ಐಒಟಿ ಜಾಬ್ ಗ್ಯಾರಂಟಿ
Team Udayavani, Oct 22, 2019, 4:05 AM IST
ನಾಯಕ ನಟ ಗಣೇಶ್ ಅವರ ಮನೆಯಲ್ಲಿ ಕೂತರೆ, ನೀವು ಮನೆಯ ರೂಮು, ಹಾಲು, ಅಡುಗೆ ಮನೆ ಹೀಗೆ ಎಲ್ಲದರ ಬಾಗಿಲುಗಳನ್ನು ಕುಂತಲ್ಲೇ ಹಾಕಬಹುದು, ತೆರೆಯಬಹುದು. ಇದು ಇವತ್ತಿನ ಹೊಸ ಟೆಕ್ನಾಲಜಿ. ಇದೇ ಸ್ವಲ್ಪ ಮುಂದುವರಿದು, ಕಚೇರಿಯಲ್ಲಿ ಕೂತು ಮನೆಯಲ್ಲಿ ಗ್ಯಾಸ್, ಲೈಟ್ ಆಫ್ ಮಾಡಿಲ್ಲವೇ ಅಂತ ಚೆಕ್ ಮಾಡಬಹುದು. ಇದಕ್ಕೆ 5ಜಿ ಟೆಕ್ನಾಲಜಿ ಬೇಕು. ಅದನ್ನು ಅಳವಡಿಸಿಕೊಳ್ಳಲು ಎಲ್ಲ ಕಂಪೆನಿಗಳೂ ಈಗಾಗಲೇ ತಯಾರಿ ಮಾಡಿಕೊಂಡಿರುವುದರಿಂದ, ಎಂ.ಎಸ್.ಯು ಅನ್ನೋ ಕೋರ್ಸ್ ಕೂಡ ಆರಂಭವಾಗಿದೆ. ಇದನ್ನು ಕಲಿತವರಿಗೆ ಉದ್ಯೋಗವಕಾಶಗಳು ಬಾಗಿಲು ತೆರೆಯುತಲಿದೆ.
ಕೆಲಸಕ್ಕಾಗಿ ಮನೆಯಿಂದ ಹೊರಟು ಕಚೇರಿ ತಲುಪಿದ ಮೇಲೆ, ಗೀಸರ್ ಆಫ್ ಮಾಡದೆ ಬಂದಿರುವುದು ನೆನಪಾಗುತ್ತದೆ ಎಂದಿಟ್ಟುಕೊಳ್ಳಿ. ಕಚೇರಿಯಿಂದ ಹಿಂತಿರುಗದೇ ಅದನ್ನು ಆಫ್ ಮಾಡಲು ಸಾಧ್ಯವಿರುವುದಿಲ್ಲ, ಹಾಗೊಂದು ವೇಳೆ ನೀವಿರುವ ಜಾಗದಿಂದಲೇ ಗೀಸರ್‌ನ್ನು ಆಫ್ ಮಾಡಲು ಸಾಧ್ಯವಾದರೆ ನಿಮಗೆ ಅನುಕೂಲವಲ್ಲವೆ? ಖಂಡಿತ. ಈಗ ಮನೆಯ ಯಾವುದೇ ಮೂಲೆಯಲ್ಲಿ ಕೂತೂ ಈ ಕೆಲಸ ಮಾಡಬಹುದು. ಆದರೆ, ನೀವು ಆಫೀಸಿಗೆ ಹೋಗಿದ್ದರೆ, ಇದೇ, ವ್ಯವಸ್ಥಿತ ಅಂತರ್ಜಾಲದಿಂದ ಅಂಥದೊಂದು ಸೌಲಭ್ಯ ನಿಮಗೆ ಸಿಗಲಿದೆ. ಆ ಸೌಲಭ್ಯವನ್ನು ನಿಮಗೆ ಒದಗಿಸಲು ಸಿದ್ಧಗೊಂಡಿರುವ ನೂತನ ತಂತ್ರಜ್ಞಾನವೇ “ಇಂಟರ್‌ನೆಟ್ ಆಫ್ ಥಿಂಗ್ಸ್’.
