ಯುವ ಬ್ರಿಗೇಡ್ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ
Team Udayavani, Oct 21, 2019, 6:22 PM IST
ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಪಟ್ಟಣದ ಯುವ ಬ್ರಿಗೇಡ್‌ನ ಯುವಕರು ಜಿಲ್ಲಾದ್ಯಂತ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಸ್ವತ್ಛ ಭಾರತ ಅಭಿಯಾನವನ್ನು ಬಲಪಡಿಸಿದ್ದಾರೆ. ಈ ಮೂಲಕ ವ್ಯರ್ಥ ಕಾಲಹರಣ ಮಾಡುವ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ಪಟ್ಟಣದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ 2017ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು, ಅನೈರ್ಮಲ್ಯವನ್ನು ಬೇರು ಸಮೇತ ಕಿತ್ತೆಸೆಯುವ ಕಾರ್ಯಕ್ಕೆ ಕೈ ಹಾಕಿದೆ. ವೇದಿಕೆಗಳ ಮೇಲೆ ಮೈಕ್ ಹಿಡಿದು ಭಾಷಣ ಮಾಡುವುದರಿಂದ ಈ ಸಮಸ್ಯೆ ನಿರ್ಮೂಲನೆ ಆಗುವುದಿಲ್ಲ. ವೈಯಕ್ತಿಕ ಪ್ರತಿಷ್ಠೆ ಬದಿಗೊತ್ತಿ ರಾಷ್ಟ ಪ್ರಗತಿಯನ್ನು ಪ್ರತಿಷ್ಠೆಯಾಗಿಸಿಕೊಂಡಾಗಲೇ ದೇಶದ ನಿಜವಾದ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತ 50 ಸದಸ್ಯರನ್ನು ಒಳಗೊಂಡ ತಂಡ ನಿರಂತರ ಕಾರ್ಯದಲ್ಲಿ ತೊಡಗಿದೆ.
ಒಂದು ವರ್ಷದ ಹಿಂದೆ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಗಿಡಗಂಟೆ ಸೇರಿದಂತೆ ಇತರೆ ತ್ಯಾಜ್ಯ ತೆರವುಗೊಳಿಸಿತ್ತು. ಅದಾದ ನಂತರ ಮಾಣಿಕನಗರದಲ್ಲಿನ ಮಾಣಿಕ ಸರೋವರದಲ್ಲಿ ಸಂಗ್ರಹಗೊಂಡ ತ್ಯಾಜ್ಯವನ್ನು ಈ ತಂಡ ಸ್ವತ್ಛಗೊಳಿಸಿತ್ತು. ಭವಾನಿ ದೇವಸ್ಥಾನ ಪ್ರಾಂಗಣ, ವೀರಭದ್ರೇಶ್ವರ ದೇವಸ್ಥಾನ ಪ್ರಾಂಗಣ, ಈಚೆಗಷ್ಟೇ ಡಾ|ಬಿ. ಆರ್.ಅಂಬೇಡ್ಕರ್ ವೃತ್ತ ಸಮೀಪದ ಜೋಡು ಬಸವಣ್ಣ ಕಟ್ಟೆ ಆಸುಪಾಸು ಸಂಗ್ರಹಗೊಂಡ ತ್ಯಾಜ್ಯ ತೆರವುಗೊಳಿಸಿದ್ದರು.
ಸರ್ಕಾರಿ ಆಸ್ಪತ್ರೆ ಪ್ರಾಂಗಣ, ಮಾಣಿಕನಗರದ ಸಂಗಮ ಪುಷ್ಕರಣಿ ಸೇರಿದಂತೆ ಅನೇಕ ಕಡೆ ಇಂಥ ಕೆಲಸ ಮಾಡಿ ಪ್ರಜ್ಞಾವಂತ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಈ ತಂಡದ 50ಕ್ಕೂ ಅಧಿಕ ಕಾರ್ಯಕರ್ತರು ರವಿವಾರ, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಅಲ್ಲಲ್ಲಿ ಬಿದ್ದ ದೇವರ ಚಿತ್ರಗಳನ್ನು ಸಂಗ್ರಹಿಸಿ ಗುಂಡಿ ತೋಡಿ ಹೂಳುವ ಮೂಲಕ ಅಲ್ಲಿ ಸಸಿಯನ್ನೂ ನೆಟ್ಟಿದ್ದಾರೆ.
ಚಕ್ರವರ್ತಿ ಜತೆ ಕೈ ಜೋಡಿಸಿದ ತಂಡ: ರಾಜ್ಯದಲ್ಲಿ ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ 2018ರಲ್ಲಿ ನಡೆದ ನದಿ ಸ್ವತ್ಛತೆ ವೇಳೆ ಕಾವೇರಿ, ಭೀಮೆ ಸೇರಿದಂತೆ ರಾಜ್ಯದ ಇತರೆ ನದಿಗಳ ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸೂಲಿಬೆಲೆ ಅವರ ವಿಶ್ವಾಸಕ್ಕೂ ಪಾತ್ರವಾಗಿದೆ.
ಕರೆದಾಗ ರಾಜ್ಯದ ಯಾವುದೇ ಮೂಲೆಗೆ ಬಂದು ನನ್ನೊಂದಿಗೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಹುಮನಾಬಾದ (ಜಯಸಿಂಹನಗರ) ಯುವಕರ ಕಾರ್ಯ ಪ್ರಶಂಸನೀಯ ಎಂದು ನಗರದಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ತಂಡವನ್ನು ಶ್ಲಾಘಿಸಿದ್ದರು.
ಈ ಕಾರ್ಯದಲ್ಲಿ ಪ್ರಮುಖ ಪದಾ ಧಿಕಾರಿಗಳಾದ ತಾಲೂಕು ಸಂಚಾಲಕ ಪ್ರಶಾಂತ ಶೇರಿಕಾರ, ಸಹ ಸಂಚಾಲಕ ಅಮೀತ ವರ್ಮಾ, ಕಾಶಿನಾಥ ರಾಂಪೂರೆ, ವಿಕ್ರಂ ಶಂಭುಶಂಕರ, ರಂಜಿತ್ ಮೇತ್ರೆ, ಕರಬಸಪ್ಪ ಛತ್ರಿ, ದಿಲೀಪ ಪಂಚಾಳ, ಅನೀಲರೆಡ್ಡಿ, ಬಲರಾಮ ಪೋಲ್ದಾಸ್, ಸಂತೋಷ ಜಮಾದಾರ, ಗೋಪಿ ಗುಪ್ತಾ, ಬಸವರಾಜ ಅಷ್ಟಗಿ, ನಿಲೇಶ ಪುಟಾಣಗಾರ, ಪ್ರಕಾಶ ಬಾವಗಿ, ಪ್ರಸಾದ ಸ್ವಾಮಿ, ಸುದರ್ಶ ಕಾಳಗಿ, ಬಾಲರೆಡ್ಡಿ ಯಾಚಾ, ಮಾಣಿಕ ರಾಜನಾಳೆ, ಅಶೊತೋಷ ಜಾಜಿ ಸೇರಿದಂತೆ 50ಕ್ಕೂ ಅಧಿಕ ಯುವಕರ ತಂಡ ಈ ಕಾರ್ಯದಲ್ಲಿ ತೊಡಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.