ದುಬೈ ಕನ್ನಡಿಗರಿಂದ ಡಾ.ಸುಧಾಮೂರ್ತಿಗೆ ಕನ್ನಡ ರತ್ನ ಪ್ರಶಸ್ತಿ


Team Udayavani, Oct 31, 2019, 4:47 PM IST

Kannadigaru

ಬೆಂಗಳೂರು: ದುಬೈನಲ್ಲಿ ವಾಸವಾಗಿರುವ ಅನಿವಾಸಿ ಕನ್ನಡಿಗರು ನೀಡುವ ಕನ್ನಡ ರತ್ನ ಪ್ರಶಸ್ತಿಗೆ ಈ ವರ್ಷ ಇನ್ಪೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಭಾಜನರಾಗಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡಿಗರು ದುಬೈ ಮುಖ್ಯ ಸಂಚಾಲಕ ಮಲ್ಲಿಕಾರ್ಜುನ ಗೌಡ ಕರ್ನಾಟಕದ ನಾಡ ಹಬ್ಬ 64 ನೇ ‘ಕನ್ನಡ ರಾಜ್ಯೋತ್ಸವ’ ವನ್ನು ದುಬೈನಲ್ಲಿರುವ ಕನ್ನಡಿಗರು ಈ ಬಾರಿ ನವೆಂಬರ್ 08 ರಂದು ಆಚರಿಸುತ್ತಿದ್ದು, ಇದು 16ನೇ ದುಬೈ ಕನ್ನಡ ರಾಜ್ಯೋತ್ಸವವಾಗಿದ್ದು ಈ ಬಾರಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ನವೆಂಬರ್ 08ರಂದು ಸಂಜೆ 4.30 ಗಂಟೆಗೆ ದುಬೈ ಮೇದಾನ್ ನಾದ್ ಅಲ್ ಶೀಬಾದಲ್ಲಿರುವ ಹಾರ್ಟ್ ಲ್ಯಾಂಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕನ್ನಡಿಗರು ಒಟ್ಟುಗೂಡಿ ನಾಡಹಬ್ಬ ಆಚರಿಸಲಿದ್ದು ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಗೆ 2019ನೇ ಸಾಲಿನ ‘ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.

ದುಬೈನಲ್ಲಿ ಭಾರತದ ರಾಯಭಾರಿ ವಿಪುಲ್ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಗಿಲ್ 1999ರ ಯುದ್ಧದಲ್ಲಿ ಸೆಣೆಸಿದ ಸೇನಾಧಿಕಾರಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಅತಿಥಿಗಳಾಗಿದ್ದಾರೆ. ಮುಸ್ತಾಫಾ ಮಹಮ್ಮದ್, ಉದ್ಯಮಿ ಹಾಗೂ ಕನ್ನಡಿಗರು ದುಬೈ ಪೋಷಕರು, ಫಾರ್ಚ್ಯೂನ್ ಹೋಟೆಲ್ಸ್ ಗ್ರೂಪಿನ ನಿರ್ವಾಕ ನಿರ್ದೇಶಕರಾದ ರವೀಶ್ ಗೌಡ , ದರ್ಶನಿ ಮಂಜುನಾಥ್ ನೃತ್ಯ ದಿಷಾ ಟ್ರಸ್ಟ್ ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ಕನ್ನಡದ ಖ್ಯಾತ ರೇಡಿಯೊ ಮಿರ್ಚಿ ಹಾಗೂ ಕನ್ನಡ ಕೋಗಿಲೆ ನಿರೂಪಕಿಯಾದ ಆರ್ ಜೆ ಸಿರಿ ನೆರವೇಸಿಲ್ಲಿದ್ದಾರೆ. ಈ ಸಂದರ್ಭದಲ್ಲಿ ನೃತ್ಯ ದಿಷಾ ಟ್ರಸ್ಟ್ ಬೆಂಗಳೂರು ತಂಡದಿದ ಹಾಗೂ ಯುನೈಟೆಡ್ ಅರಬ್ ಎಮಿರೇಟಿನಲ್ಲಿ ನೆಲೆಸಿರುವ ಕನ್ನಡ ಶಾಲಾ ಮಕ್ಕಳು ನೃತ್ಯ, ಸಂಗೀತ ಹಾಗೂ ಮುಂತಾದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಂಜಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ಕನ್ನಡಿಗರು ದುಬೈ ಸಂಘದ ಮುಖ್ಯ ಸಂಚಾಲಕ ಮಲ್ಲಿಕಾರ್ಜುನ ಗೌಡ ಅವರು ತಿಳಿಸಿದ್ದಾರೆ. ಸಮಸ್ತ ಕನ್ನಡಿಗರು ಈ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಆಯೋಜಕರು ಕೋರಿದ್ದಾರೆ.

ಫಾರ್ಚೂನ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷರುಗಳಾದ ವೀರೇಂದ್ರ ಬಾಬು, ಸದನ್ ದಾಸ್, ಉಮಾ ವಿದ್ಯಾಧರ್, ಹಾಗು ಕನ್ನಡಿಗರು ದುಬೈ ಸಮಿತಿ ಸದಸ್ಯರುಗಳಾದ ಅರುಣ್ ಕುಮಾರ್, ದೀಪಕ್ ಸೋಮಶೇಖರ್, ಚಂದ್ರಕಾಂತ್ ಗೌಡ, ವಿಜಯ ಶಿವರುದ್ರಪ್ಪ, ಮಮತಾ ರಾಘವೇಂದ್ರ, ಮಲ್ಲಿಕಾರ್ಜುನ ಅಂಗಡಿ, ಶ್ರೀನಿವಾಸ್ ಅರಸ್, ವೆಂಕಟರಮಣ ಕಾಮತ್, ರಫೀಕಲಿ ಕೊಡಗು, ವಿನೀತ್ ರಾಜ್, ಮಧು ಗೌಡ, ಚಂದ್ರಶೇಖರ್ ಪೂಜಾರಿ ಹಾಜರಿದ್ದರು.

ಇಲ್ಲಿನ ಇತರ ಸಂಘ ಸಂಸ್ಥೆಗಳ ಪ್ರಮುಖರಾದ ಸತೀಶ್ ಹೈನ್ದರ್, ಪ್ರಕಾಶ್ ಪಯ್ಯಾರ್, ಮನೋಹರ್ ಹೆಗಡೆ, ಸುಗಂಧ ರಾಜ್ ಬೇಕಲ್, ಸುಮೀಂದ್ರ ಹೇಮಾದ್ರಿ, ಆಶಾ ಲಕ್ಷ್ಮಿ, ಖಲೀಲ್ ರಹ್ಮಾನ್ ಉದಯ್ ನಂಜಪ್ಪ, ಬಾನು ಕುಮಾರ್, ನಾಗರಾಜ್ ರಾವ್ ಹಾಜರಿದ್ದರು

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

99.jpg

ಗೋರೆಗಾಂವ್‌ ಕರ್ನಾಟಕ ಸಂಘ : ಕರ್ನಾಟಕ ರಾಜ್ಯೋತ್ಸವ ಆಚರಣೆ

01-Mum06a.jpg

ಕರ್ನಾಟಕ ಸಮಾಜ ಸೂರತ್‌:ಕರ್ನಾಟಕ ರಾಜ್ಯೋತ್ಸವ 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.