ಸಂಶೋಧನೆಯಿಂದ ಚರಿತ್ರೆ ಶಾಶ್ವತ

ಹೊಂಬುಜ- ಕೆಳದಿ ಅರಸರ ಇತಿಹಾಸದ ಸಮಗ್ರ ಅಧ್ಯಯನ ಅಗತ್ಯ: ಆರ್‌. ಗೋಪಾಲ ಅಭಿಮತ

Team Udayavani, Oct 19, 2019, 4:13 PM IST

19-October-19

ರಿಪ್ಪನ್‌ಪೇಟೆ: ಪ್ರಾದೇಶಿಕ ಸ್ಥಳಗಳ ಐತಿಹಾಸಿಕ ಕುರುಹು ಹುಡುಕಿ ಆಳವಾದ ಸಂಶೋಧನೆ ನಡೆಸಿ ನಿರಂತರವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿರುವ ಇತಿಹಾಸ ಅಕಾಡೆಮಿ ನಾಡಿನ ಚರಿತ್ರೆಗೆ ಮಹತ್ತರ ಕೊಡುಗೆ ನೀಡುತ್ತಿದೆ. ಇದರಿಂದ ಇತಹಾಸದ ಮೇಲೆ ಹೊಸ ಬೆಳಕು ಚೆಲ್ಲಲು ಸಾಧ್ಯವಾಗುತ್ತಿದೆ ಎಂದು ಮೈಸೂರಿನ ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿರ್ದೇಶಕ ಆರ್‌. ಗೋಪಾಲ ತಿಳಿಸಿದರು.

ಅತಿಶಯ ಮಹಾಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕರ್ನಾಟಕ ಇತಿಹಾಸ ಅಕಾಡೆಮಿಯ 33 ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಸ್ಥಳಗಳ ಕೋಟೆ-ಕೊತ್ತಲು, ಅರಮನೆ, ಪಾಳು ಬಿದ್ದ ಶಾಸನಗಳ ಅಧ್ಯಯನ ಅಕಾಡೆಮಿಯಿಂದ ನಡೆಯುತ್ತಿದೆ. ಅಕಾಡೆಮಿಯ ಸದಸ್ಯರು ಸಹ ಸದಾ ಅಧ್ಯಯನ ನಿರತರಾಗಿ ಹೊಸ ಸಂಶೋಧನೆ ನಡೆಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ ಎಂದರು.

ಹೊಂಬುಜ ಮಠವು ಜೈನ ಮತದ ಐತಿಹಾಸಿಕ ಸ್ಥಳವಾಗಿದ್ದು ಈಗಿನ ಪೀಠಾಧಿಪತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಹ ಇತಿಹಾಸ ಪರಂಪರೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತರಾಗಿರುವುದು ಶ್ಲಾಘನೀಯ ಎಂದರು.

ಮಲೆನಾಡಿನ ಮಡಿಲಿನಲ್ಲಿರುವ ಹೊಂಬುಜ ಮತ್ತು ಕೆಳದಿಯ ಅರಸರ ಇತಿಹಾಸದ ಬಗ್ಗೆ ಇನ್ನಷ್ಟು ಸಮಗ್ರವಾದ ಅಧ್ಯಯನ ಅಗತ್ಯವಿದ್ದು ಅಕಾಡೆಮಿ ಈ ಬಗ್ಗೆ ಕಾರ್ಯತತ್ಪರವಾಗಲಿದೆ ಎಂದರು. ಹಂಪಿಯ ಕನ್ನಡ ವಿವಿ ಕುಲಪತಿ ಡಾ| ಸ.ಚಿ.ರಮೇಶ “ಇತಿಹಾಸ ದರ್ಶನ ಸಂಪುಟ 34′ ನ್ನು ಬಿಡುಗಡೆಗೊಳಿಸಿ ಮಾತನಾಡಿ, ಹೊಂಬುಜ ಪ್ರಾಚೀನ ಕಾಲದಲ್ಲಿ ರಾಜರ ಮತ್ತು ಜೈನ ಮುನಿಗಳ ತಪೋಭೂಮಿಯಾಗಿತ್ತು. ಈಗ ಮತ್ತೆ ಇದು ಕಲೆ-ಸಂಸ್ಕೃತಿ-ಇತಿಹಾಸ ಹಾಗೂ ಧಾರ್ಮಿಕ ವಿಷಯಗಳನ್ನು ಮುನ್ನಡೆಸುವ ಶಕ್ತಿಕೇಂದ್ರವಾಗಿ ಬೆಳೆಯುತ್ತಿದೆ ಎಂದರು.

ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, ಸ್ಥಳೀಯ ಜನರ ನೆರವು ಪಡೆದು ಹೊಂಬುಜದ ಸುತ್ತಮಮುತ್ತಲಿನ ಹಲವು ಸ್ಥಳ ಮತ್ತು ಶಾಸನಗಳ ಅಧ್ಯಯನ ನಡೆಸಲಾಗಿದೆ. ಇಡೀ ಕರ್ನಾಟಕದಲ್ಲಿಯೇ ಅಪರೂಪದ ಕ್ಷೇತ್ರ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ ಆಶಯ ಭಾಷಣ ನೆರವೇರಿಸಿ ಮಾತನಾಡಿ, ರಾಜ್ಯದ ವಿವಿಧೆಡೆ ಇಂತಹ ಸಮ್ಮೇಳನ ನಡೆಸಿ ಜನಸಾಮಾನ್ಯರು ಸಹ ಇತಿಹಾಸ ಸಂಶೋಧನೆಗೆ ಆಸಕ್ತಿ ಹೊಂದುವಂತೆ ಮಾಡಲಾಗುತ್ತಿದೆ ಎಂದರು.

ಹೊಂಬುಜ ಜೈನಮಠದ ಡಾ| ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಕರ್ನಾಟಕದ ಇತಿಹಾಸ, ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ಜೈನ ರಾಜರು ಮತ್ತು ಕವಿಗಳ ಕೊಡುಗೆ ಸ್ಮರಣೀಯ. ಅಹಿಂಸೆಯ ಸಂದೇಶದ ಮೂಲಕ ಜನರಲ್ಲಿ ಉತ್ತಮ ಜೀವನ ವಿಧಾನ ಪ್ರೇರೇಪಿಸುವುದು ಅತಿಮುಖ್ಯವಾಗಿದೆ ಎಂದರು. ಇತಿಹಾಸಕಾರರು, ಅಧ್ಯಯನ ನಿರತರು ಹಾಗೂ ಶಾಸನಗಳ ಬಗ್ಗೆ ಆಸಕ್ತಿ ಇರುವವರಿಗೆ ಶ್ರೀಮಠ ಸದಾ ಸಹಕಾರ ನೀಡುತ್ತಾ ಬಂದಿದೆ ಎಂದರು.

ಮಂಗಳೂರಿನಲ್ಲಿ ನಡೆದ ಅಂಚೆ ಇಲಾಖೆಯ ಸಮ್ಮೇಳನದಲ್ಲಿ ಹೊಂಬುಜದ ರಾಜ ಜಿನದತ್ತನ ಭಾವಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಹೊಂಬುಜದ ಅಂಚೆ ನೌಕರರು ಈ ವಿಶಿಷ್ಟ ಅಂಚೆ ಚೀಟಿಯನ್ನು ಶ್ರೀಮಠದ ಸ್ವಾಮಿಗಳಿಗೆ ಹಸ್ತಾಂತರಸಿದರು.

