ಬೆಳ್ತಂಗಡಿ: ಬದುಕು ಕಟ್ಟಿಕೊಟ್ಟ ಶ್ರಮದಾನಿಗಳು

ಪ್ರವಾಹ ಪೀಡಿತ ಕೊಳಂಬೆ, ಅಂತರ ಈಗ ಹಚ್ಚ ಹಸುರು, ಸ್ವಚ್ಛ ಊರು

Team Udayavani, Oct 20, 2019, 5:30 AM IST

c-46

ಕೊಳಂಬೆಯಲ್ಲಿ ಗದ್ದೆಯಲ್ಲಿ ತುಂಬಿದ್ದ ಮರಳು, ಕೊಳಚೆಯನ್ನು ತೆಗೆದುಹಾಕಿ ನೇಜಿ ನಾಟಿಗೆ ಸಿದ್ಧತೆ ನಡೆಸಲಾಯಿತು.

ಬೆಳ್ತಂಗಡಿ: ಎರಡೂವರೆ ತಿಂಗಳ ಹಿಂದೆ ಮಹಾಮಳೆಯಿಂದ ರೂಪುಗೆಟ್ಟಿದ್ದ ಬೆಳ್ತಂಗಡಿ ತಾಲೂಕಿನ ಕೆಲವು ಭಾಗಗಳನ್ನು ಉಜಿರೆಯ ಉತ್ಸಾಹಿ ತಂಡ ಮರುನಿರ್ಮಿಸಿ ಬದುಕು ಕೊನರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಅ.9ರಂದು ಚಾರ್ಮಾಡಿ ತಾಲೂಕಿನ ಕೊಳಂಬೆ ಪ್ರದೇಶದಲ್ಲಿ ಮೃತ್ಯುಂಜಯ ನದಿ ಉಕ್ಕಿ ಹರಿದು ಕೊಳಂಬೆ ಅಂತರದ ಗದ್ದೆಗಳಲ್ಲಿ 2ರಿಂದ 4 ಅಡಿ ಮರಳು ಆವರಿಸಿತ್ತು. ಸುತ್ತಮುತ್ತಲಿದ್ದ 22 ಮನೆಗಳ ಪೈಕಿ ಎರಡು ಸಂಪೂರ್ಣ ಕುಸಿದಿದ್ದವು, ಒಂದು ಮನೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಇವರೆಲ್ಲರ ಬದುಕನ್ನು ಮತ್ತೆ ಹಳಿಗೆ ತರಲು ಉಜಿರೆ ಉದ್ಯಮಿಗಳಾದ ಮೋಹನ್‌ ಕುಮಾರ್‌ ಮತ್ತು ರಾಜೇಶ್‌ ಪೈ ತಂಡ ಶ್ರಮಿಸಿದೆ.

ಸ್ವಾತಂತ್ರ್ಯೋತ್ಸವದಂದು ಚಾಲನೆ
ಮೋಹನ್‌ಕುಮಾರ್‌ ಮತ್ತು ರಾಜೇಶ್‌ ಪೈ ಸುಮಾರು 500ಕ್ಕೂ ಹೆಚ್ಚು ಯುವಕರ ತಂಡ ಕಟ್ಟಿಕೊಂಡು ಅ.15ರಂದು ಪುನರ್‌ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಪ್ರತಿ ರವಿವಾರದಂತೆ ಒಟ್ಟು ಸುಮಾರು 2 ಸಾವಿರ ಮಂದಿ ಕೂಲಿಯಾಳುಗಳು, 2,500 ವಿವಿಧ ಸಂಘ ಸಂಸ್ಥೆಗಳ ಸೇವಕರ ಕರ ಸೇವೆ ನಡೆಸಲಾಗಿದೆ. ಕೊಳಂಬೆ ಮತ್ತು ಅಂತರದ 70 ಎಕರೆ ಪ್ರದೇಶದ ಚಿತ್ರಣವನ್ನೇ ಅವರು ಬದಲಾಯಿಸಿದ್ದಾರೆ. ರಾಶಿಬಿದ್ದ ಮರಮಟ್ಟು ತೆರವಾಗಿದೆ, ಗದ್ದೆಗಳಲ್ಲಿ ಹರಡಿದ್ದ ಮರಳು ತೆಗೆದು ಉತ್ತು ಬಿತ್ತಿ ಹಚ್ಚ ಹಸುರಾಗಿದೆ. ಈಗಾಗಲೇ ನೂರು ಬಾಳೆ ಗಿಡಗಳು, 50 ಬುಡ ಬಸಳೆ, 20 ಸಾಲು ಅಲಸಂಡೆ, 12 ಸಾಲು ಸೌತೆ, 25 ಬುಡ ತೊಂಡೆ, 50 ಬದನೆ ಗಿಡ ನಾಟಿ ಮಾಡಿದ್ದಾರೆ.

