ಪುಳಕಗೊಳಿಸಿದ ಪುಟಾಣಿಗಳ ಹರಿದರ್ಶನ

ಯಶಸ್ವಿ ಕಲಾವೃಂದ ಪ್ರಸ್ತುತಿ

Team Udayavani, Oct 25, 2019, 5:00 AM IST

q-53

ಪಾಂಡವರು ದಿಗ್ವಿಜಯಕ್ಕಾಗಿ ಪೂಜಿಸಿ ಬಿಟ್ಟ ತುರಗ ಚಂಪಕಾವತಿಯನ್ನು ಪ್ರವೇಶಿಸಿದಾಗ ಶ್ರೀ ಕೃಷ್ಣನ ದರ್ಶನ ಭಾಗ್ಯ ಸಮೀಪಿಸುತ್ತಿದೆ ಎಂದು ಚಂಪಕಾನಗರದ ಸರ್ವಜನರೂ ಹರ್ಷಿತರಾದರು. ಹಂಸಧ್ವಜ ನೃಪಾಲ ಸುಧನ್ವನನ್ನು ದಳಾಧಿಪತಿಯಾಗಿ ನಿಯಮಿಸಿದಾಗ ಸುಧನ್ವನ ಪ್ರವೇಶ.

ಕುಂಭಾಶಿಯ ಚಂಡಿಕಾ ಪರಮೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿಯ ವಿಷೇಶ ಕಾರ್ಯಕ್ರಮವಾಗಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆಯ ಪುಟಾಣಿಗಳು ಗುರು ಕೊಕೂರು ಸೀತಾರಾಮ ಶೆಟ್ಟಿಯವರ ನಿರ್ದೇಶನದಲ್ಲಿ ಹರಿದರ್ಶನ ಯಕ್ಷಗಾನ ಪ್ರದರ್ಶಿಸಿದರು.

ಚಂಪಕಾಪುರದ ಅರಸ ಹಂಸಧ್ವಜನಾಗಿ ರಂಗ ಪ್ರವೇಶಿಸಿದ ಕು| ನಿಶಾ ಮಲ್ಯಾಡಿ ಗಾಂಭೀರ್ಯವನ್ನು ಪ್ರದರ್ಶಿಸಿ, ಸಾಂಪ್ರದಾಯಿಕ ನಡೆಯೊಂದಿಗೆ ಭಕ್ತಿಯ ಹೂರಣವನ್ನು ತುಂಬಿಕೊಟ್ಟರು. ಜೊತೆಗೆ ಮಂತ್ರಿಯಾಗಿ ಮಾ| ಹೃಷಿಕೇಶ ಪಾತ್ರ ಪೋಷಣೆ ಮಾಡುವಲ್ಲಿ ಯಶಸ್ವಿಯಾದರು.

ಪಾಂಡವರು ದಿಗ್ವಿಜಯಕ್ಕಾಗಿ ಪೂಜಿಸಿ ಬಿಟ್ಟ ತುರಗ ಚಂಪಕಾವತಿಯನ್ನು ಪ್ರವೇಶಿಸಿದಾಗ ಶ್ರೀ ಕೃಷ್ಣನ ದರ್ಶನ ಭಾಗ್ಯ ಸಮೀಪಿಸುತ್ತಿದೆ ಎಂದು ಚಂಪಕಾನಗರದ ಸರ್ವಜನರೂ ಹರ್ಷಿತರಾದರು. ಹಂಸಧ್ವಜ ನೃಪಾಲ ಸುಧನ್ವನನ್ನು ದಳಾಧಿಪತಿಯಾಗಿ ನಿಯಮಿಸಿದಾಗ ಸುಧನ್ವನ ಪ್ರವೇಶ. ಪ್ರಭುದ್ಧತೆಯ ರೀತಿಯಲ್ಲಿ ಸಭ್ಯತೆಯನ್ನು ಮೆರೆದು ಪ್ರಸಂದ ಕೊನೆಯ ತನಕವೂ ಪಾತ್ರದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟರು. ವೀರ, ಶೃಂಗಾರ, ಕರುಣ ಹೀಗೆ ಎಲ್ಲಾ ರಸದ ಇತಿಮಿತಿಯರಿತು ಪಾತ್ರಕ್ಕೆ ಔಚಿತ್ಯ ಒದಗಿಸಿಕೊಟ್ಟರು. ಕು| ಪಂಚಮಿ ವೈದ್ಯ ವೀರ ಸುಧನ್ವರಾದರು, ಧೀರ ಸುಧನ್ವರಾದರು. ಮೋಕ್ಷದ ಸುಧನ್ವರಾದರು.

ರಣರಂಗಕ್ಕೆ ಹೊರಡುವಲ್ಲಿ ತಾಯಿಯ ಆಶೀರ್ವಾದಕ್ಕಾಗಿ ಆಕೆಯ ಅಂತಃಪುರಕ್ಕೆ ತೆರಳಿ ಮಾತೆ ಸುಗಭೆìಗೆ ವಂದಿಸಿದಾಗ ಲೇಸು ಮಗನೆ ಎಂದು ಮಗನಿಗೆ ಶುಭ ಹಾರೈಸಿ, ಕರ್ತವ್ಯ ಪ್ರಜ್ಞೆಯನ್ನು ನೆನಪಿಸಿಕೊಟ್ಟವರು ಸುಭದ್ರಾ ಪಾತ್ರದಾರಿ ಮಾ| ಪ್ರತೀಕ್‌ ಗಾಣಿಗ. ಮುದ್ದಾದ ವೇಷಕ್ಕೆ ನ್ಯಾಯ ಒದಗಿಸಿಕೊಟ್ಟು ಪ್ರೇಕ್ಷಕರ ಮನಗೆದ್ದರು.

