ಸಾವರ್ಕರ್‌ ವಿರುದ್ಧ ದ್ವೇಷವೇಕೆ?


Team Udayavani, Oct 22, 2019, 5:48 AM IST

e-20

ಮಹಾರಾಷ್ಟ್ರದ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ವೀರಸಾವರ್ಕರ್‌ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ಮರಣೋತ್ತರವಾಗಿ ನೀಡಿ ಗೌರವಿಸಬೇಕೆಂದು ಶಿಫಾರಸು ಮಾಡುವುದಾಗಿ ನೀಡಿದ ವಾಗ್ಧಾನ ವಿವಾದವನ್ನು ಸೃಷ್ಟಿಸಿದೆ.

ಕಾಂಗ್ರೆಸ್‌ ಮತ್ತು ಎಡಪಂಥೀಯ ಪಕ್ಷಗಳು, ಕನ್ನಯ್ಯಕುಮಾರ್‌, ಸಿದ್ದರಾಮಯ್ಯ ಸೇರಿದಂತೆ ಕೆಲ ನಾಯಕರುಗಳು “ಇಂದು ಸಾವರ್ಕರ್‌ಗೆ, ನಾಳೆ ಗಾಂಧಿ ಹಂತಕ ನಾಥುರಾಂ ಗೋಡ್ಸೆಗೂ ಭಾರತರತ್ನ ನೀಡಬೇಕೆಂದು ಬಿಜೆಪಿ ಬಯಸಬಹುದು’ ಎನ್ನುವಷ್ಟರವರೆಗೆ ವಿವಾದ ಭುಗಿಲೆದ್ದಿದೆ. ಇಷ್ಟಕ್ಕೂ ಸಾವರ್ಕರ್‌ ಬಗ್ಗೆ ಅವರಿಗೇಕೆ ದ್ವೇಷ? ಸಾವರ್ಕರ್‌ ಬಗ್ಗೆ ವೈಷಮ್ಯ ಹೊಸತೇನಲ್ಲ. ಅದಕ್ಕೂ ಸುಮಾರು ಒಂದು ಶತಮಾನದ ಇತಿಹಾಸವೇ ಇದೆ.

ಸಾವರ್ಕರ್‌ ಎಲ್ಲ ಶಿಕ್ಷೆಗಳನ್ನು ಅನುಭವಿಸಿ 1937ರಲ್ಲಿ ಬಿಡುಗಡೆಗೊಂಡಾಗ ಅವ ರಿಗೆ ಕಾಂಗ್ರೆಸ್‌ ಸೇರುವ ಅವಕಾಶವಿತ್ತು. ಪಕ್ಷಕ್ಕೆ ಸೇರ್ಪ ಡೆ ಯಾ ಗಲು ಕಾಂಗ್ರೆಸ್‌ ನಾಯಕರುಗಳಿಂದಲೇ ಆಹ್ವಾನವಿತ್ತು. ಒಂದು ವೇಳೆ ಅಂದು ಅವರು ಕಾಂಗ್ರೆಸ್‌ ಸೇರಿದ್ದ ರೆಂದ ರೆ ಆ ಪಕ್ಷ ಸಾವರ್ಕರ್‌ರನ್ನು ದೇಶಪ್ರೇಮಿ ಎಂದು ಗೌರವಿಸುತ್ತಿತ್ತು. ಬ್ರಿಟಿಷರ ಮುಂದೆ ಅವರ ದಯಾಭಿಕ್ಷೆಯ ಒಂದು ಪದವನ್ನೂ ಇಂದು ಉಲ್ಲೇಖೀಸುತ್ತಿರಲಿಲ್ಲ. ಸಾವರ್ಕರರನ್ನು ಟೀಕಿಸುವವರು, ಗಾಂಧೀಜಿ ಬರೆದ ಸಾಲುಗಳನ್ನು ನೋಡಬೇಕು- “ಸಾವರ್ಕರ್‌ ಸಹೋದರರ ಪ್ರತಿಭೆಯನ್ನು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು.