ಅ.20ರಂದು ಸಮಾರೋಪ
ಸುಮಾರು ಎರಡು ತಿಂಗಳ ಕಾಲ ನಡೆದ ಪುನರ್‌ನಿರ್ಮಾಣ ಶ್ರಮದಾನಕ್ಕೆ ಅ.20ರಂದು ಏಕಕಾಲದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. 6 ತಿಂಗಳಲ್ಲಿ ಊರು ಮರುನಿರ್ಮಾಣದ ಪಣ ತೊಟ್ಟಿದ್ದ ಉದ್ಯಮಿಗಳು ಕೇವಲ 2 ತಿಂಗಳಲ್ಲೇ ಇದನ್ನು ಸಾಧಿಸಿದ್ದಾರೆ. ಸರಕಾರದಿಂದ ಸಾಧ್ಯವಾಗದ್ದು ಸಮಾಜದಿಂದ ಕೈಗೂಡಿದೆ. ಅ.20ರಂದು ಶಾಸಕರು, ಪತ್ರಕರ್ತರು, ಸಾರ್ವಜನಿಕರು, ಸಂಘಸಂಸ್ಥೆಗಳು, ದಾನಿಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ 1 ಸಾವಿರ ಅಡಿಕೆ ಗಿಡ, 300 ತೆಂಗು, 100 ಬಾಳೆ, 150 ಹಲಸು, ಮಾವು, ಪೇರಳೆ ಸಹಿತ ಫಲವಸ್ತುಗಳ ಗಿಡ ನೆಡಲಾಗುತ್ತದೆ. ಬಳಿಕ ಸುಮಾರು 5 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ಹದ ಮಾಡಿದ 17 ಗದ್ದೆಗಳಲ್ಲಿ ನೇಜಿ ನಾಟಿ ಮಾಡಿ ಪ್ರವಾಹ ಸಂತ್ರಸ್ತರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಮೋಹನ್‌ ಕುಮಾರ್‌ ಮತ್ತು ರಾಜೇಶ್‌ ಪೈ ತಿಳಿಸಿದ್ದಾರೆ.

ಫರ್ಲಾನಿಯಲ್ಲಿ ಬದಲಾಗದ ಚಿತ್ರಣ
ಇದೇ ಗ್ರಾಮದ ಫರ್ಲಾನಿ ಪ್ರದೇಶದ ಚಿತ್ರಣ ಮಾತ್ರ ಹೇಳತೀರದಂತಿದೆ. ಅಡಿಕೆ ಮರಗಳ ಬುಡ 5 ಅಡಿಗಳಷ್ಟು ಮರಳಿನಿಂದ ಆವೃತವಾಗಿದೆ.ಇಲ್ಲಿನ ಡೀಕಯ್ಯ ಗೌಡ, ಗಣೇಶ್‌, ರಮಾನಂದ್‌, ಸುಧಾಕರ್‌, ಉಮನ ಗೌಡ ಅವರ 4 ಎಕ್ರೆ ತೋಟ ನೆರೆ ಹಾವಳಿಗೆ ತುತ್ತಾಗಿ 65 ದಿನಗಳಾದರೂ ಒಂದು ಹುಲ್ಲುಕಡ್ಡಿಯನ್ನೂ ಸ್ಥಳೀಯಾಡಳಿತದಿಂದ ತೆರವು ಮಾಡಲಾಗಿಲ್ಲ. ಒಂದು ಎಕ್ರೆಯಲ್ಲಿ 6 ವರ್ಷದ ಫಲಭರಿತ ಕನಿಷ್ಠ 400 ಅಡಿಕೆ ಗಿಡಗಳಿವೆ. ಇವೆಲ್ಲವನ್ನು ಕಳೆದುಕೊಂಡ ಈ ಪ್ರದೇಶದ ಮಂದಿಗೆ ಪಂಚಾಯತ್‌ ಉಚಿತವಾಗಿ ಮರಳು ತೆರವುಗೊಳಿಸುವ ಬದಲು 8 ಸಾವಿರ ರೂ. ಬಿಲ್‌ ನೀಡಿ ಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಾನಿ
ಕೊಳಂಬೆ : 21 ಮನೆ,
40 ಎಕ್ರೆ ಕೃಷಿ ಪ್ರದೇಶ
ಅಂತರ : 16 ಮನೆ,
30 ಎಕ್ರೆ ಕೃಷಿ ಪ್ರದೇಶ

