ಜಿಮ್ ಟ್ರೈನರ್ ಅವಕಾಶದ ಜತೆಗೆ ಉದ್ಯೋಗ
Team Udayavani, Oct 23, 2019, 4:44 AM IST
ಸಾಂದರ್ಭಿಕ ಚಿತ್ರ
ಓದಿನ ಜತೆ-ಜತೆಗೆ ಅರೆಕಾಲಿಕ ಉದ್ಯೋಗವನ್ನು ಗಳಿಸಬೇಕು ಎಂದು ವಿದ್ಯಾರ್ಥಿಗಳ ತುಡಿತ ಇದ್ದೇ ಇರುತ್ತದೆ. ಅಂಥಹ ಆ ಹಲವು ಅವಕಾಶಗಳಲ್ಲಿ ಇಂದು ಜಿಮ್ ಟ್ರೈನರ್‌ಗಳಿಗೆ ಹೆಚ್ಚಿನ ಬೇಡಿಕೆಯನ್ನು ಕಾಣಬಹುದಾಗಿದೆ. ಜಿಮ್ ಟ್ರೈನರ್ ಆಗಲು ಯಾವುದೇ ಸಿದ್ಧ ಮಾದರಿಯ ಶಿಕ್ಷಣ ಕೋರ್ಸ್‌ಗಳೇನೂ ಇಲ್ಲ ಆದರೆ ಪರಿಶ್ರಮ ಮತ್ತು ಕಲಿಕೆಯೊಂದಿಗೆ ಅನುಭವ ಸೇರಿದರೆ ನಮ್ಮೊಳಗೊಬ್ಬ ಜಿಮ್ ಟ್ರೈನರ್ ಉದ್ಭವಿಸುತ್ತಾನೆ.
ಹಲವು ಅವಕಾಶಗಳು
ಜಿಮ್ ಟ್ರೈನರ್ ಇದು ಪೂರ್ಣಕಾಲಿಕ ಹುದ್ದೆಯೂ ಹೌದು, ಅರೆಕಾಲಿಕ ಹುದ್ದೆಯೂ ಆಗಿದೆ. ವ್ಯಾಸಂಗ ಮಾಡುತ್ತ ಕೂಡ ನಾವು ಜಿಮ್ ಟ್ರೈನರ್ ಆಗಬಹುದು. ಇದರಿಂದ ನಮ್ಮದೇ ಆದ ಪ್ರತ್ಯೇಕವಾದ ಜಿಮ್ ಸೆಂಟರ್‌ನ್ನು ಹೊಂದಿ ಸ್ವಂತ ಉದ್ಯೋಗವನ್ನು ನಾವು ಗಳಿಸಿಕೊಳ್ಳಬಹುದಾಗಿದೆ. ಇದು ಒಂದು ಮಾದರಿಯಾದರೂ ಇನ್ನು ಬೇರೆಯವರ ಜಿಮ್‌ನಲ್ಲಿ ಟ್ರೈನರ್ ಆಗಿ ನಾವು ಕೆಲಸ ನಿರ್ವಹಿಸಬಹುದು. ಬಹುತೇಕ ಜಿಮ್ ವ್ಯಾಯಾಮ ಹವ್ಯಾಸಿಗಳು ಹೆಚ್ಚಿನ ಸಮಯ ಬೆಳಗ್ಗೆ ಮತ್ತು ಸಂಜೆ ಬರುವುದರಿಂದ ಓದುವ ವಿದ್ಯಾರ್ಥಿಗಳು ಬೆಳಗ್ಗೆ ಮತ್ತು ಸಂಜೆ ತಮ್ಮ ಕಾಲೇಜು ಸಮಯವನ್ನು ಹೊರತುಪಡಿಸಿ ಜಿಮ್‌ನಲ್ಲಿ ಕೆಲಸ ನಿರ್ವಹಿಸಬಹುದು. ಇದು ಕೂಡ ಒಳ್ಳೆಯ ಆದಾಯದ ಉದ್ಯೋಗವಾಗಿದೆ ಎಂಬುದು ಜಿಮ್ ಟ್ರೈನರ್‌ಗಳ ಅಭಿಪ್ರಾಯ.
