ಮಳೆರಾಯನಿಂದ ಬದುಕು ಮೂರಾಬಟ್ಟೆ !
Team Udayavani, Oct 23, 2019, 8:33 AM IST
ಬಾಗಲಕೋಟೆ: ಜಿಲ್ಲೆಯ ಮೂರು ಜೀವ ನದಿಗಳೀಗ ಜನರ ಜೀವ ಹಿಂಡುತ್ತಿವೆ. ಆಗಸ್ಟ್ ಮೊದಲ ವಾರದಿಂದ ಈವರೆಗೆ ಬರೋಬ್ಬರಿ ಮೂರು ಬಾರಿ ನದಿಗಳು ತುಂಬಿ ಹರಿದ್ದು, ನದಿ ಪಾತ್ರದ ಜನರು, ನಿತ್ಯ ಜೀವ ಕೈಯಲ್ಲಿ ಹಿಡಿದು ಬದುಕು ನಡೆಸಿದ್ದಾರೆ. ನದಿಗಳು ಅಪಾರಮಟ್ಟ ಮೀರಿ ಹರಿದಾಗೊಮ್ಮೆ ಇಲ್ಲಿನ ಜನರು ಬದುಕು ಮೂರಾಬಟ್ಟೆ ಮಾಡಿಯೇ ಹೋಗಿವೆ. ಹೀಗಾಗಿ ಜನರು ತೀವ್ರ ಸಂಕಷ್ಟಕ್ಕೆ ಎದುರಾಗಿದ್ದಾರೆ.
ಹೌದು, ಕೃಷ್ಣಾ ನದಿ ಹಾಗೂ ಅದರ ಉಪ ನದಿಗಳಾದ ಮಲಪ್ರಭಾ, ಘಟಪ್ರಭಾ ನದಿಗಳು, ಕಳೆದ ಎರಡೂವರೆ ತಿಂಗಳಲ್ಲಿ ಮೂರು ಬಾರಿ ಪ್ರವಾಹ ಸೃಷ್ಟಿಸಿವೆ. ಆಗಸ್ಟ್‌ನಲ್ಲಿ ಬಂದ ಭಾರಿ ಪ್ರವಾಹ, 105 ವರ್ಷಗಳ ಬಳಿಕ ಭೀಕರತೆ ಉಂಟು ಮಾಡಿತ್ತು ಎಂದು ಹಿರಿಯರು ಹೇಳಿದ್ದರು. ಅದಾದ ಬಳಿಕ ಸೆಪ್ಟೆಂಬರ್ ಮೊದಲ ವಾರದಲ್ಲೂ ಪ್ರವಾಹ ಉಂಟಾಗಿತ್ತು. ಇದೀಗ ಅಕ್ಟೋಬರ್ 3ನೇ ವಾರದಲ್ಲಿ ಜಿಲ್ಲೆಯ ಮೂರು ನದಿಗಳು ಮೂರನೇ ಬಾರಿ ಉಕ್ಕೇರಿ ಹರಿಯುತ್ತಿವೆ.
