ಕಾರು ಖರೀದಿಸ್ತೀರಾ?; ದೀಪಾವಳಿಗಿದೆ ಭರ್ಜರಿ ಆಫರ್
ಡಿಸ್ಕೌಂಟ್, ವಿನಿಮಯ ರಿಯಾಯಿತಿಯೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿರುವ ಮೋಟಾರು ಕಂಪೆನಿಗಳು
Team Udayavani, Oct 23, 2019, 7:33 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಹಬ್ಬದ ಸೀಸನ್ ನಲ್ಲಿ ಗ್ರಾಹಕರನ್ನು ಶೋ ರೂಂನತ್ತ ಸೆಳೆಯಲು ಕಾರು ತಯಾರಕ ಕಂಪನಿಗಳು ಆಫರ್ ಗಳ ಸುರಿಮಳೆಯನ್ನೇ ಹರಿಸುತ್ತಿದ್ದು, ಭರ್ಜರಿ ಡಿಸ್ಕೌಂಟ್ ನೀಡುತ್ತಿವೆ. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಕೆಲವು ಕಂಪೆನಿಗಳು ಆಫರ್ಗಳನ್ನು ಪ್ರಕಟಿಸಿದ್ದು, ಏನೇನಿದೆ ಎಂಬುದನ್ನು ನೋಡೋಣ.
ಸ್ವಿಫ್ಟ್ ಡೀಸೆಲ್ ಕಾರ್
ದೇಶದ ಪ್ರಮುಖ ಕಾರು ತಯಾರಕ ಮಾರುತಿ ಸುಜುಕಿ ಪ್ರಸ್ತುತ ಸ್ವಿಫ್ಟ್ ಡೀಸೆಲ್ ಕಾರುಗಳಿಗೆ 77,600 ರೂ. ವರೆಗೆ ರಿಯಾಯಿತಿಯನ್ನು ನೀಡುತ್ತಿದ್ದು, ಇದರಲ್ಲಿ 30,000 ರೂ. ನಗದು ರಿಯಾಯಿತಿ, 20,000 ವಿನಿಮಯ ಬೋನಸ್ ಹಾಗೂ 10 ಸಾವಿರ ರೂ. ಕಾರ್ಪೊರೆಟ್ ತೆರಿಗೆ ದರ ರಿಯಾಯಿತಿಯನ್ನು ನೀಡುತ್ತಿದೆ. ಜತೆಗೆ 17,600 ರೂ. ಮೌಲ್ಯದ 5 ವರ್ಷಗಳ ಗ್ಯಾರಂಟಿ ವೋಚರ್ ನೀಡಿದ್ದು, ಸೆಲೆರಿಯೊ ಹಾಗೂ ಆಲ್ಟೊ 800 ಖರೀದಿಯ ಮೇಲೆಯೂ 60,000 ರೂ. ವರೆಗೆ ರಿಯಾಯಿತಿಯನ್ನು ಘೋಷಿಸಿದೆ.
ಹ್ಯುಂಡೈ
ಹ್ಯುಂಡೈ ತನ್ನ ಗ್ರ್ಯಾಂಡ್ ಐ 10 ಆವೃತ್ತಿಯ (ಪೆಟ್ರೋಲ್/ಡೀಸೆಲ್) ಮೇಲೆ 95,000 ರೂ. ವರೆಗೆ ರಿಯಾಯಿತಿ ಪ್ರಯೋಜನಗಳನ್ನು ನೀಡುತ್ತಿದ್ದು, ಐ 20 (ಪೆಟ್ರೋಲ್ / ಡೀಸೆಲ್) ಮತ್ತು ಸ್ಯಾಂಟ್ರೊ (ಪೆಟ್ರೋಲ್) ಕಾರುಗಳ ಖರೀದಿಯ ಮೇಲೆ 65,000 ರೂ. ವರೆಗೆ ಆಫರ್ಗಳನ್ನು ನೀಡುತ್ತಿದೆ. ನೀಡಿದೆ.
ಹೋಂಡಾ
ಹೋಂಡಾ ಕಾರ್ ಇಂಡಿಯಾ ತನ್ನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಹೋಂಡಾ ಜಾಝ್ ಖರೀದಿಯ ಮೇಲೆ 50,000 ರೂ. ರಿಯಾಯಿತಿ ನೀಡುತ್ತಿದೆ. ಇದರಲ್ಲಿ 25 ಸಾವಿರ ರೂ. ನಗದು ರಿಯಾಯಿತಿ ಹಾಗೂ 25,000 ರೂ. ವಿನಿಮಯ ರಿಯಾಯಿತಿಯನ್ನು ನೀಡಿದೆ.
