300 ಕೋಟಿ ಕ್ಲಬ್ ಸೇರಿದ ‘ವಾರ್’ ; ಮೂರನೇ ವಾರದಲ್ಲೂ ಇಳಿಕೆಯಾಗದ ಕಲೆಕ್ಷನ್
Team Udayavani, Oct 23, 2019, 5:08 PM IST
ಮುಂಬಯಿ: ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ ‘ವಾರ್’ ಚಿತ್ರ ಬಾಲಿವುಡ್ ನ ಈ ಹಿಂದಿನ ದಾಖಲೆಗಳನ್ನೆಲ್ಲಾ ಪುಡಿಗಟ್ಟಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಬಾಕ್ಸ್ ಆಫೀಸಿನಲ್ಲಿ ‘ವಾರ್’ ಧಮಾಕಾ ಮುಂದುವರೆದಿದ್ದು ಈಗಾಗಲೇ ಈ ಫುಲ್ ಪ್ಯಾಕ್ಡ್ ಆ್ಯಕ್ಷನ್ ಚಿತ್ರ 300 ಕೋಟಿ ಕಲೆಕ್ಷನ್ ದಾಖಲೆಯನ್ನು ಬರೆದಿದೆ.
ಮೂರನೇ ವಾರದಲ್ಲೂ ತನ್ನ ಗಳಿಕೆಯನ್ನು ಏರಿಸಿಕೊಂಡಿರುವ ಈ ಚಿತ್ರ ಹಿಂದಿಯಲ್ಲಿ 291.80 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದರೆ, ಈ ಚಿತ್ರದ ತಮಿಳು ಮತ್ತು ತೆಲುಗು ಅವತರಣಿಕೆಗಳೂ ಸೇರಿದಂತೆ ಒಟ್ಟಾರೆ 305.95 ಕೋಟಿ ರೂಪಾಯಿಗಳನ್ನು ಬಾಚಿಕೊಂಡು ಬಾಲಿವುಡ್ ನಲ್ಲಿ ಹೊಚ್ಚ ಹೊಸ ದಾಖಲೆಯನ್ನು ಬರೆದಿದೆ.
ಯಶ್ ರಾಜ್ ಬ್ಯಾನರ್ ನಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಅದ್ಭುತವೆನ್ನಬಹುದಾಗಿರುವ ಆ್ಯಕ್ಷನ್ ಸೀನ್ ಗಳಿಗೆ ಪ್ರೇಕ್ಷಕರು ಕಂಪ್ಲೀಟ್ ಫಿದಾ ಆಗಿದ್ದಾರೆ. ಮಾತ್ರವಲ್ಲದೇ ಫಿಟ್ ಆ್ಯಂಡ್ ಫೈನ್ ಆಗಿರುವ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರ ಪರ್ಫೆಕ್ಟ್ ಕಾಂಬಿನೇಷನ್ ಈ ಚಿತ್ರಕ್ಕೆ ಇನ್ನಷ್ಟು ಜೋಶ್ ತುಂಬಿದೆ. ಇನ್ನು ಸಾಕಷ್ಟು ಟ್ವಿಸ್ಟ್ ಗಳನ್ನು ಒಳಗೊಂಡಿರುವ ವಿಭಿನ್ನ ಕಥಾಹಂದರವೂ ಚಿತ್ರಪ್ರೇಮಿಗಳನ್ನು ಮತ್ತೆ ಮತ್ತೆ ಚಿತ್ರಮಂದಿರದತ್ತ ಸೆಳೆಯುವಂತೆ ಮಾಡುತ್ತಿದೆ.
ಹೃತಿಕ್ ಮತ್ತು ಟೈಗರ್ ಶ್ರಾಫ್ ಅವರ ಮೊದಲ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಚಿತ್ರ ಇದಾಗಿದ್ದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಾಣಿ ಕಪೂರ್ ಅಭಿನಯವೂ ಸಹ ಪ್ರೇಕ್ಷಕರ ಗಮನ ಸೆಳೆದಿದೆ. ‘ವಾರ್’ ಚಿತ್ರ ಗಾಂಧಿ ಜಯಂತಿಯಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.