ಚೀನದ ಹೊಸ ವಾಣಿಜ್ಯ ರಾಕೆಟ್
Team Udayavani, Oct 22, 2019, 6:00 AM IST
ಬೀಜಿಂಗ್: ವಾಣಿಜ್ಯ ಉದ್ದೇಶಗಳಿಗಾಗಿ ಹಾರಿಬಿಡುವ ಉಪಗ್ರಹಗಳ ಉಡಾವಣೆಯು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಚೀನ, ಹೊಸ ತಲೆಮಾರಿನ ರಾಕೆಟ್ಗಳ ಶ್ರೇಣಿಯೊಂದನ್ನು ಪರಿಚಯಿಸಿದೆ. ಈ ಮೂಲಕ, ಈ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಭಾರತದ ಇಸ್ರೋಗೆ ಚೀನ ಪ್ರತಿಸ್ಪರ್ಧೆಯೊಡ್ಡಿದೆ. ಹೊಸ ರಾಕೆಟ್ಗಳ ಸಮೂಹಕ್ಕೆ ‘ಸ್ಮಾರ್ಟ್ ಡ್ರಾಗನ್’ (ಎಸ್.ಡಿ.) ಎಂದು ಹೆಸರಿಡಲಾಗಿದ್ದು, ಸುಮಾರು 1.5 ಟನ್ ತೂಕವನ್ನು ಇವು ಬಾಹ್ಯಾಕಾಶಕ್ಕೆ ಹೊತ್ತೂಯ್ಯಬಲ್ಲವು ಎಂದು ಚೀನ ಹೇಳಿದೆ. ಚೀನ ಅಕಾಡೆಮಿ ಆಫ್ ಲಾಂಚ್ ಟೆಕ್ನಾಲಜಿ ಸಂಸ್ಥೆಯ ‘ಚೀನ ರಾಕೆಟ್’ ಎಂಬ ವಿಭಾಗವು ಈ ರಾಕೆಟ್ಗಳನ್ನು ತಯಾರಿಸಿದೆ.
ಅಂದಹಾಗೆ, ಚಂದ್ರನ ಅಧ್ಯಯನ ಸೇರಿದಂತೆ ನಾನಾ ರೀತಿಯ ಬಾಹ್ಯಾಕಾಶ ಯೋಜನೆಗಳನ್ನು ಹೊಂದಿರುವ ಚೀನ, 2022ರಲ್ಲಿ ಮಂಗಳ ಗ್ರಹದ ಅಧ್ಯಯನ ನಡೆಸಲು ನಿರ್ಧರಿಸಿದೆ. ಅದಕ್ಕೆ ಬೇಕಾದ ಬಜೆಟ್ ಅನ್ನು ವಿಶ್ವದ ಇತರ ಸಣ್ಣ-ಪುಟ್ಟ ರಾಷ್ಟ್ರಗಳ ಉಪಗ್ರಹಗಳ ಉಡಾವಣೆ ಕೈಗೊಳ್ಳುವ ಮೂಲಕ ಸಂಪಾದಿಸಲು ನಿರ್ಧರಿಸಿದೆ. ಹಾಗಾಗಿ, “ಸ್ಮಾರ್ಟ್ ಡ್ರಾಗನ್’ ಸಿದ್ಧಪಡಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.