ಬಳಿಕ ಮಡದಿ ಪ್ರಭಾವತಿಯಲ್ಲಿ ನಡೆಯೋಣವೆಂದರೆ ಗಂಧ, ಅಕ್ಷತೆ, ವೀಳ್ಯವನ್ನು ಹಿಡಿದು ಅಣ್ಣನಿಗೆ ಶುಭ ಹಾರೈಸುವುದಕ್ಕೆ ಇದಿರಾದವಳು ತಂಗಿ ಕುವಲೆ. 6 ವರ್ಷದ ಬಾಲಕಿ ಕು| ಪರಿಣಿತಾ ವೈದ್ಯ ಚುರುಕಾಗಿ ಅಭಿನಯಿಸಿ ಪ್ರಶಂಸೆಗೆ ಪಾತ್ರಳಾದರು.

ಸತಿ ಶಿರೋಮಣಿ ಪ್ರಭಾವತಿ ಪದ್ಯಕ್ಕೆ ರಂಗ ಪ್ರವೇಶ ಮಾಡಿದವರು ಕು| ಪೂಜಾ ಆಚಾರ್‌. ಮನೋಜ್ಞ ನೃತ್ಯದೊಂದಿಗೆ ಜನ ಮಾನಸದಲ್ಲಿ ಉಳಿದರು. ಮನೆಯಲ್ಲಿ ಉಳಿವ ಸತಿಗೆ ಜವಾಬ್ದಾರಿ ಎಷ್ಟು? ತಾನೆಷ್ಟು ಕರ್ತವ್ಯ ನಿರತಳು? ಹೆಣ್ಣಿಗೆ ಸ್ವರ್ಗ ಯಾವುದು? ಹೆಣ್ಣಾದವಳು ಹೇಗಿರಬೇಕು? ಇವೆಲ್ಲವನ್ನು ರಂಗದಲ್ಲಿ ತುಂಬಿಕೊಟ್ಟು ಪಾತ್ರದ ಪ್ರಬುದ್ಧತೆ ಮೆರೆದರು.

ಅರ್ಜುನನಾಗಿ ಮಾ| ಸಾತ್ಯಕಿ ಮಾತಿನ ಶೈಲಿ, ಕುಣಿತ, ರಂಗನಡೆ ಎಲ್ಲಾ ಕಡೆಯಲ್ಲಿಯೂ ಹದವರಿತು ವ್ಯವಹರಿಸಿದರು. ಸಂಗಡ ಒಡ್ಡೋಲಗಕ್ಕೆ ಪ್ರದ್ಯಮ್ನ-ವೃಷಕೇತುವಾಗಿ ನೆರವಾದವರು ಮಾ| ಹೃಷಿಕೇಶ, ಕು| ನಿಶಾ ಭಂಡಾರಿ ಮಲ್ಯಾಡಿ. ಅರ್ಜುನನ ಒಡ್ಡೋಲಗದಲ್ಲಿ ಮುಂಡಾಸು ವೇಷಧಾರಿಯಾಗಿ ಭರ್ಜರಿ ರಂಗದಲ್ಲಿ ಅಬ್ಬರದಿಂದ ಕಾಣಿಸಿಕೊಂಡರು.

ಸುಧನ್ವಾರ್ಜುನರಿಗೆ ಯುದ್ಧ. ಅರ್ಜುನ ಕೈ ಸೋತಾಗ ಸುಧನ್ವನಿಗೆ ಹರಿದರ್ಶನ. ತನ್ಮೂಲಕ ಚಂಪಕಾನಗರಕ್ಕೇ ಹರಿದರ್ಶನ. ಕು| ಪೂಜಾಳ ಬಂದ ತಕ್ಷಣದೊಳಲ್ಲಿಗೆ… ಪದ್ಯಕ್ಕೆ ಮಿಂಚಿನ ಪ್ರವೇಶ.

ಸುಧನ್ವನ ಮೋಕ್ಷ, ಹರಿದರ್ಶನ ಪ್ರಸಂಗ ಪ್ರದರ್ಶನದ ಯಶಸ್ಸಿಗೆ ಕಾರಣರಾದವರು ಭಾಗವತರು ಪ್ರಾಚಾರ್ಯ ಕೆ.ಪಿ. ಹೆಗಡೆ, ಲಂಬೋದರ ಹೆಗಡೆ. ಮದ್ದಲೆಯಲ್ಲಿ ಲೋಹಿತ್‌ ಕೊಮೆ, ಭರತ್‌ಚಂದನ್‌ ಕೋಟೇಶ್ವರ. ಚಂಡೆಯಲ್ಲಿ ಪ್ರಸಿದ್ಧ ಚಂಡೆ ವಾದಕ ಕೋಟ ಶಿವಾನಂದ.

ಪ್ರಶಾಂತ್‌ ಮಲ್ಯಾಡಿ

ಟಾಪ್ ನ್ಯೂಸ್

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.