ನಿಖತ್ ನನಗೆ ಸ್ಪರ್ಧಿಯೇ ಅಲ್ಲ: ಮೇರಿ ಕೋಮ್
Team Udayavani, Oct 20, 2019, 5:44 AM IST
ಹೊಸದಿಲ್ಲಿ: ಖ್ಯಾತ ಬಾಕ್ಸರ್ ಮೇರಿ ಕೋಮ್‌ಗೆ ಚೀನ ದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಸುತ್ತಿಗೆ ನೇರ ಪ್ರವೇಶ ನೀಡಿದ ಬಿಎಫ್ಐ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. 51 ಕೆ.ಜಿ. ವಿಭಾಗದ ಮತ್ತೋರ್ವ ಬಾಕ್ಸರ್ ನಿಖತ್ ಜರೀನ್ ಇದರ ವಿರುದ್ಧ ಕ್ರೀಡಾ ಸಚಿವರಿಗೆ ದೂರು ನೀಡಿದ ಬೆನ್ನಲ್ಲೇ ಮೇರಿ ಕೋಮ್ ಕೂಡ ಮಾತನಾಡಿದ್ದಾರೆ.
ಬಿಎಫ್ಐ ತೆಗೆದುಕೊಂಡಿರುವ ನಿರ್ಧಾರ ಹಾಗೂ ತನ್ನ ಆಯ್ಕೆಯನ್ನು ಮೇರಿ ಕೋಮ್ ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲ ನಿಖತ್ ಅವರನ್ನು ಹಲವು ಸಲ ಸೋಲಿಸಿದ್ದು, ಆಕೆ ತನಗೊಬ್ಬ ಸ್ಪರ್ಧಿಯೇ ಅಲ್ಲ ಎಂದಿದ್ದಾರೆ.
ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಮೇರಿ ಕೋಮ್, “ನಿರ್ಧಾರ ತೆಗೆದುಕೊಂಡಿರುವುದು ಭಾರತೀಯ ಬಾಕ್ಸಿಂಗ್ ಒಕ್ಕೂಟ. ಆ ನಿಯಮ ಮೀರುವುದಿಲ್ಲ. ನಾನು ಮುಂದಿನ ಪ್ರದರ್ಶನ ಬಗ್ಗೆ ಮಾತ್ರ ಯೋಚಿಸಿದ್ದೇನೆ’ ಎಂದರು.
ಬಿಎಫ್ಐ ಪಾರದರ್ಶಕ ಕ್ರಮ
“ಆಯ್ಕೆ ಟ್ರಯಲ್ಸ್‌ನಲ್ಲಿ ನಿಖತ್ ಎದುರಿಸಲು ನನಗೇನೂ ಭಯವಿಲ್ಲ. ಸ್ಯಾಫ್ ಗೇಮ್ ಸೇರಿದಂತೆ ಇತರ ಕೂಟಗಳಲ್ಲಿ ಆಕೆಯನ್ನು ಅನೇಕ ಸಲ ಸೋಲಿಸಿದ್ದೇನೆ. ಹೀಗಿದ್ದರೂ ಆಕೆ ನನ್ನ ವಿರುದ್ಧ ಸವಾಲೆಸೆಯುತ್ತಿದ್ದಾಳೆ.
ಮುಂದಿನ ಒಲಿಂಪಿಕ್ಸ್‌ನಲ್ಲಿ ಯಾರು ಪದಕ ತರಬಲ್ಲರು ಎನ್ನುವುದು ಬಿಎಫ್ಐಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಬಿಎಫ್ಐ ಪಾರದರ್ಶಕ ಕ್ರಮ ತೆಗೆದುಕೊಂಡಿದೆ’ ಎಂದು ಮೇರಿ ಕೋಮ್ ತಿಳಿಸಿದ್ದಾರೆ.
ಆಯ್ಕೆ ಪರೀಕ್ಷೆ ನಡೆಸದೆ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ಮೇರಿ ಕೋಮ್‌ಗೆ ಬಿಎಫ್ಐ ನೇರ ಅವಕಾಶ ನೀಡಿದೆ. ನನ್ನ ಅವಕಾಶವನ್ನು ಕಿತ್ತುಕೊಂಡಿದೆ ಎಂದು ಕ್ರೀಡಾ ಸಚಿವ ರಿಜಿಜುಗೆ ನಿಖತ್ ಪತ್ರ ಬರೆದಿದ್ದರು. ಇದು ಬಾಕ್ಸಿಂಗ್ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಬಿಂದ್ರಾ ತಮ್ಮ ಪಾಡಿಗೆ ಇರಲಿ
“ಬಾಕ್ಸಿಂಗ್ ನಿಯಮ ಗೊತ್ತಿಲ್ಲದಿದ್ದರೆ ತಮ್ಮ ಪಾಡಿಗೆ ತಾವು ಇರುವುದು ಒಳ್ಳೆಯದು’ ಎಂದು ನಿಖತ್ ಜರೀನ್ ಪರ ಬ್ಯಾಟ್ ಮಾಡಿದ್ದ ಒಲಿಂಪಿಯನ್ ಶೂಟರ್ ಅಭಿನವ್ ಬಿಂದ್ರಾಗೆ ಮೇರಿ ಕೋಮ್ ತಿರುಗೇಟು ನೀಡಿದ್ದಾರೆ.
“ಬಿಂದ್ರಾರಂತೆ ನಾನೂ ಪದಕ ಗೆದ್ದವಳು, ಹಲವು ಸಲ ವಿಶ್ವ ಚಾಂಪಿಯನ್ ಆಗಿದ್ದೇನೆ. ನಿಯಮ ಗೊತ್ತಿಲ್ಲದಿದ್ದರೆ ಬಾಕ್ಸಿಂಗ್ ವಿಷಯದಲ್ಲಿ ಅನಗತ್ಯ ತಲೆ ಹಾಕಬೇಡಿ, ಇದು ನಿಮಗೆ ಸಂಬಂಧಪಡದ ವಿಷಯ’ ಎಂದು ಮೇರಿ ಕೋಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.