ಹುಲಿ ಬೇಟೆಗಾರನ ಸೆರೆ
Team Udayavani, Oct 23, 2019, 7:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭೋಪಾಲ: ಸತತ ಆರು ವರ್ಷಗಳ ಶೋಧದ ಬಳಿಕ ಕುಖ್ಯಾತ ಹುಲಿ ಬೇಟೆಗಾರ ಯಾರ್ಲೆಲ್ ಅಲಿಯಾಸ್ ಲುಝಲೆನ್ ಎಂಬಾತನನ್ನು ಮಧ್ಯಪ್ರದೇಶ ವಿಶೇಷ ಪೊಲೀಸ್ ತಂಡ ಬಂಧಿಸಿದೆ. 2014ರಲ್ಲಿ ಆತನನ್ನು ಬಂಧಿಸಲಾಗಿತ್ತಾದರೂ, ಜಾಮೀನು ಪಡೆದ ಬಳಿಕ ತಪ್ಪಿಸಿಕೊಂಡಿದ್ದ.
ಈತನ ಬಳಿಯಿಂದ ಮೂರು ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಇತನ ಮತ್ತೂಂದು ಕ್ರೌರ್ಯವೆಂದರೆ ಕರಡಿಗಳನ್ನೂ ಆತ ಕೊಲ್ಲುತ್ತಿದ್ದ ಮತ್ತು ಅದರ ದೇಹದ ಭಾಗಗಳನ್ನು ತಿನ್ನುತ್ತಾನೆ. ಪೆಂಚ್ ಅಭಯಾರಣ್ಯದಲ್ಲಿ ಟಿ13 ಎಂಬ ಹೆಣ್ಣು ಹುಲಿ ಕೊಂದಿರುವುದನ್ನು ಮತ್ತು 15 ಹುಲಿಗಳ ಕಳ್ಳಸಾಗಣೆ ಮತ್ತು ಈ ಪೈಕಿ ಕೆಲವನ್ನು ಕೊಂದಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.