ಇದನ್ನು ಇಂಟರ್‌ನೆಟ್ ಆಫ್ ಎವ್ವೆರಿಥಿಂಗ್ ಎಂದೂ ಕರೆಯುತ್ತಾರೆ. ಗೀಸರ್ ಮಾತ್ರವಲ್ಲ; ನೀವು ಓಡಿಸುವ ವಾಹನ, ಬಳಸುವ ಮೈಕ್ರೋವೇವ್, ವ್ಯಾಕೂಮ್ ಕ್ಲೀನರ್, ಫ್ರಿಡ್ಜ್, ವಾಷಿಂಗ್ ಮಶೀನ್, ಟ್ಯಾಬ್, ಕಂಪ್ಯೂಟರ್, ಫ್ಯಾನ್, ಟೆಲಿವಿಷನ್, ಟ್ರೆಡ್‌ಮಿಲ್, ಗ್ಯಾಸ್‌ಒಲೆ, ಎ.ಸಿ ಮೆಶೀನ್‌ಗಳನ್ನೆಲ್ಲಾ ನೀವಿರುವ ಜಾಗದಿಂದಲೇ ನಿಯಂತ್ರಿಸುವ ನೂತನ ತಂತ್ರಜ್ಞಾನವಿದು. ಈಗಾಗಲೇ ಲಿವಿಂಗ್‌ರೂಮಿನ ಎಸಿ, ಟಿ.ವಿ, ಫ್ರಿಡ್ಜ್, ಗಳನ್ನೆಲ್ಲಾ ಅವುಗಳ ಸಮೀಪವೇ ಇದ್ದು ವೈ-ಫೈ ಇಂಟರ್‌ನೆಟ್ ಅಥವಾ ಬ್ಲುಟೂಥ್ ಮೂಲಕ ನಿಯಂತ್ರಿಸುವುದನ್ನು ಕಲಿತಿದ್ದೇವೆ. ಇದರ ಮುಂದುವರಿದ ಭಾಗ ಇದು.
ಅದರ ಹೆಸರು iot: iot ನಿಂದಾಗಿ ವಸ್ತುಗಳಿಂದ ಎಷ್ಟೇ ದೂರವಿದ್ದರೂ ಅವುಗಳನ್ನು ನಿಯಂತ್ರಿಸುವ ತಂತ್ರಜ್ಞಾನ ನಮಗೆ ದೊರಕಲಿದೆ. ಇದುವರೆಗೆ ಇಂಟರ್‌ನೆಟ್‌ನ ಬಳಕೆ ಕೇವಲ ಸ್ಮಾರ್ಟ್ ಫೋನ್, ಕಂಪ್ಯೂಟರ್, ಟ್ಯಾಬ್ ಮತ್ತು ಲ್ಯಾಪ್‌ಟ್ಯಾಪ್ ಗಳಲ್ಲಿ ಮಾತ್ರ ಉಪಯೋಗಿಸಲ್ಪಡುತ್ತಿತ್ತು. ಅವುಗಳನ್ನೂ ಮೀರಿ ಇನ್ನು ಮುಂದೆ ಜಗತ್ತಿನ ಪ್ರತಿಯೊಂದೂ ಜನ ಬಳಕೆಯ ವಸ್ತುವಿಗೂ ಇಂಟರ್‌ನೆಟ್ ತನ್ನ ಮಾಂತ್ರಿಕ ಸ್ಪರ್ಶ ನೀಡಲಿದ್ದು , ಬದುಕು ಮತ್ತಷ್ಟು ಸುಂದರವಾಗಲಿದೆ.
