬೆಂಚು ಇದ್ದರೂ ಸಹ ಸ್ಥಳವಿಲ್ಲದೇ ಪರದಾಡುವಂತಾಗಿದೆ. ಸಾಕಷ್ಟು ಸಮಯ ದಿನಪತ್ರಿಕೆ ಓದುವವರ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ಕುರ್ಚಿ- ಬೆಂಚು ಅವಶ್ಯಕತೆ ಇದೆ. ಇಲ್ಲಿ ಒಬ್ಬರೇ ಗ್ರಂಥ ಪಾಲಕರಿದ್ದು, ಅವರು ಕೊಪ್ಪ ಗ್ರಂಥಾಲಯದ ಜೊತೆಗೆ ಇಲ್ಲಿಯೂ ಕರ್ತವ್ಯ ನಿರ್ವಹಿಸಬೇಕಾಗಿದೆ. ತಿಂಗಳಿಗೆ ಒಮ್ಮೆ ಇಲ್ಲಿಗೆ ಬಂದು ತಿಂಗಳ ವರದಿ ತೆಗೆದುಕೊಂಡು ಹೋಗುತ್ತಾರೆ. ಕಳೆದ 7ತಿಂಗಳ ಹಿಂದೆ ಒಬ್ಬರು ಹಂಗಾಮಿ ಗ್ರಂಥ ಪಾಲಕಿಯನ್ನು ನೇಮಿಸಲಾಗಿದೆ. ಇವರಿಂದ ಪ್ರತಿದಿನ ಗ್ರಂಥಾಲಯ ಬಾಗಿಲು ತೆರೆಯುತ್ತಿದೆ. ಅವರು ಅನಿವಾರ್ಯ ಕಾರಣಕ್ಕೆ ರಜೆ ಮೇಲೆ ಹೋದರೆ ಮಾತ್ರ ಗ್ರಂಥಾಲಯದ ಬಾಗಿಲು ಹಾಕಲಾಗುತ್ತದೆ. ಇದರಿಂದ ನಿತ್ಯ ಓದುಗರಿಗೆ ತೊಂದರೆ ಉಂಟಾಗುತ್ತದೆ. ಓದುಗರಿಗೆ ಅವರದೇ ಮಾತೃ ಭಾಷೆಯಲ್ಲಿ ಗ್ರಂಥಗಳು, ಪುಸ್ತಕಗಳು ಸಿಗುವ ವ್ಯವಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಂಥಾಲಯ ಇಲಾಖೆ ಮೂಲಕ ಜಂಟಿಯಾಗಿ ಮಾಡುತ್ತಿವೆ. ಆದರೆ, ಸಾಹಿತ್ಯಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಇಲ್ಲಿ ಇದ್ದರೂ ಓದುಗರ ಕೊರತೆ ಕಾಡುತ್ತಿದೆ. ಆದರೆ, ಗ್ರಂಥಾಲಯ ಕಟ್ಟಡಕ್ಕೆ ಕಾಯಕಲ್ಪ ನೀಡುವ ಕಾಯಕಕ್ಕೆ ಸರ್ಕಾರ ಮುಂದಾಗಿಲ್ಲ ಎನ್ನುವ ಕೊರಗು ಸದಸ್ಯರನ್ನು ಕಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.