ಅನುಭವ ಮುಖ್ಯ
ಜಿಮ್ ಟ್ರೈನರ್ ಆಗಲು ಮುಖ್ಯವಾದ ಅರ್ಹತೆ ಎಂದರೆ ಅದು ಜಿಮ್ ಅಂಗಣದಲ್ಲಿನ ಅನುಭವ. ಜಿಮ್ ಟ್ರೈನರ್‌ಗಳಿರಬೇಕಾದ ಇದು ಮೊದಲನೇ ಮತ್ತು ಕೊನೆಯ ಅರ್ಹತೆಯಾಗಿದೆ. ಏಕೆಂದರೆ ದೇಹ ದಂಡನೆ ಮಾಡುವಾಗ ಹಲವು ಸೂಚನೆ ಕ್ರಮಗಳನ್ನು ಅಗತ್ಯವಾಗಿ ಪಾಲಿಸಬೇಕಾದ ಕಾರಣದಿಂದಾಗಿ ಅಗತ್ಯವಾಗಿ ಜಿಮ್ ಟ್ರೈನರ್‌ಗಳಿಗೆ ಜಿಮ್ ಅಂಗಣದ ಎಲ್ಲ ನುರಿತ ಅನುಭವ ಮುಖ್ಯವಾಗಿ ಬೇಕಾಗಿರುತ್ತದೆ. ಇಲ್ಲವಾದರೆ ಮುಂದೆ ಎರಗುವ ಅಪಾಯಗಳಿಗೆ ಮುಖ್ಯ ಕಾರಣರು ನಾವು ಆಗಿರಬೇಕಾಗುತ್ತದೆ. ಅದಕ್ಕಾಗಿ ಏನಿಲ್ಲವಾದರೂ ಕನಿಷ್ಠ ಸುಮಾರು 2-3 ವರ್ಷವಾದರೂ ಜಿಮ್ ಅಂಗಣದ ಅನುಭವ ಇರಲೇಬೇಕಾಗುತ್ತದೆ.
ಹೆಚ್ಚಿನ ಬೇಡಿಕೆ
ಜಿಮ್ ಸೆಂಟರ್‌ಗಳಲ್ಲಿ ಹೆಚ್ಚಿನ ಜಿಮ್ ಟ್ರೈನರ್‌ಗಳಿಗೆ ಬೇಡಿಕೆ ಸದ್ಯಮಟ್ಟದಲ್ಲಿ ಹೆಚ್ಚಿದೆ. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದರ ಜತೆಗೆ ಕಟ್ಟುಮಸ್ತಾದ ದೇಹವನ್ನು ಬೆಳೆಸಿಕೊಳ್ಳಬೇಕು ಎಂದು ಬಹುತೇಕರು ಜಿಮ್ ಸೆಂಟರ್‌ಗಳ ಬಾಗಿಲು ತಟ್ಟುತ್ತಿದ್ದಾರೆ. ಇಂತಿಷ್ಟು ತಿಂಗಳಿಗೆ ಎಂದೂ ಗರಿಷ್ಠ ಫೀ ನೀಡುತ್ತಿದ್ದಾರೆ ಹಾಗಾಗಿ ಜಿಮ್ ಟ್ರೈನರ್‌ಗಳಿಗೆ ಬೇಡಿಕೆ ಇರುವುದರಿಂದಾಗಿ ಇಂತಹ ಉದ್ಯೋಗ ಪಡೆಯುವ ಯುವಕರು ಜಿಮ್ ಟ್ರೈನರ್ ಆದರೆ ಓದಿನ ಜತೆ-ಜತೆಗೆ ಒಳ್ಳೆಯ ಆದಾಯವನ್ನು ಕೂಡ ಗಳಿಸಬಹುದು.
ಶ್ರದ್ಧೆ, ಪರಿಶ್ರಮ ಅಗತ್ಯ
ಜಿಮ್ ಟ್ರೈನರ್ ಆಗಲು ಯಾವುದೇ ಪದವಿಗಳಿರುವುದಿಲ್ಲ. ಆದರೆ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ದೇಹ ದಂಡನೆ ವ್ಯಾಯಾಮಗಳನ್ನು ಕಲಿತರೆ ನಾವು ಕೂಡ ಕಡಿಮೆ ಅವಧಿಯಲ್ಲಿ ಜಿಮ್ ಟ್ರೈನರ್ ಆಗಬಹುದು.
- ಅಭಿನವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.