2020ರ ವೇಳೆಗೆ ವಿಶ್ವದ 20 ಶತಕೋಟಿ ವಸ್ತುಗಳು ಅಂತರ್ಜಾಲಕ್ಕೆ ಸಂಪರ್ಕಗೊಳ್ಳುತ್ತವೆ ಎನ್ನಲಾಗಿದೆ. iot ನಿಂದ ಸ್ಮಾರ್ಟ್ ಹೋಂಗಳು, ಸ್ಮಾರ್ಟ್ ಸಿಟಿಗಳು ಚಾಲ್ತಿಗೆ ಬರಲಿವೆ. ಅಂದರೆ-ಮನೆಯ ಒಟ್ಟು ಚಟುವಟಿಕೆಗಳು ಅಂದರೆ ಡೋರ್ ಲಾಕ್ ನಿಂದ ಹಿಡಿದು ಫ್ಯಾನ್, ಫ್ರಿಡ್ಜ್, ಗ್ಯಾಸ್, ಎ.ಸಿ, ಇಸ್ತ್ರಿಪೆಟ್ಟಿಗೆ, ಮಿಕ್ಸಿ, ವಾಟರ್ ಪ್ಯೂರಿಫೈಯರ್, ವಿಂಡೋ ಓಪನ್ ಅಂಡ್ ಕ್ಲೋಸಿಂಗ್, ಗೀಸರ್ ಸ್ವಿಚ್ ಆನ್ ಅಂಡ್ ಆಫ್, ನೀವು ಮನೆಯಿಂದ ಹೊರಟ ತಕ್ಷಣ ಕಾರು ನಿಲುಗಡೆಗೆ ಜಾಗ ಎಲ್ಲಿದೆ?
ಎಂಬುದನ್ನು ತೋರಿಸುತ್ತಲೇ, ಎಷ್ಟು ಜಾಗ ಖಾಲಿ ಇದೆ ಎಂಬುದನ್ನೂ ನೈಜ ಸಮಯದಲ್ಲಿ ತೋರಿಸುವ ವ್ಯವಸ್ಥೆ , ಫ್ರಿಡ್ಜ್ನಲ್ಲಿಟ್ಟ ಹಾಲು, ತರಕಾರಿ ಖಾಲಿಯಾಗಿದೆ ಎಂದು ನಿಮ್ಮ ಫೋನಿಗೆ ಮೆಸೇಜ್ ರವಾನೆಯಾಗುವುದು… ಹೀಗೆ, ನೂರಾರು ಜೀವನಸ್ನೇಹಿ ಸೌಲಭ್ಯಗಳು iotನಿಂದ ಪ್ರಾಪ್ತವಾಗಲಿವೆ. ಒಟ್ಟಿನಲ್ಲಿ, ಮನುಷ್ಯನ ಪ್ರಪಂಚವೇನೇನಿದೆಯೊ, ಅದೆಲ್ಲ iot ವ್ಯಾಪ್ತಿಗೆ ಬರಲಿದೆ. ಬದುಕು, ಅಂತರ್ಜಾಲದ ನೆಲೆಯಲ್ಲಿ ಮುಂದುವರೆಯಲಿದೆ.