ಇನ್ನೂ ಚೇತರಿಸಿಕೊಂಡಿಲ್ಲ: ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳೇ ಹೇಳುವಂತೆ 105 ವರ್ಷಗಳ ಬಳಿಕ ಬಂದ ಭೀಕರ ಪ್ರವಾಹದಿಂದ ಜಿಲ್ಲೆಯ 619 ಗ್ರಾಮಗಳಲ್ಲಿ 198 ಗ್ರಾಮಗಳು ಅಕ್ಷರಶಃ ನಲುಗಿದ್ದವು. 7531 ಮನೆಗಳು ಬಿದ್ದಿದ್ದವು. ಅಲ್ಲದೇ 66,159 ಹೆಕ್ಟೇರ್ ಕೃಷಿ ಬೆಳೆ, 5,528 ತೋಟಗಾರಿಕೆ ಬೆಳೆ, 63 ಹೆಕ್ಟೇರ್ ರೇಷ್ಮೆ ಸಹಿತ ಒಟ್ಟು 71,750 ಹೆಕ್ಟೇರ್ ಬೆಳೆ ಸಂಪೂರ್ಣ ನೀರಿನಲ್ಲಿ ನಿಂತಿದ್ದವು. ಇದರಿಂದ ರೈತರು 1675 ಕೋಟಿ ಮೊತ್ತದ ಬೆಳೆ ಹಾನಿಯಾದರೂ ಸರ್ಕಾರ ಮಾತ್ರ ಎನ್‌ಡಿಆರ್ ಎಫ್ ನಿಯಮದ ಪ್ರಕಾರ 91.04 ಕೋಟಿ ಪರಿಹಾರ ನೀಡಲು ಯೋಜನೆ ಹಾಕಿಕೊಂಡಿದೆ. ಅದೂ ಬೆಳೆ, ಮನೆ ಹಾನಿಯಾಗಿ ಬರೋಬ್ಬರಿ ಎರಡೂವರೆ ತಿಂಗಳು ಕಳೆದರೂ ಬೆಳೆ ಹಾನಿ ಪರಿಹಾರ ಸಿಕ್ಕಿಲ್ಲ. ಬಿದ್ದ ಮನೆಗಳ ಅವಶೇಷಗಳನ್ನು ಜೋಡಿಸಿ, ಗೋಡೆಗೆ ಬಟ್ಟೆ ಮರೆ ಮಾಡಿ ಜೀವನ ನಡೆಸುತ್ತಿರುವ ಸಂತ್ರಸ್ತರ ಗೋಳು ದಯನೀಯ ಸ್ಥಿತಿ ತಲುಪಿದೆ.
ಅವರೆಲ್ಲ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ಇನ್ನೂ 5ರಿಂದ 6 ವರ್ಷಗಳೇ ಬೇಕಾಗಬಹುದು. ಆದರೆ, ಇದೀಗ ಮತ್ತೆ ಪ್ರವಾಹ ಎಂಬುದು ಬರ ಸಿಡಿಲಿನಂತೆ ಅಪ್ಪಳಿಸಿದೆ. ಕಳೆದ ಎರಡು ತಿಂಗಳ ಹಿಂದೆ ಬಂದ ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 2542.99 ಕೋಟಿ ಹಾನಿಯಾಗಿತ್ತು. ಇದಕ್ಕೆ ಸರ್ಕಾರದ ನಿಯಮಾವಳಿ ಪ್ರಕಾರ ಕೇವಲ 420.36 ಕೋಟಿ ಪರಿಹಾರ ದೊರೆಯುತ್ತದೆ. ಹೀಗಾಗಿ ರೈತರ, ಬದುಕು ಸುಧಾರಿಸುವುದು ಅಷ್ಟು ಸುಲಭವಿಲ್ಲ.
ಪರಿಹಾರ ತಾರತಮ್ಯ ಬಗೆಹರಿದಿಲ್ಲ: ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನ ಪ್ರತಿನಿಧಿಗಳ ಬೇಜವಾಬ್ದಾರಿ, ನದಿ ಪಾತ್ರದ ಕೆಲವರ ನಿರ್ಲಕ್ಷದ ಫಲವಾಗಿ ವಾಸ್ತವದಲ್ಲಿ ಸಾಮಾನ್ಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆಸರೆ ಯೋಜನೆಯಡಿ ಮನೆ ನಿರ್ಮಿಸಿದ್ದ 40 ಗ್ರಾಮಗಳು, ಯುಕೆಪಿಯಡಿ ಪುನರ್‌ವಸತಿ ಕೇಂದ್ರಗಳಲ್ಲಿ ನಿವೇಶನ ಪಡೆದಿದ್ದ 46 ಗ್ರಾಮಗಳು ಹಾಗೂ ನಾರಾಯಣಪು ಹಿನ್ನೀರ ವ್ಯಾಪ್ತಿಗೆ ಬರುವ 12 ಗ್ರಾಮ ಸೇರಿ ಒಟ್ಟು 98 ಗ್ರಾಮಗಳನ್ನು ಪರಿಹಾರ ಪಟ್ಟಿಯಿಂದಲೇ ಕೈಬಿಡಲಾಗಿತ್ತು. ಇಂದಿಗೂ ಈ ಗ್ರಾಮಗಳ ಜನರಿಗೆ 10 ಸಾವಿರ ತಾತ್ಕಾಲಿಕ ಪರಿಹಾರ ನೀಡಲಾಗಿದೆ ಹೊರತು, ಬೆಳೆ ಹಾನಿ, ಮನೆ ಹಾನಿ ಹಾಗೂ ಶಾಶ್ವತ ಮನೆ ನಿರ್ಮಾಣಕ್ಕೆ ಪರಿಹಾರ ಸಿಕ್ಕಿಲ್ಲ. ಈ ತಾರತಮ್ಯ ನಿವಾರಿಸುವ ಭರವಸೆ ಸಿಎಂ ಅವರಿಂದ ಸಿಕ್ಕಿದೆಯಾದರೂ ಅದಕ್ಕೆ ಸ್ಪಷ್ಟ ಆದೇಶ ಬಂದಿಲ್ಲ.ಹೀಗಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಸ್ಪಷ್ಟನೆ ಕೋರಿ ಕುಳಿತಿದೆ.
