ವರ ಹುಡುಕಿಕೊಡದ ಮ್ಯಾಟ್ರಿಮನಿ ವೆಬ್ಗೆ ದಂಡ!
Team Udayavani, Oct 19, 2019, 9:50 PM IST
ಸಾಂದರ್ಭಿಕ ಚಿತ್ರ.
ನವದೆಹಲಿ: ಹರ್ಯಾಣ ವ್ಯಕ್ತಿಯೊಬ್ಬರ ಪುತ್ರಿಗೆ ಸೂಕ್ತ ಸಂಗಾತಿ ಹುಡುಕಿಕೊಡದ ಮ್ಯಾಟ್ರಿಮನಿ ಜಾಲತಾಣವೊಂದಕ್ಕೆ ಚಂಡೀಗಢ ಗ್ರಾಹಕರ ವೇದಿಕೆ 62,000 ರೂ. ದಂಡ ವಿಧಿಸಿದೆ.
ಹರ್ಯಾಣದ ಸುರೇಂದ್ರ ಪಾಲ್ ಸಿಂಗ್ ಚಾಹಲ್ ದಂಪತಿಯು, ವೈದ್ಯೆಯಾಗಿರುವ ಹಾಗೂ ಮಂಗಳದೋಷವುಳ್ಳ ತಮ್ಮ ಪುತ್ರಿಗಾಗಿ “ವೆಡ್ಡಿಂಗ್ ವಿಶ್’ ಎಂಬ ಖಾಸಗಿ ವಧು-ವರ ಅನ್ವೇಷಣೆ ವೆಬ್ಸೈಟ್ನಲ್ಲಿ ಗಂಡು ಹುಡುಕಲು ಮುಂದಾಗಿದ್ದರು. ವೆಬ್ಸೈಟ್ನ ಪ್ರತಿನಿಧಿಗಳ ಸೂಚನೆಯಂತೆ, ದಂಪತಿಯು ವೆಬ್ಸೈಟ್ನ 50,000 ರೂ. ಮೌಲ್ಯದ ರಾಯಲ್ ಪ್ಯಾಕೇಜ್ಗೆ ಚಂದಾದಾರರಾಗಿದ್ದರು. ಅದರಡಿ ಬಂದ ಗಂಡುಗಳ ಪ್ರೊಫೈಲ್ಗಳು ಅವರ ಮಗಳ ವಿದ್ಯಾರ್ಹತೆ, ಉದ್ಯೋಗಕ್ಕೆ ಸರಿಹೊಂದಲೇ ಇಲ್ಲ. ಹಾಗಾಗಿ, ಹಣ ವಾಪಸ್ ಕೊಡುವಂತೆ ದಂಪತಿ, ವೆಬ್ಸೈಟ್ಗೆ ಲಾಯರ್ ನೋಟಿಸ್ ಕಳಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ಬಂದಿರಲಿಲ್ಲ. ಹಾಗಾಗಿ, ಅವರು ಚಂಡೀಗಢ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.