iot ಯ ಬೆನ್ನೆಲುಬು ಹೈಸ್ಪೀಡ್ ಇಂಟರ್‌ನೆಟ್. ಒಂದೇ ಬಾರಿಗೆ ಹಲವು ವಸ್ತುಗಳನ್ನು ನಿಯಂತ್ರಿಸಿ ಅಗಾಧ ಪ್ರಮಾಣದ ಡಾಟಾ ಟ್ರಾನ್ಸ್‌ಫರ್ ಮಾಡಬಲ್ಲ 5ಜಿ ಇಂಟರ್‌ನೆಟ್ ಬರುವುದು ಖಾತ್ರಿಯಾಗಿದೆ. ಈಗಾಗಲೇ ನಮ್ಮ ಮಹಾನಗರಗಳಲ್ಲಿ 4ಜಿ ಇಂಟರ್‌ನೆಟ್ ಸೌಲಭ್ಯವಿದ್ದು ಕೆಲವು ವಸ್ತುಗಳನ್ನ iot ವ್ಯಾಪ್ತಿಗೆ ತರಲಾಗಿದೆ. ಈಗ ನಮಗೆ 5ಜಿ ವಿಸ್ತೃತ ನೆಟ್‌ವರ್ಕ್‌ನ ಅವಶ್ಯಕತೆ ಇದೆ ಮತ್ತು ಅಂತರ್ಜಾಲ ತಂತ್ರಜ್ಞಾನವನ್ನು ಆಧರಿಸಿ ಕೆಲಸ ಮಾಡುವ ಸಲಕರಣೆಗಳು, ಉತ್ಪನ್ನಗಳು ತಯಾರಾಗಬೇಕಿದೆ. ಅವುಗಳ ದೊಡ್ಡ ಮಾರುಕಟ್ಟೆಯೇ ಸಿದ್ಧಗೊಳ್ಳುತ್ತಿದೆ. ಹಾಗಾಗಿ iotಯ ಜ್ಞಾನ ಹೊಂದಲು ಪೂರಕ ಶಿಕ್ಷಣ ಮತ್ತು ಉದ್ಯೋಗ, ಎರಡೂ ನೆಲೆಗಳಲ್ಲಿ ಹೆಚ್ಚಿನ ಅವಕಾಶ ಸೃಷ್ಟಿಯಾಗುತ್ತಿದೆ.
ಯಾವ ಯಾವ ಕೋರ್ಸ್?: iot ಎಕ್ಸ್‌ಪರ್ಟ್ ಆಗುವ ಮೊದಲು ಸಾಮಾನ್ಯ ಕಂಪ್ಯೂಟರ್ ತಂತ್ರಜ್ಞಾನದ ಅರಿವಿರಲೇಬೇಕು. ಅದರ ಜೊತೆಗೆ ಡಿಪ್ಲೊಮಾ, ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಅಥವಾ ಇನ್‌ಫರ್‌ವೆುàಶನ್ ಸೈನ್ಸ್ ಓದುವ ವಿದ್ಯಾರ್ಥಿಗಳಿಗೆ iot ಓದಿನ ಒಂದು ಭಾಗವೇ ಆಗಿರುತ್ತದೆ. ಇವುಗಳಲ್ಲದೆ ಹಲವು ಕಂಪ್ಯೂಟರ್ ತಂತ್ರಜ್ಞಾನ ಕಂಪನಿಗಳು ನೀಡುವ ಈ ಕೆಳಗಿನ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಕಲಿಯಬಹುದು.
1. ಇಂಡಸ್ಟ್ರಿಯಲ್ iot ಮಾರ್ಕೆಟ್ಸ್ ಅಂಡ್ ಸೆಕ್ಯೂರಿಟಿ
2. ಆರ್ಕಿಟೆಕ್ಟಿಂಗ್ ಸ್ಮಾರ್ಟ್ iot ಡಿವೈಸಸ್
3. ವೈರ್‌ಲೆಸ್ ಅಂಡ್ ಕೌಡ್ ಕಂಪ್ಯೂಟಿಂಗ್ ಎಮರ್ಜಿಂಗ್ ಟೆಕ್ನಾಲಜೀಸ್
4. ಆಟೋನಾಮಸ್ ರನ್ ವೇಡಿಟೆಕ್ಷನ್ ಫಾರ್ iot
