ಸ್ನಾಯುಗಳ ದೃಢತೆಗೆ ಫೋಮ್ ರೋಲರ್
Team Udayavani, Oct 22, 2019, 4:26 AM IST
ವ್ಯಾಯಾಮದ ಕಸರತ್ತಿಗೆ ಫೋಮ್ ರೋಲರ್ ಸಾಧನ ಹೆಚ್ಚು ಪ್ರಸಿದ್ಧವಾಗಿದೆ. ಮೂರರಿಂದ ನಾಲ್ಕು ಇಂಚುಗಳ ಅಗಲ, 36 ಇಂಚು ಉದ್ದದ ದಿಂಬಿನಂತೆ ಕಾಣುವ ಇದು ಸ್ನಾಯುಗಳಿಗೆ ಚೈತನ್ಯದಾಯಕ ವ್ಯಾಯಾಮವಾಗಿದೆ. ಫಿಟ್‌ನೆಸ್ ಕಾಯ್ದುಕೊಳ್ಳಬಯಸುವವರಿಗೆ ಈ ಫೋಮ್ ರೋಲರ್ ಸಾಧನ ಉತ್ತಮ.
ಫೋಮ್ ರೋಲರ್‌ನ ಪ್ರಯೋಜನಗಳು
· ದೇಹದ ಮೊಣಕಾಲು, ತೊಡೆ, ಪೃಷ್ಠ, ಬೆನ್ನು, ಕತ್ತು ಎಲ್ಲ ಭಾಗಗಳಿಗೂ ರೋಲರ್‌ನಿಂದ ವ್ಯಾಯಾಮ ನೀಡಬಹುದು. ಇದನ್ನು ಬಳಸಿ ವ್ಯಾಯಾಮ ಮಾಡುವಾಗ, ಕೊಬ್ಬು ಸಂಗ್ರಹವಾಗಿರುವ ಭಾಗಗಳಿಗೆ ಈ ವ್ಯಾಯಾಮ ಉತ್ತಮ ಮಸಾಜ್ ನೀಡುತ್ತದೆ. ಲಟ್ಟಣಿಗೆಯಲ್ಲಿ ಚಪಾತಿಯನ್ನು ಚಪ್ಪಟೆ ಮಾಡಿದಂತಹ ಅನುಭವ ಈ ವ್ಯಾಯಾಮದಲ್ಲಿ ಸಿಗುವುದು.
· ಸ್ನಾಯು ಒತ್ತಡ ಕಡಿಮೆ ಮಾಡುವ ಇದನ್ನು ಬಳಸಿ ವ್ಯಾಯಾಮವನ್ನು ಅತ್ಲೀಟ್‌ಗಳು, ಕ್ರೀಡಾಪಟುಗಳು ದಶಕಗಳ ಹಿಂದೆಯೇ ಮಾಡುತ್ತಿದ್ದರು. ಈಗ ಎಲ್ಲರೂ ಈ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
· ಸ್ನಾಯುಗಳ ಮೇಲೆ ದೇಹದ ಭಾರವನ್ನು ರೋಲರ್ ಬೀಳಿಸುತ್ತದೆ. ಅದರ ಚಲನೆಯು ಸ್ನಾಯುಗಳ ಚಲನೆಯನ್ನು ಸರಾಗಗೊಳಿಸುತ್ತದೆ. ಹೀಗಾಗಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.
· ಸ್ನಾಯುಗಳ ಬಲ ಹೆಚ್ಚಿಸುತ್ತದೆ. ಸ್ನಾಯು ಜಾಲಗಳಿಗೆ ಉತ್ತಮ ವ್ಯಾಯಾಮ ನೀಡುತ್ತದೆ. ಅಲ್ಲದೆ, ಸ್ನಾಯುಗಳಲ್ಲಿ ಸ್ಥಗಿತತೆ ಉಂಟಾಗಿದ್ದರೆ, ಆ ತೊಂದರೆಗಳನ್ನು ಪರಿಹರಿಸುತ್ತದೆ.
· ಕಾಲುಗಳಿಗೆ ವ್ಯಾಯಾಮ ಮಾಡುವಾಗ ಒಂದು ಕಾಲಿನ ಮೇಲೆ ಇನ್ನೊಂದು ಕಾಲಿನ ಭಾರವನ್ನು ಬಿಡಬೇಕು. ನಂತರ ರೋಲರ್ ಚಲನೆಯನ್ನು ಮಾಡಬೇಕು. ಆಗ ಮಾತ್ರ ಸ್ನಾಯುಗಳಿಗೆ ಪರಿಪೂರ್ಣ ವ್ಯಾಯಾಮ ದೊರೆಯುತ್ತದೆ. ಇದು ತೊಡೆಗಳಿಗೂ ಅನ್ವಯಿಸುತ್ತದೆ. ಶಿಲೆಯನ್ನು ಕಡೆಯುವಂತೆ ರೋಲರ್ ನಮ್ಮ ದೇಹದ ಸ್ನಾಯುಗಳನ್ನು ಕಡೆಯುತ್ತದೆ. ಒಟ್ಟಿನಲ್ಲಿ ಫೋಮ್ ರೋಲರ್ ಬಳಸಿ ಸರಳ ವ್ಯಾಯಾಮ ಮಾಡಬಹುದು.
ಮಾರ್ಗದರ್ಶನ ಪಡೆದು ಈ ವ್ಯಾಯಾಮ ಮಾಡುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.