ಕೆಂಗುಲಾಬಿ

ರೆಡ್‌-ಪಿಂಕ್‌ "ಎಮ್ಮೀ' ಕಾಂಬಿನೇಷನ್‌

Team Udayavani, Oct 23, 2019, 4:07 AM IST

kengulaabi

ಮೊದಲೆಲ್ಲ ಬಣ್ಣಗಳ ಕಾಂಬಿನೇಷನ್‌ ವಿಷಯದಲ್ಲಿ ವಸ್ತ್ರ ವಿನ್ಯಾಸಕರು ಬಹಳಷ್ಟು ನಿಯಮಗಳನ್ನು ಪಾಲಿಸುತ್ತಿದ್ದರು. ತಿಳಿ ಬಣ್ಣದ ಜೊತೆ ಗಾಢ ಬಣ್ಣವನ್ನೇ ಮ್ಯಾಚ್‌ ಮಾಡಬೇಕು, ಒಂದೇ ರೀತಿ ಕಾಣಿಸುವ ಬಣ್ಣಗಳನ್ನು ಒಟ್ಟಿಗೆ ತರಬಾರದು ಎಂದೆಲ್ಲಾ ಆಗ ಹೇಳಲಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಬಗೆಬಗೆಯ ಪ್ರಯೋಗಗಳೇ ಫ್ಯಾಷನ್‌ನ ಜೀವಾಳ ಅಂತಾಗಿದೆ. ಅದಕ್ಕೆ ಸಾಕ್ಷಿಯೇ, ಎಮ್ಮಿ ಅವಾರ್ಡ್ಸ್‌ನಲ್ಲಿ ಮಿಂಚಿದ ಕೆಂಪು-ಗುಲಾಬಿ ರಂಗು…

ಗುಲಾಬಿ (ಪಿಂಕ್‌) ಬಣ್ಣ, ಹದಿ ಹರೆಯದ ಹುಡುಗಿಯರ ಬಣ್ಣ. ಕೆಂಪು ಬಣ್ಣ, ಸ್ವಲ್ಪ ವಯಸ್ಸಾದ ಹೆಂಗಸರಿಗೆ ಒಪ್ಪುವ ಬಣ್ಣ ಎಂಬುದು ಫ್ಯಾಷನ್‌ ಲೋಕದಲ್ಲಿದ್ದ ಮಾತು. ಕಾಲೇಜು ಯುವತಿಯರ ವಸ್ತ್ರ ವಿನ್ಯಾಸಕರು ಗುಲಾಬಿ ಬಣ್ಣಕ್ಕೇ ಜಾಸ್ತಿ ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಈಗ ಬದಲಾವಣೆಯ ಸಮಯ. ಯಾರು, ಯಾವ ಬಣ್ಣದ ವಸ್ತ್ರವನ್ನು ಬೇಕಾದರೂ ತೊಡಬಹುದು ಎಂಬುದು ಈಗಿನವರ ಮಾತು. ಆ ಮಾತನ್ನು ಎಮ್ಮಿ ಅವಾರ್ಡ್ಸ್ನಲ್ಲಿ ತಾರೆಯರು ಎತ್ತಿ ಹಿಡಿದಿದ್ದಾರೆ. ಕೆಂಪು ಮತ್ತು ಗುಲಾಬಿ ಕಾಂಬಿನೇಶನ್‌ನ ವಸ್ತ್ರದಲ್ಲಿ ಮಿಂಚಿ, ಫ್ಯಾಷನ್‌ ಲೋಕಕ್ಕೆ ಹೊಸ ರಂಗು ನೀಡಿದ್ದಾರೆ.