5. ಪ್ರೊಗ್ರಾಮಿಂಗ್ ವಿಥ್ iot ಕೌಡ್ ಪ್ಲಾಟ್‌ಫಾಮ್ಸ್
6. ಇಂಟ್ರೊಡಕ್ಷನ್ ಅಂಡ್ ಪ್ರೊಗ್ರಾಮಿಂಗ್ ವಿಥ್ iot ಬೋರ್ಡ್ಸ್
ಎಲ್ಲೆಲ್ಲಿ ಕೋರ್ಸ್ ಲಭ್ಯ?: iot ಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಆನ್‌ಲೈನ್‌ಮತ್ತು ಆಫ್ಲೈನ್‌ಎರಡೂ ವಿಧಗಳಲ್ಲಿ ಕಲಿಯಬಹುದು. ವಿದೇಶಿ ವಿವಿಗಳು ನೀಡುವ ಹೆಚ್ಚಿನ ಕೋರ್ಸ್‌ಗಳು ಆನ್‌ಲೈನ್ ಮಾದರಿಯಲ್ಲಿವೆ. ಕ್ಯಾಲಿಫೊರ್ನಿಯಾ , ಗೂಗಲ್ ಕೌಡ್, ಯೂನಿವರ್ಸಿಟಿ ಆಫ್ ಕೊಲರಾಡೊ, ಯಾನ್ಸೆ ಯುನಿವರ್ಸಿಟಿ, ಪೊಹಾಂಗ್ ಯುನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಉಐಖ ಡಿಜಿಟಲ್ ಗಳು ಆರಂಭಿಕ ಹಾಗೂ ಅಡ್ವಾನ್x ಎರಡೂ ಮಾದರಿಯ ಕೋರ್ಸ್‌ಗಳ ಕಲಿಕೆಗೆ ಸೌಲಭ್ಯ ಕಲ್ಪಿಸಿವೆ. ಕೋರ್ಸ್ ಎರಾ ಯಾವುದೇ ಶುಲ್ಕಲ್ಲದೆ ಅನ್‌ಲೈನ್ iot ಕೋರ್ಸ್ ನೀಡುತ್ತಾರೆ.
IBM, ಲಿಂಕ್ಡ್ಇನ್ ಲರ್ನಿಂಗ್, ಮೈಕ್ರೋಸಾಫ್ಟ್, ಎಕ್ಸ್‌ಪರ್‌ಫೈ, ಸ್ಕಿಲ್‌ಶೇರ್, ಅಲಿಸನ್, ಪೂರಲ್ ಸೈಟ್‌ಗಳು ಹಲವು ತಾಸುಗಳ ವೀಡಿಯೋ ಕಂಟೆಂಟ್ ಉಪಯೋಗಿಸಿ ತರಬೇತಿ ನೀಡುತ್ತವೆ. IBM ಕಂಪನಿ ಯಾವ ಶುಲ್ಕಲ್ಲದೆ ಶಿಕ್ಷಣ ನೀಡುತ್ತದೆ. ಲಿಂಕ್ಡ್ಇನ್ ನ 6,000 ತಜ್ಞರು iot ಕಲಿಸುವಲ್ಲಿ ನಿರತರಾಗಿದ್ದಾರೆ. ಪೂರಲ್ ಸೈಟ್ ಕಂಪನಿಗೆ 199 ಡಾಲರ್ ನೀಡಿ ಸದಸ್ಯರಾದರೆ, ನೀವು ಇಡೀ ಒಂದು ವರ್ಷ ಅವರ ಇ. ಲೈಬ್ರರಿಗೆ ಪ್ರವೇಶ ಪಡೆದು iot ಕಲಿಯಬಹುದು. ಅಲಿಸನ್ ಕಂಪನಿಯ ಕಲಿಕೆ ವಿಶ್ವದರ್ಜೆಯದು. ಎಕ್ಸ್‌ಪರ್‌ಫೈ ನೀಡುವ ಕೋರ್ಸ್ ಕಲಿಯಲು ವಿದ್ಯಾರ್ಥಿಯು ಸ್ಟಾಟಿಸ್ಟಿಕ್ಸ್ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿತಿರಬೇಕು.