ಇದೇ ಸಂದರ್ಭದಲ್ಲಿ ಡಾ| ವಸುಂಧರಾ μಲಿಯೋಜಾ ಅವರಿಗೆ ಇತಿಹಾಸ ಸಂಸ್ಕೃತಿ ಶ್ರೀ, ಡಾ.ಜೆ. .ನಾಗಯ್ಯರಿಗೆ -ಡಾ| ಬಾ.ರಾ.ಗೋಪಾಲ ಶಾಸನ ಪ್ರಶಸ್ತಿ, ಡಾ| ಶೀಲಾಕಾಂತ ಪತ್ತಾರರಿಗೆ -ಸಂಶೋಧನಾ ಶ್ರೀ, ಡಾ| ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ -ನಾಯಕಶ್ರೀ, ಡಾ| ಡಿ.ವಿ. ಪರಮಶಿವಮೂರ್ತಿ ಅವರಿಗೆ-ನೊಳಂಬಶ್ರೀ, ಡಾ| ಕೆ.ವಸಂತಲಕ್ಷ್ಮೀ ಅವರಿಗೆ -ಡಾ| ಶ್ರೀನಿವಾಸ ಹಾವನೂರ ಸ್ಮರಣಾರ್ಥ, ಡಾ|ಬಿ.ಜಿ.ಸಿದ್ದಲಿಂಗಮ್ಮ ಅವರಿಗೆ -ಸುಮಲತಾ ಪಾಟೀಲ್‌ ಪ್ರಶಸ್ತಿ, ಎಂ.ಬಿ.ಪಾಟೀಲ್‌ರಿಗೆ- ಸೂರ್ಯಕೀರ್ತಿ, ಡಾ|ಆರ್‌.ಮೋಹನರಿಗೆ -ಡಾ| ಎಂ.ಎಚ್‌. ಕೃಷ್ಣ ಮೆರಿಟ್‌ ಅವಾರ್ಡ್‌ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಡಾ| ಟಿ.ವಿ. ವೆಂಕಟಾಚಲ ಶಾಸ್ತ್ರಿ ಮಾತನಾಡಿ, ಯುವಕರು ಇತಿಹಾಸ ಸಂಶೋಧನೆಯತ್ತ
ಚಿತ್ತ ಹರಿಸಬೇಕಾಗಿದೆ. ಇತಿಹಾಸ ಅಕಾಡಮಿ ಜ್ಞಾನಾರ್ಜನೆಯ ಭಂಡಾರವಾಗಿದೆ. ಹೊಂಬುಜ ಜೈನ ಮಠವು ಅಳಿದುಳಿದ ಹಲವು ಶಾಸನಗಳನ್ನು ಪುನರುತ್ಥಾನಗೊಳಿಸುವ ಕೆಲಸ ಮಾಡುವುದರೊಂದಿಗೆ ಸಂಶೋಧನಾ ವಿದ್ಯಾರ್ಥಿಗಳಿಗೆ ಸುಲಭ ಮಾಡಿದೆ ಎಂದರು.

ಅಕಾಡೆಮಿ ಸದಸ್ಯರು ಬರೆದ ವಿವಿಧ ಪುಸ್ತಕಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಶಾರದಾ ಮತ್ತು ಅಂಜನಾ ಪ್ರಾರ್ಥಿಸಿದರು. ಜಿ.ಎಂ.ಮಂಜಪ್ಪ ಸ್ವಾಗತಿಸಿದರು. ಡಾ| ವಿ.ಸಂಧ್ಯಾ ನಿರೂಪಿಸಿದರು. ಪ್ರೊ| ಜಿ.ಕೆ.ದೇವರಾಜ ಸ್ವಾಮಿ ವಂದಿಸಿದರು.

ಟಾಪ್ ನ್ಯೂಸ್

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

1

Puttur: ತಮ್ಮನ ಹ*ತ್ಯೆ ಆರೋಪಿಗೆ ಜಾಮೀನು

9-mudhol

Mudhol: ನನ್ನ ಮೇಲಿನ ಆರೋಪ‌ ನಿರಾಧಾರ: ತಿಮ್ಮಾಪುರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

Brahmavar

Belthangady: ಆತ್ಮಹ*ತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.