ಚಂದಿರನೇತಕೆ ಬೆಳೆಯುವನಮ್ಮ?
ಸೂಪರ್ ಡೂಪರ್ ಮೂನ್
Team Udayavani, Oct 24, 2019, 4:24 AM IST
ಆಗಸದ ಚಂದ್ರನಿಗೂ ಬೆಳವಣಿಗೆ ಇದೆ. ಅವನು ದೊಡ್ಡವನಾಗುತ್ತಾನೆ, ಚಿಕ್ಕವನಾಗುತ್ತಾನೆ. ತುಂಬಾ ದೊಡ್ಡವನಾದಾಗ ಅವನನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ.
ಚಂದ್ರನನ್ನು ಕಂಡರೆ ಮಕ್ಕಳಿಗೆ ಪಂಚಪ್ರಾಣ. ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಪ್ರಿಯವಾದವನು ಚಂದ್ರ. ಮಕ್ಕಳಿಗೆ ಊಟ ಮಾಡಿಸುವ ನೆಪದಲ್ಲಿ ತಾವೂ ನೋಡಿ ಖಷಿ ಪಡುವರು. ಮಕ್ಕಳಂತೂ ದುಂಡನೆಯ ಚಂದಿರನ ನೋಡುತ್ತಾ ಅತ್ತಲಿಂದ ಇತ್ತ ಓಡುತ್ತಾ ಚಂದ್ರ ತಮ್ಮನ್ನೇ ಹಿಂಬಾಲಿಸುತ್ತಿ¨ªಾನೆಂದು ಅವರು ಪಡುವ ಖುಷಿಯಂತೂ ಹೇಳತೀರದು…
ಚಂದ್ರನ ಹುಟ್ಟು
ಭೂಮಿಯನ್ನು ಹೊರತುಪಡಿಸಿದರೆ ಮಾನವ ನಡೆದಾಡಿರುವ ಏಕೈಕ ಆಕಾಶಕಾಯ ಎಂದರೆ ಚಂದ್ರ. ವಿಶ್ವದ ಉಗಮಕ್ಕೆ ಕಾರಣವಾಯ್ತು ಎನ್ನಲಾದ ಮಹಾನ್ಪೋಟ(ಬಿಗ್ ಬ್ಯಾಂಗ್) ನಂತರ ಮಂಗಳ ಗ್ರಹದಷ್ಟು ದೊಡ್ಡ ಆಕಾಶಕಾಯವೊಂದು ಭೂಮಿಗೆ ಅಪ್ಪಳಿಸಿತ್ತು. ಆಗ ಸಿಡಿದ ಸಿಡಿದ ಚೂರುಗಳೆಲ್ಲ ಒಂದುಗೂಡಿ ಆಕಾಶಕಾಯವೊಂದು ನಿರ್ಮಿತವಾಯಿತು. ಅದುವೇ ಚಂದ್ರ.
ಅವನು ರಾತ್ರಿಯ ಹೊತ್ತು ಬೆಳ್ಳಗೆ ಕಾಣುತ್ತಾನೆ. ಅಷ್ಟುಮಾತ್ರಕ್ಕೆ ಚಂದ್ರನ ಬಣ್ಣ ಬಿಳಿ ಎಂದು ತಿಳಿಯಬೇಡಿ. ನಾವು ಕಾಣುವ ಬಿಳಿ ಬೆಳಕು ಚಂದ್ರನದಲ್ಲ, ಸೂರ್ಯನದು. ಸೂರ್ಯನ ಬೆಳಕನ್ನು ಚಂದ್ರ ಪ್ರತಿಫಲಿಸುವ ಕಾರಣಕ್ಕೆ ನಮಗೆ ಬೆಳ್ಳಗೆ ಕಾಣುತ್ತಾನೆ.
ಕಾರಣ ಏನು ಗೊತ್ತಾ?
