![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 22, 2019, 11:56 PM IST
ಬೆಳಗಾವಿ: ಕಾರು ಚಾಲಕ ಲೈಟ್ ಹಾಕಿದ ನೆಪ ಇಟ್ಟುಕೊಂಡು ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ಯುವಕನೋರ್ವನಿಗೆ ಚಾಕು ಇರಿದ ಘಟನೆ ನಗರದ ಖಂಜರಗಲ್ಲಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಖಂಜರ ಗಲ್ಲಿಯ ರಿಜ್ವಾನ್ ಶಫಿ ಮೋಮಿನ ಎಂಬಾತ ಗಾಯಗೊಂಡಿದ್ದು, ಕೂಡಲೇ ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಕು ಇರಿದ ಗೋವಾ ಮೂಲದ ಲಾಯಿಕ್ ಅಹ್ಮದ ಹರೂಣ ಮೋತಿವಾಲೆ ಹಾಗೂ ಸವೇಜ ಶೇರಖಾನ ಪಠಾಣ ಎಂಬವರು ಪರಾರಿಯಾಗಿದ್ದು ಇವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಗೋವಾ ಮೂಲದ ವ್ಯಕ್ತಿ ತನ್ನ ಸ್ಕಾರ್ಪಿಯೋ ವಾಹನ ತೆಗದುಕೊಂಡು ಬರುವಾಗ ಇನ್ನೊಂದು ವಾಹನ ಅಲ್ಲಯೇ ನಿಂತಿದ್ದು. ಆಗ ಫೆಡ್ ಲೈಟ್(ಪ್ರಖರ ಬೆಳಕು) ಹಚ್ಚಿದ ಎಂಬ ಕಾರಣಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಗಲಾಟೆಯಾಗಿದೆ. ಆಗ ರಿಜ್ವಾನ್ ಶಫಿ ಮೇಲೆ ಚಾಕು ಇರಿದು ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ರಿಜ್ವಾನ ಶಫಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಪ್ರದೇಶದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು ಯಾವುದೇ ಗಲಭೆ ನಡೆಯದಂತೆ ಬಂದೋಬಸ್ತ್ ಹಾಕಿದ್ದಾರೆ. ವೈಯಕ್ತಿಕ ಕಾರಣಕ್ಕೆ ಈ ಜಗಳವಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.