ಕಾಮಗಾರಿ
2 ಹಿಟಾಚಿ 20 ದಿವಸ
1 ಟಿಲ್ಲರ್‌ 50 ಗಂಟೆ

ಶ್ರಮದಾನ
ಕೂಲಿಯಾಳು 2,000, ಸ್ವಯಂಸೇವಕರು 2,500

– ಗ್ರಾಮಾಭಿವೃದ್ಧಿ ಯೋಜನೆ ಸ್ವಯಂ ಸೇವಕರು, ಉಜಿರೆ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳು, ಉಳಿದ ಸಂಘಟನೆಗಳ ನಿರಂತರ ಪ್ರಯತ್ನ
– 30 ಲಕ್ಷ ರೂ. ಅಧಿಕ ಕಾಮಗಾರಿ
– ಗದ್ದೆ, ತರಕಾರಿ ಕೃಷಿ, ನೀರು ಹರಿಯುವ ಕಣಿ ಮರುನಿರ್ಮಾಣ, ತೆಂಗಿನ ಮರ ಬುಡ ಸ್ವಚ್ಛ, ನೇಜಿ ನಾಟಿ, ಮನೆ ಸ್ವಚ್ಛ

ಸಮಾಜದಲ್ಲಿ ಒಂದಷ್ಟು ಪರಿವರ್ತನೆ ಯಾಗಬೇಕೆಂಬ ಹಂಬಲದಿಂದ ಉದ್ಯಮಿಗಳು ತಂಡ ಕಟ್ಟಿಕೊಂಡು ಯುವಕರ ಸಹಾಯದಿಂದ ಪ್ರವಾಹ ಪ್ರದೇಶ ಮರುಸೃಷ್ಟಿಸಿದ್ದಾರೆ. ಇದು ಮಾದರಿ ಮತ್ತು ಅನುಕರಣೀಯ. ಅವರ ನಿಸ್ವಾರ್ಥ ಸೇವೆಯನ್ನು ಸರಕಾರವು ಶ್ಲಾಘಿಸಬೇಕಿದೆ.
– ಹರೀಶ್‌ ಪೂಂಜ, ಶಾಸಕರು

ನಮ್ಮ ಕನಸು ಸಾಕಾರಗೊಂಡಿದೆ. ನಮಗೆ ದೇವರು ಕರುಣಿಸಿದ್ದರಲ್ಲಿ ಕಿಂಚಿತ್ತನ್ನು ನಾವು ಸಂತ್ರಸ್ತರ ಬಾಳಿಗೆ ಬೆಳಕಾಗಿ ನೀಡಿದ್ದೇವೆ. ಅ.20ರಂದು ಸಮಾರೋಪ ಹಮ್ಮಿಕೊಂಡಿದ್ದು ಅಂದು 200 ಮಹಿಳೆಯರು, 350 ಸ್ವಯಂ ಸೇವಕರಿಂದ ಏಕಕಾಲದಲ್ಲಿ ಶ್ರ ಮದಾನ ಸಮಾಪನಗೊಳ್ಳಲಿದೆ. ಆರಂಭದಲ್ಲಿ ನಾಲ್ಕು ತಿಂಗಳು ಎಂದು ಅಂದಾಜಿಸಲಾಗಿತ್ತು, ಆದರೆ ಪ್ರಸಕ್ತ ಎಲ್ಲರ ಸಹಕಾರದಿಂದ ಎರಡೇ ತಿಂಗಳಲ್ಲಿ ಪೂರ್ಣಗೊಳಿಸಿರುವ ಖುಷಿ ನಮಗಿದೆ.
– ಮೋಹನ್‌ ಕುಮಾರ್‌, ಉಜಿರೆ ಲಕ್ಷ್ಮೀ ಗ್ರೂಪ್‌

– ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ

Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ

Canada Court: ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Canada Court:ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ

2

Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು

1

Bantwal: ಕಲ್ಲಡ್ಕ ಫ್ಲೈಓವರ್‌; ಪೂರ್ಣತೆಯತ್ತ; ಕಾಂಕ್ರೀಟ್‌ ಕಾಮಗಾರಿ ಪ್ರಗತಿ

4-aryabhata

ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

9-uv-fusion

Smile: ಚಿಂತೆಯನ್ನು ದೂರಮಾಡಿ ಒಮ್ಮೆ ನೀ ನಗು

8-uv-fusion

Students: ಹಾಸ್ಟೆಲ್‌ ಜೀವನ ಸ್ನೇಹ, ಪಾಠ ಲೋಕ

7-uv-fusion

UV Fusion: ವಾಸ್ತವದ ಗೂಡಲ್ಲಿ ಭಾವಸೆಲೆ ಅರಳಲಿ

SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ

SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.