“ಮನರೂಪ’ ಕಾಡುವ ಗುಮ್ಮ
ತೆರೆಗೆ ಬರಲು ಸಿದ್ಧವಾಗುತ್ತಿದೆ ಹೊಸಬರ ಸೈಕಾಲಜಿಕಲ್ ಥ್ರಿಲರ್ ಕಹಾನಿ
Team Udayavani, Oct 19, 2019, 3:00 AM IST
ಕನ್ನಡದಲ್ಲಿ ಥ್ರಿಲ್ಲರ್ ಚಿತ್ರಗಳ ಟ್ರೆಂಡ್ ಸದ್ಯಕ್ಕೆ ಜೋರಾಗಿಯೇ ಇದೆ. ಅದರಲ್ಲೂ ಇತ್ತೀಚೆಗೆ ಚಿತ್ರರಂಗಕ್ಕೆ ಬರುತ್ತಿರುವ ಅನೇಕ ಹೊಸಪ್ರತಿಭೆಗಳು ಇಂಥ ಚಿತ್ರಗಳ ಕಡೆಗೆ ಆಸಕ್ತರಾಗುತ್ತಿರುವುದರಿಂದ ಗಾಂಧಿನಗರದಲ್ಲಿ ಗುಮ್ಮನ ಭಯ ಸ್ವಲ್ಪ ಜಾಸ್ತಿಯೇ ಇದೆ. ಈಗ “ಮನರೂಪ’ ಎನ್ನುವ ಅಂಥದ್ದೇ ಮತ್ತೂಂದು ಚಿತ್ರ ತೆರೆಗೆ ಬರೋದಕ್ಕೆ ರೆಡಿಯಾಗುತ್ತಿದೆ.
ದಟ್ಟ ಕಾನನದಲ್ಲಿ ಯಾರೂ ಕಾಲಿಡದ ಜಾಗದಲ್ಲಿ, ತಮ್ಮ ಯೋಚನೆಗಳನ್ನು ಶೋಧಿಸಲು ಹೊರಡುವ ಇಂದಿನ ಹೈಫೈ ಹುಡುಗರಿಗೆ ಏನೇನು ಸವಾಲುಗಳು, ತಲ್ಲಣಗಳನ್ನು ಎದುರಾಗುತ್ತವೆ ಅನ್ನೋದೆ ಮನರೂಪ ಚಿತ್ರದ ಕಥಾಹಂದರ. ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಕಿರಣ್ ಹೆಗಡೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಸಿ.ಎಂ.ಸಿ.ಆರ್ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಹೊಸ ಪ್ರತಿಭೆ ದಿಲೀಪ್ ಕುಮಾರ್, ಅನೂಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವ ಪ್ರಸಾದ್, ಅಮೋಘ್ ಸಿದ್ಧಾರ್ಥ್ ಮುಖ್ಯ ಭೂಮಿಕೆಯಲ್ಲಿ ಅಭಿನಯಸಿದ್ದಾರೆ. ಮನರೂಪದ ವಿಶೇಷತೆಗಳ ಬಗ್ಗೆ ಮಾತನಾಡುವ ಚಿತ್ರತಂಡ, ಚಿತ್ರದ ಶೇಕಡಾ ತೊಂಬತ್ತರಷ್ಟು ಚಿತ್ರೀಕರಣವನ್ನು ದಟ್ಟ ಕಾಡಿನಲ್ಲಿ ನಡೆಸಲಾಗಿದೆ.
ಇಂದಿನ ನಗರ ಪ್ರದೇಶದ ಪ್ರೇಕ್ಷಕರಿಗೆ ಪ್ರಕೃತಿಯ ವಿಸ್ಮಯಗಳನ್ನು ಆಸ್ವಾಧಿಸುವ ಅದ್ಭುತ ಅವಕಾಶವನ್ನು ಚಿತ್ರ ಮಾಡಿಕೊಡುತ್ತದೆ. ಅದೇ ವೇಳೆ, ಪ್ರಕೃತಿಯ ಆಳ-ಅಗಲ ಅರಿಯದೆ ಹೊರಟರೆ ಎದುರಾಗಬಹುದಾದ ಅನಿರೀಕ್ಷಿತ ಅಪಾಯಗಳ ಮೇಲೂ ಇದು ಚಿತ್ರ ಬೆಳಕು ಚೆಲ್ಲುತ್ತದೆ ಎಂಬ ವಿವರಣೆ ಕೊಡುತ್ತದೆ. ಸದ್ಯ ಪ್ರಮೋಶನ್ ಕಾರ್ಯಗಳಲ್ಲಿ ನಿರತವಾಗಿರುವ ಮನರೂಪ ಇದೇ ವರ್ಷದ ಕೊನೆಯೊಳಗೆ ತೆರೆಗೆ ಬರುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.