ಭಾರತವು ಈಗ ಎಚ್ಚತ್ತುಕೊಳ್ಳದಿದ್ದರೆ ತನ್ನೆರಡು ವಿಶ್ವಾಸಾರ್ಹ ಸುಪುತ್ರರನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಅದರಲ್ಲೋರ್ವ ಸಹೋದರನನ್ನು ನಾನು ಚೆನ್ನಾಗಿ ಬಲ್ಲೆ. ಅವ ರನ್ನು ನಾನು ಲಂಡನ್ನಿನಲ್ಲಿ ಭೇಟಿಯಾಗಿದ್ದೆ. ಯಾವುದೇ ಒಂದು ನ್ಯಾಯಯುತ ಸರಕಾರದಲ್ಲೂ ಅವರು ಅತ್ಯುಚ್ಚ ಪದವಿಯಲ್ಲಿರಬೇಕಾ ಗಿತ್ತು. ಅವರು ಮಹಾಧೈರ್ಯಶಾಲಿ, ಬುದ್ಧಿವಂತರು, ದೇಶಪ್ರೇಮಿ, ಕ್ರಾಂತಿಕಾರಿ. ಅವರು ಭಾರತವನ್ನು ಅತಿಯಾಗಿ ಪ್ರೀತಿಸಿದ್ದರಿಂದ ಈಗ ಅಂಡಮಾನಿನಲ್ಲಿದ್ದಾರೆ.

“ಸಾವರ್ಕರ್‌ ಅಂಡಮಾನ್‌ ಜೈಲಿನಲ್ಲಿರುವಾಗ ಕ್ಷಮಾದಾನಕ್ಕಾಗಿ ಬ್ರಿಟಿಷ್‌ ಅಧಿಕಾರಿಗಳಿಗೆ ಪತ್ರ ಬರೆದಿದ್ದ ಹೇಡಿ, ಪುಕ್ಕಲ’ ಎಂದು ಕಾಂಗ್ರೆಸ್‌ ಮತ್ತು ಎಡಪಕ್ಷೀಯರ ಮೂದಲಿಕೆ. “ಮೈ ಟ್ರಾನ್ಸ್‌ಪೊರ್ಟೆಶನ್‌ ಫಾರ್‌ ಲೈಫ್’ ಎಂಬ ಪುಸ್ತಕವನ್ನು ಓದಿದರೆ, ಈ ವಾದದ ಪೊಳ್ಳುತನವನ್ನು ಅರ್ಥೈಸಿಕೊಳ್ಳಬಹುದು. ಸಾವರ್ಕರ್‌ ಅರ್ಜಿಯಲ್ಲಿ ತಮ್ಮ ಸಂಪೂರ್ಣ ಬಿಡುಗಡೆಗೆ ಬೇಡಿಕೆಯಿಟ್ಟಿರಲೇ ಇಲ್ಲ. ಅವರು ತಮ್ಮ ನ್ಯಾಯಯುತ ಹಕ್ಕುಗಳನ್ನು ಮಾತ್ರ ಕೇಳಿದ್ದರು. ಸಾವರ್ಕರರ ಕ್ಷಮಾ ದಾನ ಅರ್ಜಿ ಯ ಮುಖ್ಯ ಅಂಶಗಳು : “ನನ್ನನ್ನು ಭಾರತೀಯ ಜೈಲಿಗೆ ರವಾನಿಸಿ. ಅದರಿಂದ ನನ್ನ ವಿಮೋಚನೆ ಯಾಗುತ್ತದೆ. ನನ್ನ ಜನಗಳನ್ನು, ಬಂಧುಗಳನ್ನು ಪ್ರತಿ 4 ತಿಂಗಳಿಗೊಮ್ಮೆ ನೋಡುವ ಅವಕಾಶ ಸಿಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ನ್ಯಾಯಯುತವಲ್ಲದಿದ್ದರೂ ನೈತಿಕವಾಗಿ 14 ವರ್ಷದಲ್ಲಿ ಬಿಡುಗಡೆಹೊಂದುವ ನನ್ನ ಅರ್ಹತಾ ಹಕ್ಕನ್ನು ಪಡೆಯುತ್ತೇನೆ ಅಥವಾ ನನ್ನನ್ನು ಭಾರತಕ್ಕೆ ಕಳಿಸದಿದ್ದರೆ ಇತರ ಕೈದಿಗಳಂತೆ 5 ವರ್ಷಗಳ ಬಳಿಕ ಭೇಟಿಗಾಗಿ ಬಿಡುಗಡೆಗೊಳಿಸಿ ನನ್ನನ್ನು ಹೊರಗೆ ಕಳಿಸಬೇಕು. ಟಿಕೆಟು, ರಜೆ ಸೇರಿದಂತೆ ನನ್ನ ಕುಟುಂಬಿಕರನ್ನು ಕರೆಸಿಕೊಳ್ಳುವ ಅವಕಾಶವನ್ನು ಕಲ್ಪಿಸಬೇಕು. ಇದನ್ನು ಅನುಮೋದಿಸಿದರೆ ನನ್ನ ಒಂದೇ ಒಂದು ದೂರು ಬಾಕಿ ಉಳಿಯುತ್ತದೆ. ಅದ್ಯಾವುದು ಅಂದರೆ ನನ್ನ ತಪ್ಪುಗಳಿಗೆ ನಾನೇ ಹೊಣೆಗಾರ ಮತ್ತಿತರರ ತಪ್ಪಿಗೆ ಅಲ್ಲ.’

