ವಿನೂತನ ತುಳು -ಕನ್ನಡ ರಾಸ್ ಗರ್ಭಾ ದಾಂಡಿಯ
Team Udayavani, Oct 25, 2019, 3:45 AM IST
ನಮ ಜವನೆರ್ – ಮೀರಾ ಭಾಯಂದರ್ ಸಂಸ್ಥೆಯು ತನ್ನ ವಾರ್ಷಿಕೋತ್ಸವದಲ್ಲಿ ವಿಶಿಷ್ಟವಾದ ಗುಜರಾತಿ ಹಾಗೂ ರಾಜಸ್ಥಾನಿ ರಾಸ್ ಗರ್ಭಾ ದಾಂಡಿಯಾವನ್ನು ಕನ್ನಡದ ಕೀರ್ತನೆಗಳಿಗೆ ಅಳವಡಿಸಿ ಹೊಸ ಶೈಲಿಯ ರಾಸ್ ಗರ್ಭಾ – ದಾಂಡಿಯಾವನ್ನು ಪ್ರಸ್ತುತ ಪಡಿಸಿತು .
ಈ ವರ್ಷ ಮೀರಾರೋಡ್ -ಭಯಾಂದರ್ ಪರಿಸರದ ತುಳು-ಕನ್ನಡಿಗರಿಗೆ ಕುಣಿತ ಭಜನೆ ಸ್ಪರ್ಧೆ ದಾಂಡಿಯಾ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಿತ್ತು . ಇದೊಂದು ವಿಶೇಷ ಪ್ರಯೋಗ . ಶರಣು ಶರಣು ಹೇ ಗಣಪನೇ … ಎಂದು ಆರಂಭವಾದ ವಿಜಯ ಶೆಟ್ಟಿ ಮೂಡುಬೆಳ್ಳೆ ಅವರ ಕಂಠಸಿರಿಯಿಂದ ಆರಂಭವಾದ ಹಾಡಿನೊಂದಿಗೆ ಗರ್ಭಾ – ದಾಂಡಿಯಾ ಪುಳಕಗೊಂಡಿತ್ತು . ಕನ್ನಡ ಕೀರ್ತನೆಗಳಿಗೆ ಗರ್ಭಾ ದಾಂಡಿಯಾದ ಸಂಗೀತದ ಅಳವಡಿಕೆ ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದು ಮೋಡಿ ಮಾಡಿತ್ತು. ವಿಜಯ ಶೆಟ್ಟಿಯವರೊಂದಿಗೆ ಹಾಡಿನಲ್ಲಿ ಸುನಿಲ್ ಶೆಟ್ಟಿ ಮುಲುಂಡ್ , ಶ್ರದ್ಧಾ ಬಂಗೇರ ಡೊಂಬಿವಿಲಿ ರಾಗ ಜೋಡಿಸಿದ್ದರು . ಕೀಬೋರ್ಡ್ ನಲ್ಲಿ ಯತಿರಾಜ್ ಉಪಾಧ್ಯಾಯ , ಕೆಜೋನ್ ಬಾಕ್ಸ್ ಮತ್ತು ಬೇಸ್ ಡ್ರಮ್ಸ…ನಲ್ಲಿ ಪದ್ಮರಾಜ್ ಉಪಾಧ್ಯಾಯ ಸಹಕರಿಸಿ¨ªಾರೆ. ಕಾರ್ತಿಕ್ ಭಟ್ ಕೊಳಲು ವಾದನದಲ್ಲಿ , ಪ್ರಶಾಂತ್ ರಾವ್ ಮತ್ತು ಅಜಿತ್ ಪಾಟೀಲ್ ಡ್ರಮ್ಸ…ನಲ್ಲಿ ಸಹಕರಿಸಿದರು. ಈ ಎಲ್ಲ ಸಂಗೀತದ ಲಯಕ್ಕೆ ತುಳು ಕನ್ನಡಿಗರು ಕುಣಿದದ್ದು ಚೆಲುವಾಗಿತ್ತು . ತಿರುಪತಿ ವೆಂಕಟರಮಣ , ಪಿಳ್ಳಂಗೋಪಿಯ ಚೆಲುವ ಕೃಷ್ಣ , ಲಿಂಗಯ್ಯ ಮಾತನಾಡೋ ಹಾಡುಗಳು ನೃತ್ಯಕ್ಕೆ ಇನ್ನೂ ಅಂದ ಕೊಟ್ಟಿದ್ದವು . ಈ ನಡುವೆ ಒಳ್ಳೆಯ ನೃತ್ಯ ಪಟು ಮತ್ತು ಒಳ್ಳೆಯ ಪೋಷಾಕು ಪಟುಗಳನ್ನು ಗುರುತಿಸಿ ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.
ಅಶೋಕ್ ವಳದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.