ಒಂದು ಆಪ್ತ ಮಾತುಕತೆಯ ಸುತ್ತ…


Team Udayavani, Oct 25, 2019, 6:00 AM IST

q-79

ದ್ವಾರಕೀಶ್‌ ಇರೋದು ಇಷ್ಟು, ಆದರೆ ಮಾಡಿರೋ ಸಾಧನೆ ಅಷ್ಟು ದೊಡ್ಡದು. ಸತತವಾಗಿ ಹದಿನೆಂಟು ಸಿನಿಮಾ ಸೋತರೂ, ಜಗ್ಗದೇ, ಚಿತ್ರರಂಗದಿಂದ ದೂರ ಹೋಗದೇ, ದೇವರಿಗೆ ಚಾಲೆಂಜ್‌ ಹಾಕಿದವರು. ಎಷ್ಟು ಕಷ್ಟ ಕೊಡ್ತೀಯಾ ಕೊಡು ಎಂದು ಧೈರ್ಯದಿಂದ ಎಲ್ಲವನ್ನು ಎದುರಿಸಿದವರು…

ಕೆಲವು ಕಾರ್ಯಕ್ರಮಗಳೇ ಹಾಗೆ. ಅಲ್ಲಿ ಆತ್ಮೀಯ ವಾತಾವರಣವಿರುತ್ತದೆ, ಪರಸ್ಪರ ಪ್ರೀತಿಯ ಆಲಿಂಗನವಿರುತ್ತದೆ, ಕಷ್ಟದ ದಿನಗಳ ಮೆಲುಕು, ತಮಾಷೆ ಮಾತು, ಭವಿಷ್ಯದ ಕನಸು … ಹೀಗೆ ಸಾಕಷ್ಟು ಅಂಶಗಳು ಬಂದು ಹೋಗುತ್ತವೆ. ಆದರೆ, ಇತ್ತೀಚೆಗೆ ಚಿತ್ರರಂಗದಲ್ಲಿ ಇಂತಹ ವಾತಾವರಣ ಕಡಿಮೆಯಾಗುತ್ತಿರುವುದು ಸುಳ್ಳಲ್ಲ. ಆದರೆ, ಇತ್ತೀಚೆಗೆ ನಡೆದ “ಆಯುಷ್ಮಾನ್‌ ಭವ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅಂತಹ ಒಂದು ಆತ್ಮೀಯತೆಗೆ ಸಾಕ್ಷಿಯಾಯಿತು. ದ್ವಾರಕೀಶ್‌ ನಿರ್ಮಾಣದ 52ನೇ ಸಿನಿಮಾವಾದ “ಆಯುಷ್ಮಾನ್‌ ಭವ’ ಚಿತ್ರದಲ್ಲಿ ಶಿವರಾಜಕುಮಾರ್‌ ನಾಯಕರಾಗಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳ ಬಿಡುಗಡೆಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌, ಉಪೇಂದ್ರ, ವಿ. ಮನೋಹರ್‌ ಸೇರಿದಂತೆ ಚಿತ್ರರಂಗದ ಅನೇಕರು ಸಾಕ್ಷಿಯಾದರು.

