ಮಸೂದೆ ಹಿಂಪಡೆದ ಹಾಂಕಾಂಗ್ ; ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಮಸೂದೆ
Team Udayavani, Oct 24, 2019, 6:00 AM IST
ಹಾಂಕಾಂಗ್: ಹಾಂಕಾಂಗ್‌ನಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ, ಅಪರಾಧಿಗಳನ್ನು ಹಾಂಕಾಂಗ್‌ನಿಂದ ಚೀನಗೆ ಗಡಿಪಾರು ಮಾಡುವ ಮಸೂದೆಯನ್ನು ಹಿಂಪಡೆದಿರುವುದಾಗಿ ಹಾಂಕಾಂಗ್ ಶಾಸನ ಸಭೆ ಘೋಷಿಸಿದೆ. ಸಾವಿರಾರು ಜನರು ಬೀದಿಗಿಳಿದು ಈ ಮಸೂದೆ ವಿರುದ್ಧ ಪ್ರತಿಭಟಿಸಿದ್ದರು. ಕೊನೆಗೂ ಈ ಮಸೂದೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಆದರೆ ಪ್ರತಿಭಟನಕಾರರಿಗೆ ಈ ಘೋಷಣೆ ಸಮಾಧಾನ ತಂದಿಲ್ಲ. ಹೀಗಾಗಿ ಇನ್ನೂ ಪ್ರತಿಭಟನೆಯನ್ನು ಅವರು ಮುಂದುವರಿಸಿದ್ದಾರೆ. ಪ್ರತಿಭಟನಕಾರರು ಇಟ್ಟ ಐದು ಬೇಡಿಕೆಗಳ ಪೈಕಿ ಕೇವಲ ಒಂದು ಬೇಡಿಕೆಗೆ ಮಾತ್ರ ಸರಕಾರ ಸಮ್ಮತಿ ನೀಡಿದ್ದು, ಇತರ ನಾಲ್ಕು ಬೇಡಿಕೆಗಳು ಇನ್ನೂ ಪೂರೈಸಿಲ್ಲ ಎಂದು ಪ್ರತಿಭಟನಕಾರರು ಹೇಳಿದ್ದಾರೆ.
ಈ ಮಸೂದೆಯ ಪ್ರಕಾರ ಅಪರಾಧಿಗಳನ್ನು ಚೀನ, ತೈವಾನ್ ಮತ್ತು ಮಕಾವುಗೆ ಹಸ್ತಾಂತರ ಮಾಡಬಹುದಾಗಿತ್ತು. ಈ ಅಪರಾಧಿಗಳನ್ನು ಸರಿಯಾದ ರೀತಿಯಲ್ಲಿ ಚೀನದಲ್ಲಿ ನಡೆಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಹಾಂಕಾಂಗ್ ಜನರು ಪ್ರತಿಭಟನೆ ನಡೆಸುತ್ತಿದ್ದರು.
ಕ್ಯಾರಿ ಲ್ಯಾಮ್ ಎತ್ತಂಗಡಿ?: ಈ ಮಧ್ಯೆ ಪ್ರತಿಭಟನೆಗಳನ್ನು ಹತ್ತಿಕ್ಕಲು ವಿಫಲವಾಗಿದ್ದಕ್ಕೆ ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕ್ಯಾರಿ ಲ್ಯಾಮ್‌ರನ್ನು ಬದಲಿಸಲು ಚೀನ ಆಡಳಿತ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಈ ವರದಿಗಳನ್ನು ಚೀನ ತಳ್ಳಿಹಾಕಿದೆ. ಕ್ಯಾರಿ ಲ್ಯಾಮ್‌ರನ್ನು ಬದಲಿಸುವ ಯಾವುದೇ ಪ್ರಸ್ತಾವವಿಲ್ಲ. ಹಾಂಕಾಂಗ್‌ನಲ್ಲಿ ಹಿಂಸೆಯನ್ನು ತಡೆದು, ಶಾಂತಿ ಸ್ಥಾಪನೆಗೆ ಚೀನ ಎಲ್ಲ ಬೆಂಬಲವನ್ನೂ ಕ್ಯಾರಿಗೆ ಒದಗಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.