ಎಮ್ಮಿ ಅವಾರ್ಡ್ಸ್‌ ಅಂದ್ರೆ ಗೊತ್ತಲ್ಲ; ಅಮೆರಿಕದ ಕಿರುತೆರೆ ಕ್ಷೇತ್ರದ ಪ್ರತಿಭಾವಂತರನ್ನು ಗುರುತಿಸಲು ನೀಡುವ ಅವಾರ್ಡ್‌. ಪ್ರತಿವರ್ಷವೂ ಈ ಹೆಸರಿನಲ್ಲಿ ಅದ್ಧೂರಿ ಸಮಾರಂಭ ನಡೆಯುತ್ತದೆ. ಆ ದಿನ ಸೆಲೆಬ್ರಿಟಿಗಳು ಯಾವ ಉಡುಗೆ ತೊಡುತ್ತಾರೆ, ಯಾರು ಹೊಸ ಟ್ರೆಂಡ್‌ ಸೃಷ್ಟಿಸುತ್ತಾರೆ ಅಂತ ಜನ ಕುತೂಹಲದಿಂದ ಗಮನಿಸುತ್ತಾರೆ. ಬರೀ ಅಮೆರಿಕದವರಷ್ಟೇ ಅಲ್ಲ, ಇಡೀ ಜಗತ್ತಿನ ಫ್ಯಾಷನಿಸ್ಟ್‌ಗಳ ಕಣ್ಣು ಆ ಸಮಾರಂಭದ ಮೇಲಿರುತ್ತದೆ.

ಇತ್ತೀಚೆಗೆ ನಡೆದ ಎಮ್ಮಿ ಅವಾರ್ಡ್ಸ್‌ ಸಮಾರಂಭದಲ್ಲಿ ಟ್ರೆಂಡ್‌ ಆಗಿದ್ದು, ಪಿಂಕ್‌-ರೆಡ್‌ ಕಾಂಬಿನೇಷನ್‌ನ ವಸ್ತ್ರಗಳು. ವಿದೇಶದ ಹೆಚ್ಚಿನ ಸೆಲೆಬ್ರಿಟಿ ಸುಂದರಿಯರು “ಕೆಂಗುಲಾಬಿ’ ರಂಗಿನ ವಸ್ತ್ರದಲ್ಲಿ ಮಿಂಚಿದರು. ಆ ಟ್ರೆಂಡ್‌ ಎಲ್ಲೆಡೆ ಹರಡಲು ಜಾಸ್ತಿ ಸಮಯ ತೆಗೆದುಕೊಳ್ಳಲಿಲ್ಲ. ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ನ‌ ನಟಿಯರೂ ಆ ಟ್ರೆಂಡ್‌ ಅನ್ನು ಮೆಚ್ಚಿಕೊಂಡರು. ಅವರನ್ನು ನೋಡಿ, ಅಭಿಮಾನಿಗಳೂ ಹೊಸ ಸ್ಟೈಲ್‌ ಅನ್ನು ಪ್ರಯೋಗಿಸಲು ಪ್ರಾರಂಭಿಸಿದ್ದಾರೆ.

ಪರಿಣಾಮ, ಎಲ್ಲ ಬಗೆಯ ದಿರಿಸುಗಳಲ್ಲಿ ಈ ಬಣ್ಣಗಳ ಕಾಂಬಿನೇಶನ್‌ ಶುರುವಾಗಿವೆ. ಕೆಂಪು- ಗುಲಾಬಿ ಬಣ್ಣಗಳುಳ್ಳ ಮ್ಯಾಕ್ಸಿ, ಜಂಪ್‌ ಸೂಟ್‌, ಸೀರೆ, ಶಾಲು, ಲಂಗ, ಅಂಗಿ, ಪ್ಯಾಂಟ್‌, ಶಾರ್ಟ್ಸ್, ಕ್ರಾಪ್‌ಟಾಪ್‌, ಗೌನ್‌, ಸಲ್ವಾರ್‌ ಕಮೀಜ್‌ಗಳು ಈಗ ಸದ್ದು ಮಾಡುತ್ತಿವೆ. ವಸ್ತ್ರ ವಿನ್ಯಾಸಕರು ರೇಷ್ಮೆ, ಶಿಫಾನ್‌, ಫ್ಯಾನ್ಸಿ, ಹತ್ತಿ, ಸ್ಯಾಟಿನ್‌, ಚೈನಾ ಸಿಲ್ಕ್ನ ಬಟ್ಟೆಗಳ ಮೇಲೆ ಈ ಬಣ್ಣಗಳನ್ನು ಅಳವಡಿಸಿ, ವಿಭಿನ್ನ ವಿನ್ಯಾಸಗಳನ್ನು ತಯಾರಿಸುತ್ತಿದ್ದಾರೆ.

