ಇದು ಅಂಧ ಮಕ್ಕಳ ಐಪಿಎಸ್/ಐಎಎಸ್ ಕನಸು ನನಸು ಮಾಡುತ್ತಿರುವ ಅಕೆಲ್ಲಾ ಜೀವನಗಾಥೆ!


ಸುಹಾನ್ ಶೇಕ್, Oct 23, 2019, 6:30 PM IST

web-write-tdy-1

ಜಗತ್ತಿನಲ್ಲಿ ಎಲ್ಲರೂ ಸಾಧಕರಾಗಲ್ಲ. ಕೆಲವರು ಸಾಧಕರನ್ನು ಸೃಷ್ಟಿಸುತ್ತಾರೆ. ತನ್ನಿಂದ ಯಾವುದು ಆಗುವುದಿಲ್ಲವೋ ಅದನ್ನು ಇನ್ನೊಬ್ಬರಿಗೆ ಹೇಳಿಕೊಟ್ಟು ಆ ಮೂಲಕ ತಮ್ಮ ಕನಸನ್ನು ನನಸಾಗಿಸುವುದು ಇದೇ ಅಲ್ವಾ ಅಂಥವರು ನೂರರಲ್ಲಿ ಒಬ್ಬರು. ಮೊನ್ನೆಯಷ್ಟೇ ಕೇರಳದಲ್ಲಿ ದೃಷ್ಟಿಹೀನ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿ ಆಗಿ ಚುಕ್ಕಾಣಿ ಹಿಡಿದಿದ್ದನ್ನು ಓದಿದ್ದೇವೆ. ಸಾಧನೆಗೆ ಅಡ್ಡಿಯಾಗುವುದು ನಮ್ಮ ಉದಾಸೀನ ಮನೋಭಾವವೇ ಹೊರತು, ದೇಹದ ತೂಕ, ರೋಗ-ರುಜಿನ, ನ್ಯೂನತೆಗಳಲ್ಲ ಎಂಬುದನ್ನು ಮತ್ತೆ ಸಾಬೀತು ಪಡಿಸಿದ ಹಾಗೂ ಸೋಲನ್ನೇ ಶಾಪವಾಗಿ ದಿನದೂಡುವ ಎಷ್ಟೋ ಮಂದಿಗೆ ಎದ್ದು ಸಾಧಿಸಿ ಎಂದು ತೋರಿಸಿದ ಯಶೋಗಾಥೆ ಇದು.

ಇಂಥ ನೂರಾರು ಸಾಧಕರು ಪ್ರತಿನಿತ್ಯ ಜಗತ್ತಿನ ನಾನಾ ಭಾಗದಲ್ಲಿ ಹುಟ್ಟುತ್ತಾರೆ. ಆದರೆ ಕೆಲವರು ಬೆಳಕಿಗೆ ಬರಲು ಇಚ್ಛಿಸುವುದಿಲ್ಲ. ಇನ್ನು ಕೆಲವರು ವಿಶೇಷವಾದದ್ದನ್ನು ಸಾಧಿಸುತ್ತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಇಂಥ ಸಾಧಕರೊಬ್ಬರಲ್ಲಿ ಒಬ್ಬರು ಹೈದರಬಾದ್ ನ ಅಕೆಲ್ಲಾ ರಾಘವೇಂದ್ರ.

