ಔಷಧ ಅಡ್ಡ ಪರಿಣಾಮ ವರದಿಗೆ ಆ್ಯಪ್‌ ಅಭಿವೃದ್ಧಿ

ಮಣಿಪಾಲ ಆಸ್ಪತ್ರೆಯಲ್ಲಿ ಬಿಡುಗಡೆ

Team Udayavani, Oct 24, 2019, 4:57 AM IST

q-28

ಮಣಿಪಾಲ: ಆ್ಯಂಡ್ರಾಯ್ಡ ಆ್ಯಪ್‌ ಅನ್ನು ಡಾ| ಎಚ್‌.ಎಸ್‌. ಬಲ್ಲಾಳ್‌ ಮತ್ತು ಡಾ| ಪೂರ್ಣಿಮಾ ಬಾಳಿಗಾ ಬಿಡುಗಡೆಗೊಳಿಸಿದರು.

ಉಡುಪಿ: ಮಣಿಪಾಲ ಕೆಎಂಸಿಯ ಫಾರ್ಮಕಾಲಜಿ ವಿಭಾಗ ಮತ್ತು ಎಂಐಟಿಯ ಮಾಹಿತಿ ಮತ್ತು ಸಂವಹನ ವಿಭಾಗಗಳು ರೋಗಿಗಳ ಸುರಕ್ಷೆಗಾಗಿ ಔಷಧಗಳ ಪ್ರತಿಕೂಲ ಪರಿಣಾಮಗಳನ್ನು ವರದಿ ಮಾಡಲು ಅಭಿವೃದ್ಧಿ ಪಡಿಸಿದ ಆ್ಯಂಡ್ರಾಯ್ಡ ಆ್ಯಪ್‌ ಅನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮತ್ತು ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಬುಧವಾರ ಬಿಡುಗಡೆಗೊಳಿಸಿದರು. ಈ ಆ್ಯಪ್‌ಗೆ ADRRIA (ಅಡ್ವರ್ಸ್‌ ಡ್ರಗ್‌ ರಿಯಾಕ್ಷನ್‌ ರಿಪೋರ್ಟಿಂಗ್‌, ಐಡೆಂಟಿಫಿಕೇಶನ್‌ ಆ್ಯಂಡ್‌ ಅಸೆಸೆ¾ಂಟ್‌) ಎಂದು ಹೆಸರಿಡಲಾಗಿದೆ.

ಈ ವಿಶಿಷ್ಟ ಆ್ಯಪ್‌ ಅನ್ನು ಫಾರ್ಮಕಾಲಜಿ ವಿಭಾಗದ ಡಾ| ನವೀನ್‌ ಪಾಟೀಲ್‌ ಮತ್ತು ಡಾ| ವೀಣಾ ನಾಯಕ್‌ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಅಕ್ಷಯ ಎಂ.ಜೆ. ಮತ್ತು ಅರಿಫ್ ರಾಜಾ ಅಭಿವೃದ್ಧಿ ಪಡಿಸಿದ್ದಾರೆ. “ಆ್ಯಪ್‌ ಮಾಹೆಯ ಪ್ರತಿಷ್ಠೆಯನ್ನು ಹೆಚ್ಚಿಸಲಿದೆ. ಕೆಲವು ಸಮಯದ ಬಳಿಕ ಮಣಿಪಾಲ ಸಮೂಹದ ಮಂಗಳೂರು, ಉಡುಪಿ, ಕಾರ್ಕಳದ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು’ ಎಂದು ಡಾ| ಬಲ್ಲಾಳ್‌ ಹೇಳಿದರು. ಹೊಸ ಸಂಶೋಧನೆ ಮತ್ತು ಸೃಜನಶೀಲತೆಗಳು ಹೆಚ್ಚಿ ಮಾಹೆಯ ಘನತೆ ಹೆಚ್ಚುವಂತಾಗಲಿ ಎಂದು ಡಾ| ಪೂರ್ಣಿಮಾ ಬಾಳಿಗಾ ಶುಭ ಹಾರೈಸಿದರು.

ಎಂಐಟಿ ಜಂಟಿ ನಿರ್ದೇಶಕ ಡಾ| ಬಿ.ಎಚ್‌.ವಿ. ಪೈ, ಕೆಎಂಸಿ ಡೀನ್‌ ಡಾ| ಶರತ್‌ ರಾವ್‌, ಆಸ್ಪತ್ರೆ ಸಿಒಒ ಸಿ.ಜಿ. ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಉಪಸ್ಥಿತರಿದ್ದರು.

ಸಾವಿಗೂ ಕಾರಣವಾದೀತು
ಔಷಧಗಳನ್ನು ಸೇವಿಸಿದಾಗ ಆಗುವ ನೋವು ಅದರ ಪ್ರತಿಕೂಲ ಅಡ್ಡಪರಿಣಾಮ (ಎಡಿಆರ್‌). ಇದು ಒಂದು ಬಗೆಯ ಔಷಧ ಅಥವಾ ಸುದೀರ್ಘ‌ ಕಾಲದಿಂದ ತೆಗೆದುಕೊಳ್ಳುವ ಔಷಧ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬಗೆಯ ಔಷಧಗಳಿಂದ ಉಂಟಾಗುವ ನೋವು ಆಗಿರಬಹುದು. ಔಷಧಗಳ ಅಡ್ಡ ಪರಿಣಾಮವೂ ರೋಗ ಹೆಚ್ಚಳ ಮತ್ತು ಸಾವಿಗೆ ಪ್ರಮುಖ ಕಾರಣವಾಗುತ್ತದೆ ಎಂದು ಡಾ| ನವೀನ್‌ ಪಾಟೀಲ್‌ ವಿವರಿಸಿದರು.

ಫಾರ್ಮಕಾಲಜಿ ವಿಭಾಗವು ಭಾರತದ ಫಾರ್ಮ ಕೋವಿಜಿಲೆನ್ಸ್‌ ಕಾರ್ಯಕ್ರಮದ ಔಷಧ ಅಡ್ಡ ಪರಿಣಾಮ ನಿಯಂತ್ರಣ ಕೇಂದ್ರದ ಮಾನ್ಯತೆಯನ್ನು ಹೊಂದಿದೆ. ಔಷಧ ಪ್ರತಿಕೂಲ ಪರಿಣಾಮದ ವರದಿಯು ನಿಯಂತ್ರಣ ಪ್ರಾಧಿಕಾರದ ಪರಿಶೀಲನೆ ಬಳಿಕ ಸಿಗಲಿದೆ. ಇದು ಔಷಧಗಳ ಬಗೆಗಿನ ಎಚ್ಚರಿಕೆ ಅಥವಾ ಔಷಧಗಳನ್ನು ನಿಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.