ತಂಬುಳಿಗಿಂತ ರುಚಿ ಬೇರಿಲ್ಲ
Team Udayavani, Oct 23, 2019, 4:08 AM IST
ಮಲೆನಾಡಿನ ಮನೆಗಳಲ್ಲಿ ತಂಬುಳಿ ಇಲ್ಲದೆ ಊಟವೇ ನಡೆಯದು. “ಭೋಜನೆ ತಂಬುಳೀಂ ಚೈವ, ಶಯನೆ ಕಂಬಳಿ ಪ್ರಿಯಂ’ ಎಂದು ಸುಭಾಷಿತ ಹೇಳುತ್ತದೆ. ಅಂದರೆ ಊಟಕ್ಕೆ ತಂಬುಳಿ ಇರಬೇಕು, ಹೊದ್ದು ಮಲಗಲು ಕಂಬಳಿ ಇರಬೇಕು ಅಂತ ಅರ್ಥ. ಸಾಮಾನ್ಯವಾಗಿ, ಹಸಿರು ಸೊಪ್ಪುಗಳಿಂದ ಮಾಡುವ ಈ ತಂಬುಳಿಯನ್ನು, ಬೇರೆ ಸಾಮಗ್ರಿಗಳಿಂದಲೂ ತಯಾರಿಸಬಹುದು.
ಎಳ್ಳಿನ ತಂಬುಳಿ
ಬೇಕಾಗುವ ಸಾಮಗ್ರಿ: ಬಿಳಿ ಎಳ್ಳು- 2 ಚಮಚ, ಒಣಮೆಣಸು- 2, ತೆಂಗಿನ ತುರಿ- 2 ಚಮಚ, ಮಜ್ಜಿಗೆ- 2 ಲೋಟ
ಮಾಡುವ ವಿಧಾನ: ಎಳ್ಳು ಮತ್ತು ಮೆಣಸನ್ನು ಒಟ್ಟಿಗೆ ಸೇರಿಸಿ ಅರ್ಧ ಚಮಚ ತುಪ್ಪ ಹಾಕಿ ಹುರಿಯಿರಿ. ಎಳ್ಳು ಸಿಡಿದಾಗ ಒಲೆ ಆರಿಸಿ. ಅದಕ್ಕೆ ಕಾಯಿತುರಿ, ಮಜ್ಜಿಗೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ, ಉಪ್ಪು ಸೇರಿಸಿ.
ಬಾಳೆ ದಿಂಡಿನ ತಂಬುಳಿ
ಬೇಕಾಗುವ ಸಾಮಗ್ರಿ: ಎಳೆಯ ಬಾಳೆ ದಿಂಡಿನ ಚೂರು- ಒಂದು ಕಪ್, ಹಸಿಮೆಣಸು-1, ಚಿಟಿಕೆ ಇಂಗು, ಮಜ್ಜಿಗೆ 2 ಲೋಟ.
ಮಾಡುವ ವಿಧಾನ: ಒಂದು ಲೋಟ ಮಜ್ಜಿಗೆ ಜೊತೆಗೆ ಮೇಲೆ ಹೇಳಿದ ಸಾಮಗ್ರಿಗಳನ್ನು ಸೇರಿಸಿ, ಮಿಕ್ಸಿಯಲ್ಲಿ ರುಬ್ಬಿ. ನಂತರ ಉಳಿದ ಮಜ್ಜಿಗೆ ಜೊತೆ ಬೆರೆಸಿ, ಕೊತ್ತಂಬರಿ ಸೊಪ್ಪು, ಉಪ್ಪು, ಸ್ವಲ್ಪ ನೀರು ಸೇರಿಸಿ. ಅದಕ್ಕೆ ಕರಿಬೇವು, ಸಾಸಿವೆ ಒಗ್ಗರಣೆ ಕೊಡಿ. ( ಇದೇ ರೀತಿ ಬಾಳೆ ಹೂವಿನ ತಂಬುಳಿಯನ್ನೂ ತಯಾರಿಸಬಹುದು. ಬಾಳೆ ಹೂವನ್ನು ಬಿಡಿಸಿ, ಅದರ ಒಳ ತಿರುಳನ್ನು ಸುಟ್ಟು, ತೆಂಗಿನತುರಿ ಜೊತೆ ರುಬ್ಬಬೇಕು)
ಬಿಳಿ ದಾಸವಾಳದ ತಂಬುಳಿ
ಬೇಕಾಗುವ ಸಾಮಗ್ರಿ: ಬಿಳಿ ದಾಸವಾಳದ ಹೂವು- 6, ಕಾಯಿ ತುರಿ- 2 ಚಮಚ , ಕಾಳುಮೆಣಸು- 8, ಜೀರಿಗೆ- ಒಂದು ಚಮಚ, ಮಜ್ಜಿಗೆ- 2 ಲೋಟ, ಉಪ್ಪು.
ಮಾಡುವ ವಿಧಾನ: ದಾಸವಾಳದ ಹೂವಿನ ಎಸಳುಗಳನ್ನು ಬಿಡಿಸಿ 5 ನಿಮಿಷ ಕಾಲ ಉಪ್ಪು ನೀರಲ್ಲಿ ಮುಳುಗಿಸಿ, ತೆಗೆದು, ಸ್ವಲ್ಪ ತುಪ್ಪ, ಜೀರಿಗೆ, ಕಾಳು ಮೆಣಸಿನ ಜೊತೆಗೆ ಹುರಿಯಿರಿ. ಅದು ತಣ್ಣಗಾದ ಮೇಲೆ ತೆಂಗಿನ ತುರಿ, ಮಜ್ಜಿಗೆ ಜೊತೆ ಸೇರಿಸಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಆ ಮಿಶ್ರಣಕ್ಕೆ ಮಜ್ಜಿಗೆ, ಉಪ್ಪು ಬೆರೆಸಿ, ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಡಿ.