ದೇಶದ ಉನ್ನತ ಪರೀಕ್ಷೆ ನಾಗರಿಕ ಸೇವೆ ಯು.ಪಿ.ಎಸ್.ಸಿ, ಐಪಿಎಸ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಲಕ್ಷಾಂತರ ಮಂದಿ ಪ್ರಯತ್ನ ಪಡುತ್ತಾರೆ. ಎಲ್ಲರೂ ಪರ್ವತ ಹತ್ತುವ ಪ್ರಯತ್ನ ಮಾಡಬಹುದು, ಆದರೆ ಎಲ್ಲರಿಗೂ ಪೂರ್ತಿಯಾಗಿ ಪರ್ವತ ಹತ್ತುವ ಪರಿಶ್ರಮ ಸಲ್ಲದು ಎನ್ನುವ ಹಾಗೆ ಪ್ರಯತ್ನ ಪಟ್ಟವವರಿಗೆಲ್ಲಾ ನಾಗರಿಕ ಸೇವೆಯ ಪರೀಕ್ಷೆಯನ್ನು ಪೂರ್ತಿಗೊಳಿಸಿ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟ ಸಾಧ್ಯ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ಹುಟ್ಟಿದ ಅಕೆಲ್ಲಾ ರಾಘವೇಂದ್ರ ಹತ್ತನೇ ತರಗತಿ ಹಾಗೂ ಮುಂದುವರೆದ ಶಿಕ್ಷಣವನ್ನು ತನ್ನ ಊರಿನಲ್ಲೇ ಪೂರ್ತಿಗೊಳಿಸಿದರು. ದೇಶದ ಉನ್ನತ ಸೇವೆ ಮಾಡಬೇಕೆನ್ನುವ ಕನಸು ಇಟ್ಟುಕೊಂಡು ಲಕ್ಷಾಂತರ ಅಭ್ಯರ್ಥಿಗಳ ಜೊತೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಹೊರಟ ರಾಘವೇಂದ್ರ  1994 ಹಾಗೂ 1998 ರಲ್ಲಿ  ಯುಪಿಎಸ್ ಸಿ ಪರೀಕ್ಷೆಯನ್ನು ಬಹಳಷ್ಟು ತಯಾರಿಯೊಂದಿಗೆ ಬರೆಯಲು ಹೊರಡುತ್ತಾರೆ ಮೊದಲ ಪ್ರಯತ್ನ ವ್ಯರ್ಥವಾದಾಗ ಮತ್ತೊಮ್ಮೆ ಪ್ರಯತ್ನ ನಡೆಸುತ್ತಾರೆ ಆಕಾಶಕ್ಕೆ ಏರಲು ಒಂದೇ ಮೆಟ್ಟಿಲು ಎನ್ನುವ ಹಾಗೆ ಎಲ್ಲವೂ ಸರಿಯಾಗಿಯೇ ನಡೆಯುತ್ತಿರುವಾಗ ರಾಘವೇಂದ್ರ ಅವರ ಅದೃಷ್ಟ ಬರೀ 12 ಅಂಕಗಳ ಅಂತರ ನಿರ್ಧರಿಸುತ್ತದೆ. 12 ಅಂಕಗಳ ಅಂತರದಿಂದ ಗೆಲುವು ತಪ್ಪಿ ಹೋಗುತ್ತದೆ. ತನ್ನ ಕನಸು ನನಸಾಗಲಿಲ್ಲ ಎನ್ನುವ ಕೂರಗು, ನಿರಾಶೆ ಉಂಟಾದ್ರೂ ಸಹಿಸಿಕೊಂಡು ಮುಂದೆ ನಡೆಯುವ ನಿರ್ಧಾರವನ್ನು ರಾಘವೇಂದ್ರ ಅಂದೇ ನಿರ್ಧರಿಸಿ ಮುಂದೆ ಸಾಗುತ್ತಾರೆ.

ನಂತರ ರಾಘವೇಂದ್ರ ಬೇರೆ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಾರೆ. ಈ ನಾಡು, ಈ ಟಿವಿ ಆಂಧ್ರ ಜ್ಯೋತಿ, ವೆಬ್ ದುನಿಯಾ.ಕಾಮ್ ನ ತೆಲುಗು ಆವೃತ್ತಿಯಲ್ಲಿ ಗುರುತಿಸಿಕೊಳ್ಳುವ ರಾಘವೇಂದ್ರ  ತನ್ನ ಕನಸು ನನಸಾಗದೇ ಇದ್ರು ಪರವಾಗಿಲ್ಲ, ಇನ್ನೊಬ್ಬರ ಕನಸಿನಲ್ಲಿ ತನ್ನ ಕನಸಿನ ಪ್ರತಿಬಿಂಬ ಹಾಗೂ ಖುಷಿಯನ್ನು ಕಾಣಬೇಕು ಅನ್ನುವ ಆಶಯ ಹಾಗೂ ಆಸಕ್ತಿಯಿಂದ ಹೊಸ ಸಾಹಸಕ್ಕೆ ಧುಮುಕುತ್ತಾರೆ.