ಒಂದೇ ಉಡುಗೆಯಲ್ಲಿ ಕೆಂಪು- ಗುಲಾಬಿ ಎರಡೂ ಬಣ್ಣಗಳನ್ನು ಬಳಸಬಹುದು. ಇಲ್ಲವೇ, ಒಂದು ಬಣ್ಣದ ಟಾಪ್‌ಗೆ ಇನ್ನೊಂದು ಬಣ್ಣದ ಲಂಗ, ಪ್ಯಾಂಟ್‌ ಅಥವಾ ಶಾರ್ಟ್ಸ್ ತೊಡಬಹುದು. ಈ ರೀತಿ ಕೆಂಪು ಟಾಪ್‌ ಜೊತೆ ಗುಲಾಬಿ ಪ್ಯಾಂಟ್‌, ಗುಲಾಬಿ ಕುರ್ತಿ ಜೊತೆ ಕೆಂಪು ಲೆಗಿಂಗ್ಸ್, ಮುಂತಾದ ಕಾಂಬಿನೇಶನ್‌ ಟ್ರೈ ಮಾಡಬಹುದು. ಕೆಂಪು ಬಣ್ಣದ ಸಲ್ವಾರ್‌ ಕಮೀಜ್‌ ತೊಟ್ಟು, ಜೊತೆಗೆ ಗುಲಾಬಿ ದುಪಟ್ಟಾ ತೊಡಬಹುದು.

ಲಿಪ್‌ಸ್ಟಿಕ್‌ನಲ್ಲೂ ಹೊಸ ಪ್ರಯೋಗ: ಈ ಶೈಲಿಯ ಉಡುಗೆ ಜೊತೆ ಡ್ಯುಯಲ್‌ ಲಿಪ್‌ಸ್ಟಿಕ್‌ ಕೂಡ ಹಚ್ಚಿಕೊಳ್ಳಬಹುದು. ಅಂದರೆ, ಮೇಲಿನ ತುಟಿಗೆ ಕೆಂಪು ಬಣ್ಣ ಮತ್ತು ಕೆಳಗಿನ ತುಟಿಗೆ ಗುಲಾಬಿ ಬಣ್ಣ! ಸಾಮಾನ್ಯ ದಿನಗಳಿಗಿಂತ, ಪಾರ್ಟಿ, ಮದುವೆ ಸಮಾರಂಭಗಳಂದು ಇದನ್ನು ಟ್ರೈ ಮಾಡಿ. ಈ ಕಾಂಬಿನೇಶನ್‌ ನ ಉಡುಗೆ ಜೊತೆ ಬಂಗಾರದ ಬಣ್ಣದ ಆಕ್ಸೆಸರೀಸ್‌ ಚೆನ್ನಾಗಿ ಕಾಣಿಸುತ್ತವೆ. ಹಾಗಾಗಿ, ಗೋಲ್ಡನ್‌ ಬಣ್ಣದ ಪಾದರಕ್ಷೆ, ಸರ, ಕಿವಿಯೋಲೆ, ಬಳೆ, ಉಂಗುರ ಮುಂತಾದವುಗಳನ್ನು ತೊಡಬಹುದು.

