ನೆಲ್ಯಾಡಿ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಓರ್ವನ ಬಂಧನ
ಪೊಲೀಸರ ಕಾರ್ಯಾಚರಣೆ
Team Udayavani, Oct 19, 2019, 9:18 PM IST
ನೆಲ್ಯಾಡಿ: ಹಾಸನ ಕಡೆಯಿಂದ ಮಂಗಳೂರಿನ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದುದನ್ನು ಅ.19ರಂದು ಬೆಳಗ್ಗೆ ನೆಲ್ಯಾಡಿಯಲ್ಲಿ ಪತ್ತೆ ಹಚ್ಚಿದ ಪೊಲೀಸರು ಓರ್ವನನ್ನು ಬಂಧಿಸಿ, ಜಾನುವಾರು ಹಾಗೂ ಸಾಗಾಟಕ್ಕೆ ಬಳಸಿದ್ದ ಈಚರ್ ವಾಹನ ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು ತಾಲೂಕು ಶಾಂತಿಗುಡ್ಡೆ ನಿವಾಸಿ ಮೊಯಯಿದ್ದಿ ಎಂಬವರ ಮಗ, ಈಚರ್ ಚಾಲಕ ನವಾಜ್ (32)ಬಂಧಿತ. ಲಾರಿಯಲ್ಲಿದ್ದ ಹಸೈನಾರ್, ನಿಝಾರ್ ಜೋಕಟ್ಟೆ, ಹನೀಫ್ ಜೋಕಟ್ಟೆ, ಮುಸ್ತಾಕ್ ಅಡ್ಯಾರ್ ಕಣ್ಣೂರು ಎಂಬವರು ಪರಾರಿಯಾಗಿದ್ದಾರೆ.
ವಾಹನದಲ್ಲಿದ್ದ 17 ದನ, 3 ಗಂಡು ಕರು ಹಾಗೂ 2 ಎಮ್ಮೆ ಸೇರಿ ಒಟ್ಟು 22 ಜಾನುವಾರುಗಳನ್ನು ನೆಲ್ಯಾಡಿ ಹೊರ ಠಾಣಾ ಪೊಲೀಸರು ರಕ್ಷಿಸಿದ್ದಾರೆ. ಜಾನುವಾರುಗಳನ್ನು ಅಮಾನುಷವಾಗಿ ತುಂಬಿಸಲಾಗಿದ್ದು, ಪರಿಣಾಮ 1 ಜಾನುವಾರು ಉಸಿರುಗಟ್ಟಿ ಮೃತಪಟ್ಟಿದೆ.
ಘಟನೆ ವಿವರ:
ಶನಿವಾರ ಬೆಳಗ್ಗೆ ಸುಮಾರು 6 ಗಂಟೆಗೆ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಈ ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಧಿಕ್ಕರಿಸಿ ಮಂಗಳೂರು ಕಡೆಗೆ ವೇಗವಾಗಿ ಸಾಗಿದೆ. ಅನುಮಾನಗೊಂಡ ಚೆಕ್‌ಪೋಸ್ಟ್ ಸಿಬಂದಿ ನೆಲ್ಯಾಡಿ ಹೊರಠಾಣೆಯ ಎಸ್‌ಐ ಸೀತಾರಾಮ ಗೌಡರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಸ್‌ಐ ಹಾಗೂ ಕಾನ್‌ಸ್ಟೆಬಲ್ ಪ್ರತಾಪ್ ಅವರು ಈಚರ್ ಲಾರಿಯನ್ನು ನೆಲ್ಯಾಡಿಯಲ್ಲಿ ತಡೆಯಲು ಮುಂದಾದರು. ಅಲ್ಲಿಂದಲೂ ತಪ್ಪಿಸಿಕೊಂಡು ಪರಾರಿಯಾದ ವಾಹನವನ್ನು ಪೊಲೀಸರು ಬೆನ್ನಟ್ಟಿಕೊಂಡು ಹೋಗಿ ಕೊಣಾಲು ಗ್ರಾಮದ ಕೋಲ್ಪೆಯಲ್ಲಿ ತಡೆಯುವಲ್ಲಿ ಸಫಲರಾದರು.
ಜಾನುವಾರುಗಳನ್ನು ನೆಲ್ಯಾಡಿ ಹೊರಠಾಣೆಗೆ ತಂದು ಆರೈಕೆ ಮಾಡಲಾಗುತ್ತಿದೆ.ಎರಡು ವಾರದ ಹಿಂದೆಯೂ ನೆಲ್ಯಾಡಿ ಹೊರಠಾಣೆ ಪೊಲೀಸರು ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಸಮೀಪದ ಈಚರ್ ಲಾರಿಯೊಂದನ್ನು ತಡೆದು 20ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದ್ದರು.
ನಿರಂತರ ನಡೆಯುತ್ತಿದೆ ಅಕ್ರಮ ದನಸಾಗಾಟ:
ಒಂದೆಡೆ ಪೊಲೀಸರ ಕಾರ್ಯಾಚರಣೆುಂದ ಅಕ್ರಮ ಸಾಗಾಟಗಳನ್ನು ಪತ್ತೆಹಚ್ಚುವ ಘಟನೆ ನಡೆಯುತ್ತಿದ್ದ ಹಾಗೆಯೇ ಅಕ್ರಮ ಸಾಗಾಟಗಾರರು ಐಶಾರಾಮಿ ವಾಹನಗಳಲ್ಲಿ ಅಮಾನುಷವಾಗಿ ತುಂಬಿಸಿಕೊಂಡು ಹೋಗುವ ಘಟನೆಗಳು ನಡೆಯುತ್ತಿದ್ದು ಇದನ್ನು ಪತ್ತೆ ಮಾಡುವುದೂ ಕೂಡಾ ಸವಾಲಿನ ಕಾರ್ಯವೇ ಆಗಿದೆ. ವಶಪಡಿಸಿಕೊಂಡ ವಾಹನಗಳು ಹಾಗೂ ಆರೋಪಿಗಳು ತಕ್ಷಣ ಜಾಮೀನಿನ ಮೇಲೆ ಹೊರಬರುತ್ತಿದ್ದು ಮತ್ತೆ ಅದೇ ಚಾಳಿ ಮುಂದುವರಿಸುತ್ತಿದ್ದಾರೆ ಎಂದು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಕ್ರಮವಾಗಿ ಸಾಗಾಟಕ್ಕೆ ಬಳಸಲಾಗುವ ವಾಹನಗಳ ದಾಖಲೆ ಪತ್ರಗಳನ್ನು ಬೇರೊಂದು ವ್ಯಕ್ತಿಗೆ ಜಿಪಿಎ ಮಾಡಿಕೊಳ್ಳುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಕ್ಷಣ ವಾಹನಗಳನ್ನು ಬಿಡುಗಡೆಗೊಳಿಸಿ ಮತ್ತದೇ ದಂಧೆಗೆ ಬಳಸಲಾಗುತ್ತಿದೆ ಅನ್ನು ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಕ್ರಮ ಸಾಗಾಟ ನಡೆದಾಗ ಆರೋಪಿಗಳ ಹಾಗೂ ವಾಹನದ ಮೇಲೆ ಕಠಿಣ ಸೆಕ್ಷನ್ ಹಾಕಿ ವಾಹನ ಬಿಡುಗಡೆಯಾಗದಂತೆ ಕ್ರಮ ತೆಗೆದುಕೊಂಡಲ್ಲಿ ಮಾತ್ರ ಅಕ್ರಮ ಸಾಗಾಟ ನಿಯಂತ್ರಣಕ್ಕೆ ಬರಬಹುದಷ್ಟೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.