ನೂರಾರು ಕನಸು, ಒಬ್ಬನ ಮನಸ್ಸು, ಮುನ್ನುಗ್ಗುವ ಹುಮ್ಮಸ್ಸು :

ಯುಪಿಎಸ್ ಸಿ ಪರೀಕ್ಷೆಯನ್ನು ತಾನು ಪೂರ್ತಿಗೊಳಿಸಿಲ್ಲದಿದ್ರೂ ತನಗೆ ತಿಳಿದಿರುವ ಜ್ಞಾನ ಮಾರ್ಗವನ್ನಾದರೂ ಇನ್ನೊಬ್ಬರಿಗೆ ಕಲಿಸಿಕೊಡುವ ಮಹಾದಾಸೆಯನ್ನು 2003 ರಲ್ಲಿ ರಾಘವೇಂದ್ರ ಅವರು ದಿಲ್ಸುಖ್ ನಗರದಲ್ಲಿ  ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರವನ್ನು ಸ್ಥಾಪಿಸುತ್ತಾರೆ. 30- 35 ವಿದ್ಯಾರ್ಥಿಗಳನ್ನು ತರಬೇತಿ ಕೊಟ್ಟು ಪರೀಕ್ಷೆಗಾಗಿ ತಯಾರಿಗೊಳಿಸುವ ಸಂಸ್ಥೆ ಇದುವರೆಗೆ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಶಸ್ವಿ ಆಗಿ ನಾಗರಿಕ ಸೇವೆ ಪರೀಕ್ಷೆಯನ್ನು ಪೂರ್ತಿಗೊಳಿಸಿ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಟ್ಟ ಹೆಮ್ಮೆಯನ್ನು ಹೊಂದಿದೆ.

 

ದೃಷ್ಟಿಹೀನ ಮಕ್ಕಳ ಕನಸಿಗೆ ಬೆಳಕಾದ ಅಕೆಲ್ಲಾ :

ಅಕಿಲ್ಲಾ ಇಂದು ಒಬ್ಬ ಪತ್ರಕರ್ತ ಮಾತ್ರವಲ್ಲ. ಒಬ್ಬ ಶಿಕ್ಷಣ ತಜ್ಞ, ಅಂಕಣಕಾರ, ಸ್ಪೂರ್ತಿದಾಯಕ ಮಾತುಗಾರ, ವೈಯಕ್ತಿಕ ತರಬೇತುದಾರ, ಎಲ್ಲದಕ್ಕಿಂತ ಹೆಚ್ಚಾಗಿ ಅವರು ಮಾಡಿದ ಒಂದು ಕಾರ್ಯ ಇಂದು ಅವರನ್ನು ಎಲ್ಲರೂ ಮೆಚ್ಚಯವಂತೆ ಮಾಡಿದೆ. ಅದುವೇ ನಾಗರಿಕ ಸೇವೆಯಂಥ ಕಠಿಣ ಪರೀಕ್ಷೆಯನ್ನು ಬರೆಯಲು ಹೊರಟಿರುವ ದೃಷ್ಟಿಹೀನ ಹಾಗೂ ದೈಹಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು.

ಅಕೆಲ್ಲಾ ರಾಘವೇಂದ್ರ ಅವರು ಅಮೇರಿಕಾಕ್ಕೆ ‌ಭೇಟಿ‌ ನೀಡಿದ ಸಂದರ್ಭದಲ್ಲಿ ಅಲ್ಲಿ ದೈಹಿಕವಾಗಿ ದೌರ್ಬಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯನ್ನು ನೋಡುತ್ತಾರೆ. ಇದೇ ಮಾದರಿಯನ್ನು ಭಾರತದಲ್ಲಿ ಅನುಷ್ಠಾನ ಮಾಡುವ ಇರಾದೆಯನ್ನು ಹೊಂದುವ ರಾಘವೇಂದ್ರ ಕೆಲ ಸಮಯದ ಬಳಿಕ‌ ತನ್ನ ಯೋಚನೆಯನ್ನು ಇನ್ನಷ್ಟು ಗಾಢವಾಗಿ ಅನುಸರಿಸಿ ತರುವ ಪ್ರಯತ್ನಕ್ಕೆ ಇಳಿಯುತ್ತಾರೆ.