ಎಲ್ಲೆಲ್ಲಿ ಕೆಲಸ ?: ವಿಶ್ವದ ಟಾಪ್ ಹತ್ತು iot ಕಂಪನಿಗಳೆನಿಸಿರುವ ಇಂಟೆಲ್, ಸ್ಯಾಮ್‌ಸಂಗ್, ಸಿಸ್ಕೊ, ಮೈಕ್ರೋಸಾಫ್ಟ್, ಸ್ಯಾಪ್, ಆ್ಯಪಲ್, ಗೂಗಲ್, ಒರಾಕಲ್, ಗಾರ್ಟನಲ್, 3600 ಸಿಂಪ್ಲಿಫೈ ಗಳಲ್ಲಿ iot ಕಲಿತವರಿಗೆ ಕೆಲಸಗಳಿವೆ. ಇವಲ್ಲದೆ ಇಂಟರ್‌ನೆಟ್ ಆಧರಿತ ಸೇವೆ ಬಳಸುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡಾಟಾ ಅನಾಲಿಟಿಕ್ಸ್, ನೆಟ್‌ವರ್ಕ್ ಅಂಡ್ ಸ್ಟ್ರಕ್ಟರ್, ಪ್ರೊಟೆಕ್ಷನ್, ಡಿವೈಸ್ ಅಂಡ್ ಹಾರ್ಡ್‌ವೇರ್, ಸೆಲ್ ಅಂಡ್ ಯೂಸರ್ ಇಂಟರ್‌ಫೇಸ್ ಡೆವಲಪ್‌ಮೆಂಟ್ ಕುರಿತಾದ ಕೆಲಸ ನಡೆಯುವ ಎಲ್ಲಾ ಭಾಗಗಳಲ್ಲಿ ಉದ್ಯೋಗದ ವಿಪುಲ ಅವಕಾಶಗಳಿವೆ.
ಆಗಾಧ ಪ್ರಮಾಣದ ದತ್ತಾಂಶ ಹಾಗೂ ಇಂಟರ್‌ನೆಟ್ ಬಳಸುವುದರಿಂದ ನಿಮ್ಮ ವಸ್ತುಗಳು ಮತ್ತು ಅವುಗಳ ನಿಯಂತ್ರಣ ನಿಮ್ಮ ಕೈಯಲ್ಲೇ ಇರುವಂತೆ ನೋಡಿಕೊಳ್ಳಬೇಕಾದದ್ದು ಅನಿವಾರ್ಯ. ಅದಕ್ಕೆಂದೇ ಲಕ್ಷಾಂತರ ಜನ ಕೆಲಸಗಾರರ ಅವಶ್ಯಕತೆ ಇರುತ್ತದೆ. 5ಜ ಇಂಟರ್‌ನೆಟ್ ಬರುತ್ತಿದ್ದಂತೆ ಬಳಕೆದಾರರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಲಿರುವುದರಿಂದ, ಅದರ ರೂಪುರೇಶೆ, ಅನುಕೂಲ, ಅಪಾಯ, ತೊಂದರೆಗಳನ್ನು ನಿಭಾಯಿಸಲು ಬೃಹತ್ ಉದ್ಯೋಗ ಮಾರುಕಟ್ಟೆ ನಿರ್ಮಾಣವಾಗಲಿದೆ. ಈಗಾಗಲೇ ಹ್ಯಾಕಿಂಗ್‌ನಿಂದ ಸಾಕಷ್ಟು ಇಂಟರ್‌ನೆಟ್ ಆಧಾರಿತ ಸೇವೆಗಳಲ್ಲಿ ವಿಪರೀತ ತೊಂದರೆಗಳಾಗಿವೆ. ಇವುಗಳಿಂದ ಮುಕ್ತಿ ದೊರಕಿಸಲು ದಿನದ 24 ಗಂಟೆಗಳೂ ದುಡಿಯುವ ಲಕ್ಷಾಂತರ ಕೆಲಸಗಾರರಿಗೆ ಉದ್ಯೋಗ ತೆರೆದುಕೊಳ್ಳುತ್ತಿದೆ.
* ಗುರುರಾಜ್ ಎಸ್ ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.