ಒಂದೇಕೆ, ಸಾವರ್ಕರ್‌ ಸುಮಾರು ಆರು ಕ್ಷಮಾದಾನ ಮನವಿಯನ್ನು ಸಲ್ಲಿಸಿದ್ದರು. ಆದರೆ ಅಲ್ಲಿ ಎಲ್ಲೂ ಸ್ವಾರ್ಥಪರ ಬೇಡಿಕೆಗಳಿರುವ ಒಂದು ಶಬ್ದವೂ ಇರಲಿಲ್ಲ. ಎಲ್ಲವೂ ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ಇತ್ತು.

ಸಾವರ್ಕರರು ತಮ್ಮ ನ್ಯಾಯಯುತ ಹಕ್ಕುಗಳನ್ನು ಮಾತ್ರ ಕೇಳಿದ್ದರು. ಆದರೆ ಬ್ರಿಟಿಷ್‌ ಸರಕಾರ ಇತರೆ ಕೈದಿಗಳಿಗೆ ಹಂಚಿದಂತೆ ನ್ಯಾಯಯುತ ಹಕ್ಕನ್ನು ಸಾವರ್ಕರರಿಗೆ ನಿರಾಕರಿಸಿತ್ತು. ಕಾರಣ ಇತರ ಕೈದಿಗಳಿಗಿಂತ ಸಾವರ್ಕರರು ಅಪಾಯಕಾರಿ ಎಂದು ಅದು ಭಾವಿ ಸಿ ತ್ತು. ಸಾವರ್ಕರರಿಗೆ ಅಂಡಮಾನ್‌ ಜೈಲಿನೊಳಗೆ ಕೊಳೆಯುವ ಉದ್ದೇಶವಿರಲಿಲ್ಲ. ಜೈಲಿನೊಳಗೆ ಬಂಧಿಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಾದರೂ ಹೇಗೆ? ಅಲ್ಲಿದ್ದರೆ ಕೆಲವು ದೇಶವಾಸಿಗಳ ಅನುಕಂಪದ ಹೊರತಾಗಿ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಿರಲಿ ಲ್ಲ. “ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಂಡು, ಸ್ವಾತಂತ್ರ್ಯ ಸಂಗ್ರಾಮಕ್ಕೆ ಮರಳುವುದು ಪ್ರತಿಯೋರ್ವ ಕ್ರಾಂತಿಕಾರಿಯ ಪ್ರಾಥಮಿಕ ಕರ್ತವ್ಯ’ ಎಂದು ಸಾವರ್ಕರ್‌ ಸಹ ಕೈದಿಗಳೊಂದಿಗೆ ತಮ್ಮ ಮನ ದಿಂಗಿತವನ್ನು ವ್ಯಕ್ತಪಡಿಸಿದ್ದರು.

ಈ ಪಿಟಿಷನ್ನಿನ ಕುರಿತಂತೆ ಸಾವರ್ಕರ್‌ ತಮ್ಮ ಪುಸ್ತಕದಲ್ಲಿ ಹೀಗೆ ಬರೆದಿದ್ದರು – ” My motive in writing the letter, I offered to do without any release for myself personally. Let them release all the prisoners in the country leaving me alone in my own cell in the Andamans. I shall rejoice in their freedom as if it was my own. I had not written the letter to seek my own liberation. Hence I had made the proposal to keep me back and set all others free” ದೇಶಕ್ಕೋಸ್ಕರ ಬದುಕುಳಿಯುವುದು ದೇಶಕ್ಕಾಗಿ ಸಾಯುವುದಕ್ಕಿಂತ ಶ್ರೇಷ್ಠ ಎಂದು ಸಾವರ್ಕರರು ನಂಬಿದ್ದರು.