ಬಂಗಾರದ ಬಣ್ಣಕ್ಕೆ ಹೋಲುವ ಬೆಲ್ಟ್ (ಸೊಂಟ ಪಟ್ಟಿ) ಮತ್ತು ಕ್ಲಚ್‌ ಅಥವಾ ಬ್ಯಾಗ್‌ ಕೂಡ ಚೆನ್ನಾಗಿ ಒಪ್ಪುತ್ತದೆ. ಕೆಂಪು -ಗುಲಾಬಿ ಬಣ್ಣಗಳುಳ್ಳ ಉಡುಗೆ ಜೊತೆ ಕಪ್ಪು ಬಣ್ಣದ ಆ್ಯಕ್ಸೆಸರೀಸ್‌ ಕೂಡ ಒಪ್ಪುತ್ತವೆ. ಹಾಗೆಂದು ಸ್ವರ್ಣ ಮತ್ತು ಕಪ್ಪು, ಎರಡನ್ನೂ ಒಟ್ಟಿಗೇ ಧರಿಸಬೇಡಿ. ಕಪ್ಪು ಅಥವಾ ಬಂಗಾರದ ಬಣ್ಣ, ಎರಡರಲ್ಲಿ ಒಂದನ್ನು ಆಯ್ದುಕೊಳ್ಳಿ.

ನಟಿಯರು ಮೆಚ್ಚಿದ ರಂಗು…: ಎಮ್ಮಾ ಅವಾರ್ಡ್ಸ್‌ನಲ್ಲಿ ಸೆಲೆಬ್ರಿಟಿಗಳು ತೊಟ್ಟ ಈ ಬಣ್ಣಗಳ ಪ್ರಯೋಗದ ಬಗ್ಗೆ ಎಲ್ಲೆಡೆ ಸುದ್ದಿಯಾದರೂ, ಈ ಮೊದಲೇ ಬಾಲಿವುಡ್‌ನ‌ ಕೆಲವು ನಟಿಯರು ಈ ವಿಭಿನ್ನ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಕೆಂಪು ಟಾಪ್‌ ಜೊತೆಗೆ, ಪಿಂಕ್‌ ಫ್ಲೇರ್ಡ್ ಪ್ಯಾಂಟ್‌ ತೊಟ್ಟ ದೀಪಿಕಾ ಪಡುಕೋಣೆ, ಕೆಂಪು ಬಣ್ಣದ ಫ್ಲೇರ್ಡ್ ವಿ-ನೆಕ್‌ ಟಾಪ್‌ ಜೊತೆಗೆ ಗುಲಾಬಿ ಬಣ್ಣದ ಪಲಾಝೋ ಪ್ಯಾಂಟ್‌ ತೊಟ್ಟ ಜಾಹ್ನವಿ ಕಪೂರ್‌, ಗುಲಾಬಿ ಬಣ್ಣದ ರಫ‌ಲ್ಡ್‌ ಟಾಪ್‌ ಜೊತೆ ಕೆಂಪು ಪ್ಯಾಂಟ್‌ ತೊಟ್ಟ ಶಿಲ್ಪಾ ಶೆಟ್ಟಿ, ಎಂಬ್ರಾಯ್ಡರಿ ಕ್ರಾಪ್‌ ಟಾಪ್‌ ಜೊತೆಗೆ ಕೆಂಪು ಬಣ್ಣದ ಫ್ಲೇರ್ಡ್ ಪ್ಯಾಂಟ್‌ ಹಾಗೂ ಕೇಪ್‌ ಜ್ಯಾಕೆಟ್‌ ತೊಟ್ಟ ಸಾರಾ ಅಲಿಖಾನ್‌ರ ಫೋಟೊ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಹಾಗಾಗಿ ಕೆಂಪು-ಗುಲಾಬಿ ಬಣ್ಣವನ್ನು, 2019ರ ಬೆಸ್ಟ್‌ ಕಾಂಬಿನೇಷನ್‌ ಅನ್ನಬಹುದೇನೋ!

* ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.