ಮೆಂತ್ಯ ತಂಬುಳಿ
ಬೇಕಾಗುವ ಸಾಮಗ್ರಿ: ಮೆಂತ್ಯೆ- 1 ಚಮಚ, ಕೊತ್ತಂಬರಿ ಬೀಜ- 1/2 ಚಮಚ, ಒಣಮೆಣಸು- 2. , ತೆಂಗಿನ ತುರಿ- 2 ಚಮಚ, ಮಜ್ಜಿಗೆ 2 ಲೋಟ, ಉಪ್ಪು.
ಮಾಡುವ ವಿಧಾನ: ಮೆಂತ್ಯೆ, ಕೊತ್ತಂಬರಿ ಬೀಜ, ಒಣಮೆಣಸಿನಕಾಯಿಯನ್ನು ಅರ್ಧ ಚಮಚ ತುಪ್ಪ ಹಾಕಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ ತೆಂಗಿನ ತುರಿ ಹಾಗೂ ಸ್ವಲ್ಪ ಮಜ್ಜಿಗೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಮತ್ತೆ ಸ್ವಲ್ಪ ಮಜ್ಜಿಗೆ, ಉಪ್ಪು, ನೀರು (ಬೇಕಿದ್ದರೆ)ಸೇರಿಸಿ.
ದಾಳಿಂಬೆ ಸಿಪ್ಪೆಯ ತಂಬುಳಿ
ಬೇಕಾಗುವ ಸಾಮಗ್ರಿ: ಒಣಗಿಸಿದ ದಾಳಿಂಬೆ ಸಿಪ್ಪೆ-ಸ್ವಲ್ಪ, ಜೀರಿಗೆ-1 ಚಮಚ, ಕಾಳುಮೆಣಸು-10, ತುಪ್ಪ-1 ಟೀ ಚಮಚ, ಮಜ್ಜಿಗೆ-ಅರ್ಧ ಲೀಟರ್, ತೆಂಗಿನ ತುರಿ-ಅರ್ಧ ಕಪ್, ಉಪ್ಪು-ರುಚಿಗೆ, ಒಗ್ಗರಣೆಗೆ ತುಪ್ಪ, ಸಾಸಿವೆ, ಒಣ ಮೆಣಸಿನಕಾಯಿ.
ಮಾಡುವ ವಿಧಾನ: ದಾಳಿಂಬೆ ಹಣ್ಣಿನ ಸಿಪ್ಪೆ, ಜೀರಿಗೆ, ಕಾಳುಮೆಣಸನ್ನು ತುಪ್ಪದಲ್ಲಿ ಹುರಿದು, ತೆಂಗಿನ ತುರಿ, ಉಪ್ಪು ಮತ್ತು ಮಜ್ಜಿಗೆ ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣ ಮಜ್ಜಿಗೆ ಸೇರಿಸಿ, ಸಾಸಿವೆ ಒಗ್ಗರಣೆ ಕೊಡಿ.
ನೆಲ್ಲಿಕಾಯಿ ತಂಬುಳಿ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ-ಹತ್ತು, ಮಜ್ಜಿಗೆ- ಎರಡು ಲೋಟ, ತೆಂಗಿನ ತುರಿ, ಉಪ್ಪು, ಹಸಿ ಮೆಣಸು.
ಮಾಡುವ ವಿಧಾನ: ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜವನ್ನು ಬೇರ್ಪಡಿಸಿ, ತೆಂಗಿನ ತುರಿ, ಹಸಿ ಮೆಣಸು, ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಕಲಕಿ. (ಒಣ ನೆಲ್ಲಿಕಾಯಿಯನ್ನು ಬಳಸುವುದಾದರೆ, ಆದನ್ನು ನೀರಿನಲ್ಲಿ ನೆನೆಸಿಟ್ಟು, ನಂತರ ರುಬ್ಬಬೇಕು.)
ಪುನರ್ಪುಳಿ ತಂಬುಳಿ
ಬೇಕಾಗುವ ಸಾಮಗ್ರಿ: ಪುನರ್ಪುಳಿ- 5 (ಕೋಕಂ ), ತೆಂಗಿನ ತುರಿ- ಒಂದು ಕಪ್, ಹಸಿಮೆಣಸು, ಮಜ್ಜಿಗೆ- 1 ಲೋಟ, ಉಪ್ಪು, ಒಗ್ಗರಣೆಗೆ: ಸಾಸಿವೆ, ಎಣ್ಣೆ, ಚಿಟಿಕೆ ಅರಿಶಿಣ.
ಮಾಡುವ ವಿಧಾನ: ಪುನರ್ಪುಳಿಯನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿ, ತೆಂಗಿನ ತುರಿ, ಹಸಿ ಮೆಣಸಿನ ಜತೆ ರುಬ್ಬಿ. ಆ ಮಿಶ್ರಣಕ್ಕೆ ಮಜ್ಜಿಗೆ, ಉಪ್ಪು ಹಾಕಿ ಕಲಸಿ. ನಂತರ, ಒಗ್ಗರಣೆ ಕೊಡಿ.
* ಶಾರದಾ ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.