ದೃಷ್ಟಿಹೀನ ಮಕ್ಕಳಿಗಾಗಿ ರಾಘವೇಂದ್ರ ವಿಶೇಷವಾಗಿ ಏಳು ವರ್ಷ ಅಧ್ಯಯನ ಮಾಡಿ ಬ್ರೈಲ್ ಲಿಪಿಯಿಂದ ವಿಶೇಷ ಮಕ್ಕಳು ನಾಗರಿಕ ಸೇವೆ ಪರೀಕ್ಷೆಗೆ ಓದಲೇ ಬೇಕಾದ 30-35  ಆಡಿಯೋ ಪುಸ್ತಕ ಸಂಗ್ರಹಣೆ ಮಾಡಲು ಆರಂಭಿಸುತ್ತಾರೆ.‌ ಈ ಪ್ರಕ್ರಿಯೆ ಭಾರತದಲ್ಲಿ ಮೊದಲು. ಇದಕ್ಕಾಗಿ ರಾಘವೇಂದ್ರ ತನ್ನ ಸ್ವಂತ ಖರ್ಚಿನಲ್ಲಿ 5 ಲಕ್ಷ ರೂಪಾಯಿಯನ್ನು ವೆಚ್ಚ ಮಾಡಿದ್ದಾರೆ.

ಸದ್ಯ ಅಕೆಲ್ಲಾ ಮತ್ತು ಅವರ ಇಬ್ಬರು ದೃಷ್ಟಿಹೀನ ವಿದ್ಯಾರ್ಥಿಗಳಾದ ಸಾಗರ್ ಮತ್ತು ಶಿವಪ್ರಕಾಶ್ ಅವರೊಂದಿಗೆ ಈಗ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

ಇವರ ತರಬೇತಿ ಸಂಸ್ಥೆಗೆ ಬರುವ ವಿದ್ಯಾರ್ಥಿಗಳು ಹೆಚ್ಚಾಗಿ ಬಡ ಕುಟುಂಬದ ಹಿನ್ನಲೆಯವರು. ದೃಷ್ಟಿಹೀನ ಹಾಗೂ ಅತ್ಯಂತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯದೊಂದಿಗೆ ನಾಗರಿಕ ಸೇವಾ ತರಬೇತಿಯನ್ನು ನೀಡುತ್ತಿದ್ದಾರೆ.

ಗುರುಕುಲವ್ಯವಸ್ಥೆ :

ಅಕಿಲ್ಲಾ ರಾಘವೇಂದ್ರ  ಅಳವಡಿಸುವ ಪಠ್ಯ ಕ್ರಮ ಪ್ರಸಕ್ತ ಕಲಿಕಾ ವ್ಯವಸ್ಥೆಯ ಮಾದರಿಗೆ ಹತ್ತಿರವಾದದು. ವಿದ್ಯಾರ್ಥಿಗಳ ಜೊತೆ ಆನ್ಲೈನ್ ನಲ್ಲಿ ಹೆಚ್ಚು ಸಮಯ ಕಳೆಯುವ ಅಕಿಲ್ಲಾ ಆನ್ಲೈನ್ ನಲ್ಲಿ ಬೇಕಾಗುವ ಪ್ರಶ್ನೆ ಹಾಗೂ ಕಲಿಕಾ ಮಾರ್ಗವನ್ನು ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಕಳುಹಿಸಿದ ಹೋಮ್ ವರ್ಕ್ ಅನ್ನು ಫೋಟೋ ಸಮೇತ ಬೆಳಗ್ಗೆ 11 ಗಂಟೆಯ ಒಳಗೆ ಕಳುಹಿಸಲು ಹೇಳುತ್ತಾರೆ. ಈ ರೀತಿಯ ಇ- ಗುರುಕುಲ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಹೆಚ್ಚು ಲವಲವಿಕೆಯಿಂದ ಕಲಿಯುತ್ತಾರೆ ಅನ್ನುವುದು ರಾಘವೇಂದ್ರ ಅವರ ಅಭಿಪ್ರಾಯ.

ಇಂದು ರಾಘವೇಂದ್ರ ದೇಶ ವಿದೇಶಗಳನ್ನು ಸುತ್ತಿ, ಸ್ಪೂರ್ತಿದಾಯಕ ಮಾತುಗಳನ್ನು ಆಡುತ್ತಾರೆ, ಲೇಖಕನಾಗಿ ಪುಸ್ತಕಗಳನ್ನು ಬರೆದಿದ್ದಾರೆ, ಪತ್ರಕರ್ತನಾಗಿ ಸಮಾಜದ ಓರ-ಕೋರೆಗಳನ್ನು ತಿದ್ದಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆಯ ಆಶಾ ದೀಪವನ್ನು ಹೊತ್ತಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಂಧ ಮಕ್ಕಳ ಬಾಳಿನ ಕನಸಿಗೆ ಬಣ್ಣಗಳನ್ನು ಪಸರಿಸುತ್ತಿದ್ದಾರೆ..

 

-ಸುಹಾನ್ ಶೇಕ್

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.