ಚಂದ್ರ ಯಾವತ್ತಿಗೂ ಸೂಪರ್. ಆದರೆ ಸೂಪರ್ ಮೂನ್ ಎಂದರೆ ಅದಲ್ಲ. ಪ್ರತಿ ಹುಣ್ಣಿಮೆಯ ಸಮಯದಲ್ಲಿ ನಾವು ನೋಡುವ ಚಂದ್ರನ ಗಾತ್ರ ಮಾಮೂಲಿಗಿಂತ 14 ಪಟ್ಟು ದೊಡ್ಡದಾಗಿರುತ್ತದೆ. ಅಲ್ಲದೆ, ಬೆಳಕು ಕೂಡ ಮೂವತ್ತು ಪಟ್ಟು ಜಾಸ್ತಿ ಇರುತ್ತದೆ. ಈ ಸಮಯದಲ್ಲಿ ಚಂದ್ರನನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ. ಚಂದ್ರನ ಪಥ ಅಂಡಾಕಾರವನ್ನು ಹೊಂದಿದೆ. ಹೀಗಾಗಿ ಪಥದ ಒಂದು ಕಡೆ ಚಂದ್ರ ಭೂಮಿಗೆ ಹತ್ತಿರವಾಗುತ್ತಾನೆ. ಹತ್ತಿರ ಬರುವುದರಿಂದ ಹೆಚ್ಚು ಪ್ರಕಾಶಮಾನವಾಗಿಯೂ ಕಾಣಿಸಿಕೊಲ್ಲುತ್ತಾನೆ. ಚಂದ್ರ ಭೂಮಿಗೆ ಹತ್ತಿರವಾಗುವ ಖಗೋಳ ವಿದ್ಯಮಾನಕ್ಕೆ “ಪೆರಿಜಿ ಸೈಗಿ’ ಎಂದೂ, ದೂರ ಹೋಗುವುದಕ್ಕೆ “ಅಪೋಜಿ’ ಎಂದೂ ಕರೆಯುವರು. ಹತ್ತಿರ ಬಂದಾಗ ವಸ್ತು ದೊಡ್ಡದಾಗಿ ಕಾಣುತ್ತದೆ, ದೂರ ಹೋಗುವ ವಸ್ತು ಚಿಕ್ಕದಾಗಿ ಕಾಣುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇರುತ್ತದೆ. ಚಂದ್ರ ದೊಡ್ಡದಾಗುವುದಕ್ಕೂ, ನಂತರ ಚಿಕ್ಕದಾಗುವುದಕ್ಕೂ ಅದೇ ಕಾರಣ.
ಚಂದ್ರನಿಗೆ ಎರಡು ಮುಖವುಂಟು
ಅಚ್ಚರಿಯ ವಿಷಯ ಗೊತ್ತಾ ನಾವು ಯಾವಾಗಲೂ ಕಾಣುವುದು ಚಂದ್ರನ ಒಂದೇ ಬದಿಯ ಮುಖ. ಇನ್ನೊಂದು ಬದಿಯ ಮುಖ ಕತ್ತಲಿನಲ್ಲಿ ಮರೆಯಾಗಿರುತ್ತದೆ. ಚಂದ್ರನ ಇನ್ನೊಂದು ಬದಿಯನ್ನು ಕಾಣಲು ಸಾಧ್ಯವಾಗಿದ್ದು ಅದರತ್ತ ಉಪಗ್ರಹ ಬಿಟ್ಟಾಗಲೇ. 1959ರಲ್ಲಿ ರಷ್ಯಾ ಹಾರಿಬಿಟ್ಟ ಲೂನಾ 3 ಉಪಗ್ರಹ ಚಂದ್ರನ ಇನ್ನೊಂದು ಬದಿಗೆ ಪ್ರಯಾಣಿಸಿ ಅದರ ಛಾಯಾಚಿತ್ರವನ್ನು ಸೆರೆಹಿಡಿದು ಭೂಮಿಗೆ ಕಳಿಸಿತ್ತು. ನಾವು ಚಂದ್ರನ ಹಿಮ್ಮುಖವನ್ನು ಕಂಡಿದ್ದು ಅದೇ ಮೊದಲು.
– ಅರ್ಚನಾ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.