ಮುಖ್ಯವಾಗಿ ದ್ವಾರಕೀಶ್‌ ಕುರಿತಾಗಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಆಡಿದ ಮಾತುಗಳು, ದ್ವಾರಕೀಶ್‌ ಅವರ ಛಲ, ಸಿನಿಮಾ ಪ್ರೀತಿಯನ್ನು ಕಟ್ಟಿಕೊಡುವಂತಿತ್ತು. “ಇವತ್ತು ನಾನೇನಾದರೂ ಸಾಧನೆ ಮಾಡಿದ್ದೇನೆ ಎಂದರೆ ಅದು ದ್ವಾರಕೀಶ್‌ ಅವರನ್ನು ನೋಡಿ ಕಲಿತಿದ್ದು. ದ್ವಾರಕೀಶ್‌ ಇರೋದು ಇಷ್ಟು, ಆದರೆ ಮಾಡಿರೋ ಸಾಧನೆ ಅಷ್ಟು ದೊಡ್ಡದು. ಸತತವಾಗಿ ಹದಿನೆಂಟು ಸಿನಿಮಾ ಸೋತರೂ, ಜಗ್ಗದೇ, ಚಿತ್ರರಂಗದಿಂದ ದೂರ ಹೋಗದೇ, ದೇವರಿಗೆ ಚಾಲೆಂಜ್‌ ಹಾಕಿದವರು. ಎಷ್ಟು ಕಷ್ಟ ಕೊಡ್ತೀಯಾ ಕೊಡು ಎಂದು ಧೈರ್ಯದಿಂದ ಎಲ್ಲವನ್ನು ಎದುರಿಸಿದ ಪರಿಣಾಮ ಇವತ್ತು ದೊಡ್ಡ ಯಶಸ್ಸು ಕಂಡಿದ್ದಾರೆ. “ಆಪ್ತಮಿತ್ರ’ ಚಿತ್ರದಿಂದ ಮತ್ತೆ ಮೇಲಕ್ಕೆ ಬಂದವರು ದ್ವಾರಕೀಶ್‌. ನಾನು ಆ ಸಿನಿಮಾ ಹಿಟ್‌ ಆಗುತ್ತದೆ ಎಂದು ಆವತ್ತೇ ಹೇಳಿದ್ದೆ. ಏಕೆಂದರೆ ಆ ಸಿನಿಮಾವನ್ನು ನಾನು ಮಾಡಬೇಕಿತ್ತು. ಈಗ “ಆಯುಷ್ಮಾನ್‌ ಭವ’. ಈ ಚಿತ್ರ ಕೂಡಾ ದೊಡ್ಡ ಹಿಟ್‌ ಆಗುತ್ತದೆ. ಸಾಮಾನ್ಯವಾಗಿ ಅನಂತ್‌ನಾಗ್‌ ಹೆಚ್ಚು ಮಾತನಾಡುವುದಿಲ್ಲ. ಆದರೆ, ಈ ಚಿತ್ರದ ಬಗ್ಗೆ ವಿಶ್ವಾಸದಿಂದ ಇಷ್ಟೊಂದು ಮಾತನಾಡಿದ್ದಾರೆಂದರೆ ಇದರಲ್ಲಿ ಏನೋ ಇದೆ ಎಂದೇ ಅರ್ಥ. ಮುಖ್ಯವಾಗಿ ಚಿತ್ರದ ಪೋಸ್ಟರ್‌ನಲ್ಲಿ ಎಲ್ಲಾ ಕಲಾವಿದರು ನಗುಮೊಗದಿಂದ ಫೋಸ್‌ ಕೊಟ್ಟಿದ್ದಾರೆ. ಅದೇ ಸಿನಿಮಾದ ಮೊದಲ ಗೆಲುವು’ ಎಂದ ರವಿಚಂದ್ರನ್‌, ಶಿವರಾಜಕುಮಾರ್‌ ಅವರ ಬಗ್ಗೆಯೂ ಮಾತನಾಡಿದರು. “ಶಿವರಾಜಕುಮಾರ್‌ ಅವರಿಗೆ ವಯಸ್ಸೇ ಆಗುವುದಿಲ್ಲ. ನಾವಿಬ್ಬರು ಆತ್ಮೀಯರು. ಅವರ ನೋವಲ್ಲಿ, ಸುಖದಲ್ಲಿ ಸ್ಪಂದಿಸುತ್ತೇನೆ’ ಎನ್ನುತ್ತಾ “ಆಯುಷ್ಮಾನ್‌ ಭವ’ ಸಿನಿಮಾಕ್ಕೆ ಶುಭ ಹಾರೈಸಿದರು. ಇದೇ ವೇಳೆ ನಿರ್ದೇಶಕ ಪಿ. ವಾಸು, ಹೇಗೆ ಒಳ್ಳೆಯ ನಿರ್ದೇಶಕರೋ ಅದರಂತೆ ಒಳ್ಳೆಯ ನಟರು.

ಅವರು ಮಾಡಿ ತೋರಿಸಿದ್ದನ್ನು ನಾವು ಮಾಡಿದರೆ ಅರ್ಧ ಗೆದ್ದಂತೆ’ ಎನ್ನಲು ಮರೆಯಲಿಲ್ಲ. ನಿರ್ದೇಶಕ ಪಿ.ವಾಸು ಕೂಡಾ ದ್ವಾರಕೀಶ್‌ ಬ್ಯಾನರ್‌ನಲ್ಲಿ ಮತ್ತೆ ಸಿನಿಮಾ ಮಾಡಿದ ಖುಷಿ ಹಂಚಿಕೊಂಡರು. ಇದು ತುಂಬಿದ ಕುಟುಂಬ ಹೇಗಿರುತ್ತದೆ ಹಾಗೆ ಇರುವ ಸಿನಿಮಾ. ಈ ಸಿನಿಮಾ ಮೂಲಕ ಶಿವರಾಜ ಕುಮಾರ್‌ ಅವರ ಅಭಿಮಾನಿ ವರ್ಗ ಹೆಚ್ಚಾಗುತ್ತದೆ ಎಂದ ವಾಸು, ಸೆಟ್‌ನಲ್ಲಿ ತುಂಬಾ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಶಿವರಾಜಕುಮಾರ್‌ ಅವರನ್ನು ಮನವಿ ಮಾಡಿದರು.

ಈ ಚಿತ್ರಕ್ಕೆ ಗುರುಕಿರಣ್‌ ಸಂಗೀತವಿದ್ದು, ಇದು ಗುರುಕಿರಣ್‌ ಸಂಗೀತದ 100ನೇ ಸಿನಿಮಾ. ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ತಮ್ಮ ನಿರ್ಮಾಣದ 52ನೇ ಸಿನಿಮಾದ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡರು. ಜೊತೆಗೆ ತಮ್ಮ ಬೆಳವಣಿಗೆಗೆ ಕಾರಣರಾದವರನ್ನು ನೆನಪಿಸಿಕೊಂಡರು. ಈ ಚಿತ್ರ ನವೆಂಬರ್‌ 1 ರಂದು ತೆರೆಕಾಣುತ್ತಿದೆ.

ರವಿ ರೈ

ಟಾಪ್ ನ್ಯೂಸ್

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!

Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!

It was not the Wright brothers who invented the airplane, but Rishi Bharadwaj: Governor

Anandiben Patel: ವಿಮಾನ ಅನ್ವೇಷಿಸಿದ್ದು ರೈಟ್‌ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ

A “bomb cyclone” explosion in an American prison soon!

bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್‌ ಸೈಕ್ಲೋನ್‌’ ