![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 19, 2019, 2:36 PM IST
ಮುಂಡರಗಿ: ನ.1ರಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ಆಚರಿಸುವ ಕರಾಳ ದಿನಕ್ಕೆ ಅನುಮತಿ ನೀಡಬಾರದು. ಕರ್ನಾಟಕ ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ವಿಶ್ವನಿರ್ಮಾಣ ಸೇನೆ ಕಾರ್ಯಕರ್ತರು ಬುಧವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನ.1ರಂದು ಗಡಿಪ್ರದೇಶವಾದ ಬೆಳಗಾವಿ ಜಿಲ್ಲೆಯ ಕನ್ನಡ ಹಾಗೂ ಮರಾಠಿ ಭಾಷಿಕರು ನಾಡಹಬ್ಬ ಆಚರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವು ಪಟ್ಟಬದ್ಧ ಜನರು ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಹೆಸರಿನ ಸಂಘಟನೆಯ ಸದಸ್ಯರು ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ಅನ್ಯಾಯ ದೌರ್ಜನ್ಯ ಆಗುತ್ತಿದೆ ಎಂದು ಮರಾಠಿ ಭಾಷಿಕರ ಮನದಲ್ಲಿ ವಿಷಬೀಜ ಬಿತ್ತುವ ಉದ್ದೇಶದಿಂದ ನ.1ರಂದು ಕರಾಳ ದಿನ ಆಚರಿಸುತ್ತಾರೆ. ಆದ್ದರಿಂದ ನ.1 ರಂದು ಆಚರಿಸುವ ಕರಾಳ ದಿನಕ್ಕೆ ಅನುಮತಿ ನೀಡಬಾರದು. ನಾಡದ್ರೋಹಿ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕದಲ್ಲಿ ಕೂಡಲೇ ನಿಷೇಧಿಸಬೇಕು ಎಂದು ಮಲ್ಲೇಶ ಹರಿಜನ ಆಗ್ರಹಿಸಿದರು. ಶಿರಸ್ತೇದಾರ್ ಬಿ.ಎಸ್.ಕನ್ನೂರ ಮನವಿ ಸ್ವೀಕರಿಸಿದರು.
ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಮಲ್ಲೇಶ ಹರಿಜನ, ಪುರಸಭೆ ಸದಸ್ಯರಾದ ಪವನ ಮೇಟಿ, ನಾಗರಾಜ ಹೊಂಬಳಗಟ್ಟಿ, ಕೊಟ್ರಾಗೌಡ ಪಾಟೀಲ, ಚಂದ್ರಶೇಖರ ಹಿರೇಮನಿ, ಎಸ್. ಕೆ. ಪೂಜಾರ, ಬಸಪ್ಪ ಡೋಣಿ, ಪರುಶುರಾಮ ಹೊಸಮನಿ, ನಾಗರಾಜ ರೋಣದ, ದಾವಲಸಾಬ ಕರ್ನಾಚಿ ಮತ್ತಿತರರು ಪಾಲ್ಗೊಂಡಿದ್ದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.