ಗಾಂಧೀಜಿ ಹತ್ಯೆ ಆರೋಪ 
ಗಾಂಧೀಜಿ ಹತ್ಯೆಯಲ್ಲಿ ಸಾವರ್ಕರರ ಪಾತ್ರದ ಬಗ್ಗೆ ಸಾವರ್ಕರ್‌ ದೂಷಕರು ಬಳ ಸುವ ಒಂದೇ ಒಂದು ಅಂಶ ವೆಂದ ರೆ ದಿಗಂಬರ ಬಡ್ಗೆ ಅವರ ಹೇಳಿಕೆ. “ಸಾವರ್ಕರರು ಯಶಸ್ವಿಯಾಗಿ ಮರಳಿ ಬಾ ಎಂದು ಗೋಡ್ಸೆಗೆ ಹೇಳಿದ್ದನ್ನು ನಾನು ಕೇಳಿಸಿಕೊಂಡೆ’ ಎಂದು ಬಡ್ಗೆ ನುಡಿದಿದ್ದರು. ಸ್ವತಃ ಗೋಡ್ಸೆಯೇ ಸಾವರ್ಕರರ ಪಾತ್ರವನ್ನು ಅಲ್ಲಗಳೆದಿದ್ದರು. ಇತರ ಎಲ್ಲ ಆಪಾದಿತರು ಬಡ್ಗೆಯ ಹೇಳಿಕೆ ಸುಳ್ಳು ಎಂದಿದ್ದರು. ಬಡ್ಗೆಯ ಹೇಳಿಕೆ ಸತ್ಯವಾಗಿದ್ದರೂ, “ಯಶಸ್ವಿಯಾಗಿ ಮರಳಿ ಬಾ’ ಎಂಬ ವಾಕ್ಯವು ಹಿರಿಯರು ಕಿರಿಯರಿಗೆ ಹಾರೈಸುವ ಸಾಮಾನ್ಯ ಪದ. ಗೋಡ್ಸೆ ಹಿಂದೂ ಮಹಾಸಭಾದ ಸದಸ್ಯನಾಗಿದ್ದ ಎಂದು ಸ್ವತಃ ಸಾವರ್ಕರರೇ ಹೇಳಿಕೆ ಕೊಟ್ಟಿದ್ದಾರೆ.

ನ್ಯಾಯಮೂರ್ತಿ ಆತ್ಮಚರಣರ ತೀರ್ಪು ಸ್ಪಷ್ಟವಾಗಿ ಅಲ್ಲಗಳೆದರೂ, ಈ ಎಲ್ಲ ಸಂಶಯಗಳನ್ನು ಹುಟ್ಟುಹಾಕಿದ್ದು 1966ರಲ್ಲಿ ರಚನೆಗೊಂಡ ಜೆ.ಎಲ್‌. ಕಪೂರ್‌ ಆಯೋಗ. ಅದು ರಚನೆಗೊಂಡದ್ದು ಸಾವರ್ಕರ್‌ ನಿಧನರಾಗಿ 9 ತಿಂಗಳ ಬಳಿಕ. ಅದೊಂದು ಕೇವಲ ವಿಚಾರಣಾ ಆಯೋಗ. ಅದಕ್ಕೆ ಸುಪ್ರೀಂಕೋರ್ಟಿನಲ್ಲಿ ನಿರ್ಧರಿಸಲ್ಪಟ್ಟ ವಿಚಾರಗಳ ಮೇಲೆ ತೀರ್ಪು ನೀಡುವ ಅಧಿಕಾರವಿರಲಿಲ್ಲ. ಕಪೂರ್‌ ಆಯೋಗ ಸಾವರ್ಕರರ ವಿರುದ್ಧ ಪೂರ್ವಾಗ್ರಹದಿಂದ ಕೂಡಿದ್ದು, ಸರಕಾರದ ಪರವಾಗಿತ್ತು. ಸರಕಾರಕ್ಕೆ ಸಾವರ್ಕರರ ಪಿತೂರಿ ಬಗ್ಗೆ ಅನುಮಾನವಿದ್ದಿದ್ದರೆ, ಅವರ ಬಿಡುಗಡೆ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಅದು ಹಾಗೆ ಮಾಡಲಿಲ್ಲ.

Fhere is thus no reason to suppose that V D Savarkar had any hand in what took place at Delhi on 20.1.1948 and 30.1.1948 ಎಂಬುದು ಜಡ್ಜ್ ಆತ್ಮಚರಣರ ಅಂತಿಮ ತೀರ್ಪು.

 ಜಲಂಚಾರು ರಘುಪತಿ ತಂತ್ರಿ

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.