ಮಾತಿನಲ್ಲಿ ಹೇಳಲಾರೆನು…
Team Udayavani, Oct 22, 2019, 4:07 AM IST
ನಿನ್ನೊಂದಿಗೆ ಮನಬಿಚ್ಚಿ ಮಾತನಾಡಬೇಕು. ನಿನ್ನ ಸಂಗದಲ್ಲಿ ಒಳ್ಳೆಯ ಗೆಳೆಯನಾಗಬೇಕು. ಮನದ ಮಾತುಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕು ಎಂಬ ಬಯಕೆ ಸುಮಾರು ದಿನಗಳಿಂದ ಕಾಡುತ್ತಿದೆ.
ಹೌದು..! ನಿಜವಾಗಿಯೂ ಮನದ ಭಾವನೆಗಳನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಆ ಪ್ರಯತ್ನವನ್ನು ಸಹ ನಾನು ಮಾಡುವುದಿಲ್ಲ. ನಿನ್ನ ಮೇಲೆ ನನಗಿರುವುದು ಪ್ರೀತಿಯೋ, ಮೋಹವೋ, ಆಕರ್ಷಣೆಯೋ ತಿಳಿಯುತ್ತಿಲ್ಲ. ನಿನ್ನ ಕುರಿತು ಇರುವುದು ಅಭಿಮಾನವೋ, ಅಥವಾ ಭಯವೋ ಗೊತ್ತಾಗುತ್ತಿಲ್ಲ. ನೀನು ನನ್ನೆದುರು ಬಂದಾಗಲೆಲ್ಲಾ ನಾನು ಹೇಳಬೇಕೆಂದುಕೊಂಡಿರುವ ಮಾತುಗಳೆಲ್ಲಾ ಮರೆತೇ ಹೋಗುತ್ತವೆ.
ನಿನ್ನೊಂದಿಗೆ ಮನದುಂಬಿ ಮಾತನಾಡಬೇಕು. ನಿನ್ನ ಸಂಗದಲ್ಲಿ ಒಳ್ಳೆಯ ಗೆಳೆಯನಾಗಬೇಕು. ಮನದ ಮಾತುಗಳನ್ನು ನಿರರ್ಗಳವಾಗಿ ನಿನ್ನೊಂದಿಗೆ ಹಂಚಿಕೊಳ್ಳಬೇಕು ಎಂಬ ಬಯಕೆ ಸುಮಾರು ದಿನಗಳಿಂದ ಕಾಡುತ್ತಿದೆ. ಆದರೆ, ನನ್ನ ಸ್ನೇಹ ನಿನಗೆ ಇಷ್ಟವಾಗುವುದೋ ಇಲ್ಲವೋ ಎಂಬ ಭಯ. ನನ್ನ ಸಂಗ ಇಷ್ಟವಾಗದೇ , ನೀನು ದೂರವಾದರೇ..? ಛೇ , ಆ ನೋವನ್ನು ನಾನೆಂದೂ ತಾಳಲಾರೆನು.
ಈ ಕಾರಣದಿಂದಲೇ ನಿನ್ನ ಸುತ್ತಮುತ್ತ ಸುಳಿದಾಡಿದರೂ, ಎಷ್ಟೋ ಬಾರಿ ನಿನ್ನೊಂದಿಗೆ ಗಂಟೆಗಳ ಕಾಲ ಜೊತೆಗಿದ್ದರೂ ನಾನು ಏನೊಂದೂ ಮಾತಾಡಿಲ್ಲ. ಈಗ, ಈ ಪತ್ರದ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ದಯಮಾಡಿ ನನ್ನ ಸ್ನೇಹವನ್ನು ನಿರಾಕರಿಸಬೇಡ. ಮಾತಿನಲ್ಲಿ ಹೇಳಲಾಗದ ಈ ಅಂತರಂಗದ ನುಡಿಗಳನ್ನು ಕೇಳಿಸಿಕೊ. ನಿನ್ನ ಸ್ನೇಹ ಪಂಜರದಲ್ಲಿ ನನ್ನನ್ನು ಬಂಧಿಯಾಗಿಸು.
ಇಂತಿ ನಿನ್ನ ಅಭಿಮಾನಿ
* ವೆಂಕಟೇಶ ಚಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.