ಪ್ರವಾಹಕ್ಕೆ 7ನೇ ಬಲಿ: ಈ ವರ್ಷದ ಪ್ರವಾಹದಿಂದ ಜಿಲ್ಲೆಯ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೂವರು, ಪ್ರವಾಹದಿಂದ ಆದ ಹಾನಿಗೆ ಭ್ರಮನಿರಶನಗೊಂಡು ಆತ್ಮಹತ್ಯೆ ಮಾಡಿಕೊಂಡರೆ, ಇಬ್ಬರು ಪ್ರವಾಹದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಓರ್ವ ಪ್ರವಾಹದ ವೇಳೆ ಹಾವು ಕಚ್ಚಿ ಮೃತಪಟ್ಟರೆ, ಇನ್ನಿಬ್ಬರು, ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಾಗ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದರೆ, ಜಿಲ್ಲಾಡಳಿತ ಕೇವಲ ಮೂವರು ಮಾತ್ರ ಪ್ರವಾಹದಿಂದ ಮೃತಪಟ್ಟವರ ಪಟ್ಟಿಗೆ ಸೇರಿಸಿ ಪರಿಹಾರ ಕೊಟ್ಟಿದೆ.
ಈ ಕುರಿತು ತೇರದಾಳ ಶಾಸಕ ಸಿದ್ದು ಸವದಿ, ಬಾಗಲಕೋಟೆ ಶಾಸಕ ಡಾ| ವೀರಣ್ಣ ಚರಂತಿಮಠ, ಸಿಎಂ ಗಮನ ಸೆಳೆದು ಪ್ರವಾಹದ ವೇಳೆ ಮೃತಪಟ್ಟ ಎಲ್ಲರಿಗೂ ಪರಿಹಾರ ಕೇಳಿದ್ದಾರೆ. ಅದು ಇನ್ನೂ ಅವಲಂಬಿತ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ಮಂಗಳವಾರ, ಹೊಲದ ಕೆಲಸಕ್ಕೆ ಹೊರಟಿದ್ದ ಬಾದಾಮಿ ತಾಲೂಕು ಶಿರಬಡಗಿಯ ರೈತ ರಾಮಪ್ಪ ಎಂಬುವರು ನದಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಅವರನ್ನೇ ನಂಬಿಕೊಂಡಿದ್ದ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ದುಃಖದ ಮಡುವಿನಲ್ಲಿದ್ದಾರೆ. ಎಷ್ಟೇ ಪರಿಹಾರ ಕೊಟ್ಟರೂ, ಮನೆಯ ಒಡೆಯನನ್ನು ಕೊಡಲಾಗಲ್ಲ. ಇಂತಹ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಜತೆಗೆ, ಅವರ ಮಕ್ಕಳ ಶಿಕ್ಷಣದ ಸಂಪೂರ್ಣ ಹೊಣೆ ಸರ್ಕಾರ ಹೊರಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.