ಪಾಕ್ ಪರ ಮಾತನಾಡಿದ್ದಕ್ಕೆ ಕ್ರಮ: ಮಲೇಷ್ಯಾದ ಅಡುಗೆ ಎಣ್ಣೆ ಬೇಡ!
ಕಾಶ್ಮೀರ ವಿಚಾರದಲ್ಲಿ ಭಾರತದ ಬಿಗಿ ಕ್ರಮ ; ಆಮದು ನಿಲ್ಲಿಸಲು ವ್ಯಾಪಾರಿಗಳಿಗೆ ಎಸ್‌ಇಎಐ ಕರೆ
Team Udayavani, Oct 23, 2019, 5:43 PM IST
ಹೊಸದಿಲ್ಲಿ: ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನ ಪರವಾಗಿ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಮಲೇಷ್ಯಾಕ್ಕೆ ಈಗ ಭಾರತ ಚಾಟಿ ಬೀಸಲು ಮುಂದಾಗಿದೆ.
ಭಾರತದ ಉನ್ನತ ಅಡುಗೆ ತೈಲ ವ್ಯಾಪಾರ ಸಂಸ್ಥೆ ಸೋಮವಾರ ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಅಡುಗೆ ಎಣ್ಣೆ ಖರೀದಿಯನ್ನು ನಿಲ್ಲಿಸುವಂತೆ ತನ್ನ ಸದಸ್ಯರಿಗೆ ಕರೆ ನೀಡಿದೆ.
ಸಾಲ್ವೆಂಟ್ ಎಕ್ಸ್‌ಟ್ರಾಕ್ಟರಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಸ್‌ಇಎಐ) ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಮಾತನಾಡಿದ್ದರಿಂದ ಯಾವ ರೀತಿಯ ಪರಿಣಾಮವಾಗುತ್ತದೆ ಎಂದು ಮಲೇಷ್ಯಾಕ್ಕೆ ತಿಳಿಸಲು ಈ ನಿರ್ಧಾರ ಕೈಗೊಂಡಿದೆ.
ಮಲೇಷ್ಯಾ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರವಾಗಿದ್ದು, ಭಾರತ ಅತಿ ದೊಡ್ಡ ಆಮದುದಾರ ರಾಷ್ಟ್ರವಾಗಿದೆ. ಭಾರತದ ವ್ಯಾಪಾರಿ ಒಕ್ಕೂಟದ ಈ ಕರೆಯಿಂದ ಅದರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಊಹಿಸಲಾಗಿದೆ. ಭಾರತ ಮಲೇಷ್ಯಾದಿಂದ ಕಳೆದ ವರ್ಷ ಒಟ್ಟು 6.84 ಬಿಲಿಯನ್ ರಷ್ಟು ಮೌಲ್ಯದ ಅಡುಗೆ ಎಣ್ಣೆ ಮತ್ತು ತಾಳೆ ಆಧಾರಿತ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದು, ಮಲೇಷ್ಯಾದ ಒಟ್ಟು ದೇಶೀಯ ಉತ್ಪನ್ನದ 2.8% ಮತ್ತು ಒಟ್ಟು ರಫ್ತಿಗೆ 4.5% ಕೊಡುಗೆ ನೀಡಿತ್ತು.
ಶೇ.74 ಆಮದು
ವಿಶ್ವ ಇತರೆ ದೇಶಗಳಿಂದ ಭಾರತ ಶೇ.74 ರಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.
ಶೇ.41.50
ಇಂಡೊನೇಶಿಯಾದಿಂದ ಭಾರತಕ್ಕೆ ರಫ್ತಾಗುತ್ತಿರುವ ಅಡುಗೆ ಎಣ್ಣೆಯ ಪ್ರಮಾಣ.
ಶೇ.20.50
ಭಾರತ ಮಲೇಶಿಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಅಡುಗೆ ಎಣ್ಣೆಯ ದತ್ತಾಂಶ.
ಶೇ.2.90
ಥ್ಯಾಲ್ಲೆಂಡ್ ದೇಶದಿಂದ ಭಾರತಕ್ಕೆ ರಫ್ತು ಆಗುತ್ತಿರು ಅಡುಗೆ ಎಣ್ಣೆ ಪ್ರಮಾಣ.
1.63.ಶೇ
ಭಾರತ ಕೊಲಾಂಬಿಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಅಡುಗೆ ಎಣ್ಣೆಯ ಪ್ರಮಾಣ
1.02.ಶೇ
ನೈಜೇರಿಯಾದಿಂದ ಭಾರತಕ್ಕೆ ರಫ್ತು ಆಗುತ್ತಿರುವ ಅಡುಗೆ ಎಣ್ಣೆಯ ದತ್ತಾಂಶ.
ಭಾರತದಲ್ಲಿ ಎಲ್ಲೆಲ್ಲಿ ಉತ್ಪಾದನೆ
14740 ಮೆಟ್ರಿಕ್ ಟನ್ ಕರ್ನಾಟಕ ರಾಜ್ಯದಲ್ಲಿ ಉತ್ಪನ್ನವಾಗುವ ಅಡುಗೆ ಎಣ್ಣೆಯ ಪ್ರಮಾಣ.
ಆಂಧ್ರ ಪ್ರದೇಶ
ಭಾರತದಲ್ಲಿ ಅತೀ ಹೆಚ್ಚು ಅಡುಗೆ ಎಣ್ಣೆಯನ್ನು ಉತ್ಪಾದಿಸುವ ರಾಜ್ಯವಾಗಿದ್ದು, ಕಳೆದ ವರ್ಷ ಇಲ್ಲಿ 1144092 ಮೆಟ್ರಿಕ್ ಟನ್ ಅಷ್ಟು ಅಡುಗೆ ಎಣ್ಣೆಯನ್ನು ಉತ್ಪಾದಿಸಲಾಗಿದೆ.
ತೆಲಂಗಾಣ
ಇಲ್ಲಿ ಒಟ್ಟು 63508 ಮೆಟ್ರಿಕ್ ಟನ್ ರಷ್ಟು ಅಡುಗೆ ಎಣ್ಣೆಯನ್ನು ತಯಾರಿಸಲಾಗಿದೆ.
ಕೇರಳ
ಇಲ್ಲಿ ಒಟ್ಟು 40611 ಮೆಟ್ರಿಕ್ ಟನ್ ರಷ್ಟು ಅಡುಗೆ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ.
ತಮಿಳು ನಾಡು
7810 ಮೆಟ್ರಿಕ್ ಟನ್ ರಷ್ಟು ಅಡುಗೆ ಎಣ್ಣೆಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.
ಗುಜರಾತ್
523 ಮೆಟ್ರಿಕ್ ಟನ್ ರಷ್ಟು ಅಡುಗೆ ಎಣ್ಣೆಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.
ಗೋವಾ
3217 ಮೆಟ್ರಿಕ್ ಟನ್ ರಷ್ಟು ಅಡುಗೆ ಎಣ್ಣೆಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.