ಭಡಕಲ್ ಅಗಸಿಗಿಲ್ಲ ರಸ್ತೆ ಸೌಲಭ್ಯ
Team Udayavani, Oct 18, 2019, 5:30 PM IST
ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಎರಡು ಶತಮಾನಕ್ಕೂ ಹಳೆಯದಾದ ದುಬಲಗುಂಡಿ ಗ್ರಾಮ ಸೃಷ್ಟಿಯಾದಾಗಿನಿಂದಲೂ ಗ್ರಾಮದ ಚಂದಾ ಹುಸೇನಿ ದರ್ಗಾ-ಭಡಕಲ್ ಅಗಸಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಮಾಡದಿರುವುದರಿಂದ ಆ ಮಾರ್ಗವನ್ನೇ ಅವಲಂಬಿಸಿರುವ ನಿವಾಸಿಗಳು ಸಂಚಾರಕ್ಕೆ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ.
ಸುಮಾರು 15 ಸಾವಿರಕ್ಕೂ ಅ ಧಿಕ ಜನಸಂಖ್ಯೆ, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ, ಒಂದು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನ ಹೊಂದಿರುವ ಈ ಗ್ರಾಮ ವಿವಿಧ ಪಕ್ಷಗಳ ಗಣ್ಯಾತಿಗಣ್ಯ ವ್ಯಕ್ತಿಗಳನ್ನು ಹೊಂದಿದೆ. ಈ ಗ್ರಾಮದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 80ರ ದಶಕದಲ್ಲೇ ನಗರ ಯೋಜನಾ ಪ್ರಾ ಧಿಕಾರ ನೀಲನಕ್ಷೆ ಸಿದ್ಧಪಡಿಸಿತ್ತು. ಆದರೆ ಎಲ್ಲವೂ ಯೋಜನೆ ಪ್ರಕಾರ ಅಭಿವೃದ್ಧಿ ಹೊಂದಿದ್ದರೆ ಈ ಗ್ರಾಮವೀಗ ಇಡೀ ಮತ ಕ್ಷೇತ್ರದಲ್ಲೇ ಮಾದರಿ ಗ್ರಾಮವಾಗುತ್ತಿತ್ತು. ಹಾಗೆಂದ ಮಾತ್ರಕ್ಕೆ ಈ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ ಎಂದೇನಿಲ್ಲ.
2008ರಲ್ಲಿ ಬೀದರ ಜಿಲ್ಲಾ ಧಿಕಾರಿಯಾಗಿದ್ದ ಹರ್ಷ ಗುಪ್ತ ಅವರ ಅವಧಿಯಲ್ಲಿ ಎರಡು ಮೂರು ಸುತ್ತು ಗ್ರಾಮದ ಸಂಚಾರ ಕೈಗೊಂಡು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಲ್ಲದೇ ಮುಖ್ಯರಸ್ತೆ ಒಳಗೊಂಡಂತೆ ಇತರೆ ಜನಸಂಚಾರ ಹೊಂದಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿತ್ತು. ಆದರೂ ಕಾರಣಾಂತರದಿಂದ ನನೆಗುದಿಗೆ ಬಿದ್ದರೂ 2013-14ನೇ ಸಾಲಿನಲ್ಲಿ ಧ್ವಜ ಕಟ್ಟೆಯಿಂದ ಗ್ರಾಮದಿಂದ ಭಾಲ್ಕಿ ಮಾರ್ಗಕ್ಕೆ ಸಂಪರ್ಕ
ಕಲ್ಪಿಸುವ ರಸ್ತೆ ವರೆಗೆ ಕೋಟ್ಯಂತರ ರೂ. ವೆಚ್ಚದಲ್ಲಿ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಅವರು ಅಭಿವೃದ್ಧಿಪಡಿಸಿದ್ದಾರೆ.
ಆದರೆ ಅದರಷ್ಟೇ ಅವಶ್ಯವಿರುವ ವಾರ್ಡ್ ಸಂಖ್ಯೆ 5ರ ವ್ಯಾಪ್ತಿಗೆ ಒಳಪಡುವ ಭಡಕಲ್ ಅಗಸಿ-ಹುಸೇನಿ ದರ್ಗಾಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದ ರಸ್ತೆ ಅಭಿವೃದ್ಧಿ ನಡೆಯದ ಕಾರಣ ತಮ್ಮ ಪ್ರತಿಯೊಂದು ಚಟುವಟಿಕೆಗೆ ಆ ಮಾರ್ಗವನ್ನೇ ಅವಲಂಬಿಸಿರುವ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುವುದು ತಪ್ಪಿಲ್ಲ.
ರಸ್ತೆ-ಚರಂಡಿ ಎರಡೂ ಇಲ್ಲ: ಆ ಮಾರ್ಗದಲ್ಲಿ ರಸ್ತೆ ಮಾತ್ರವಲ್ಲ ಚರಂಡಿಯೂ ಇಲ್ಲ. ಆ ಸೌಲಭ್ಯವಿಲ್ಲದ ಕಾರಣ ಓಣಿ ನಿವಾಸಿಗಳ ಬಚ್ಚಲ ತ್ಯಾಜ್ಯವೆಲ್ಲವೂ ಮುಖ್ಯ ರಸ್ತೆಯಲ್ಲೇ ಹರಿದಾಡುವ ಕಾರಣ ಅದರಿಂದ ಉಂಟಾಗುವ ದುರ್ನಾತ ಸಹಿಸಲಾಗದೇ ಶಾಲಾ ಮಕ್ಕಳು, ಗ್ರಾಮದ ಇತರೆ ನಿವಾಸಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಇದೆ.
ಈ ಮಧ್ಯ ಅದೆಷ್ಟೋ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಹಿಂದೆ ಹೋದದ್ದು ಹೋಯಿತು. ಮುಂದೆ ಅನಗತ್ಯ ವಿಳಂಬಿಸದೇ ಸಾರ್ವಜನಿಕರ ಸಮಸ್ಯೆಯನ್ನು ಗಂಭೀರ ಪರಿಗಣಿಸಿ, ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ಓಣಿ ನಿವಾಸಿಗಳ ಒತ್ತಾಸೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.