ಫೋಕ್ಸ್ ವ್ಯಾಗನ್
ಫೋಕ್ಸ್ ವ್ಯಾಗನ್ ಇಂಡಿಯಾ ಪೊಲೊದ ಖರೀದಿಯ ಮೇಲೆ 1.01 ಲಕ್ಷ ರೂ. ಆಫರ್ ನೀಡಿದ್ದು, 81 ಸಾವಿರ ರೂ. ನಗದು ರಿಯಾಯಿತಿ ಹಾಗೂ 20 ಸಾವಿರ ರೂ. ವಿನಿಮಯ ರಿಯಾಯಿತಿಯನ್ನು ಕೊಡುತ್ತಿದೆ.
ರೆನೊ
ಫ್ರೆಂಚ್ ಕಾರು ತಯಾರಕ ಕಂಪೆನಿ ರೆನೊ ತನ್ನ ಕ್ವಿಡ್ ಹ್ಯಾಚ್ ಬ್ಯಾಕ್ ಆವೃತ್ತಿಗಳ ಮೇಲೆ 1 ರೂ. ವಿಮೆ ಯೋಜನೆಯೊಂದಿಗೆ 2 ಸಾವಿರ ರೂ ಕಾರ್ಪೊರೆಟ್ ತೆರಿಗೆ ರಿಯಾಯಿತಿಯನ್ನು ನೀಡುತ್ತಿದೆ.
ಮಹೀಂದ್ರಾ
ಮಹೀಂದ್ರಾ ಕಂಪೆನಿ ಕೆಯುವಿ100 ನೆಕ್ಸ್ಟ್ ಕಾರು ಖರೀದಿಯ ಮೇಲೆ 56 ಸಾವಿರ ರೂ.ವರೆಗೆ ದರ ಕಡಿತ ಮಾಡಿದೆ. ಇದರಲ್ಲಿ 35,000 ರೂ. ನಗದು ರಿಯಾಯಿತಿ ಮತ್ತು 29,000 ರೂ. ವಿನಿಮಯ ಬೋನಸ್ ಸೇರಿದೆ.
ಟಾಟಾ
ಟಾಟಾ ಮೋಟಾರ್ಸ್ ಟಿಯಾಗೋ ಖರೀದಿ ಮೇಲೆ 15,000 ರೂ. ವಿನಿಮಯ ಬೋನಸ್ ಮತ್ತು 5000 ರೂ. ಕಾರ್ಪೊರೇಟ್ ತೆರಿಗೆ ರಿಯಾಯಿತಿಯೊಂದಿಗೆ 25 ಸಾವಿರ ನಗದು ರಿಯಾಯಿತಿ ಆಫರ್ ಅನ್ನು ನೀಡಿದೆ.
ಫೋರ್ಡ್
ಫೋರ್ಡ್ ಇಂಡಿಯಾ ಫಿಗೋ ಖರೀದಿ ಮೇಲೆ ಶೇ.7.99 ರಷ್ಟು ಬಡ್ಡಿದರವನ್ನು ನೀಡುತ್ತಿದ್ದು, ಫ್ರೀಸ್ಟೈಲ್ ಆವೃತ್ತಿಯ ಮೇಲೆ 10 ಸಾವಿರ ರೂ. ನಗದು ರಿಯಾಯಿತಿ ಹಾಗೂ 15 ಸಾವಿರ ರೂ. ವಿನಿಮಯ ಬೋನಸ್ ದೊರೆಯಲಿದೆ.
ಟೊಯೋಟಾ
ಟೊಯೋಟಾ ಇಟಿಯೋಸ್ನ ಆವೃತ್ತಿಯ ವಾಹನಗಳ ಖರೀದಿ ಮೇಲೆ 15 ಸಾವಿರ ರೂ. ಮೌಲ್ಯದ ಪರಿಕರಗಳನ್ನು ನೀಡುತ್ತಿದ್ದು, ಕಾರ್ಪೊರೇಟ್ ತೆರಿಗೆ ರಿಯಾಯಿತಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.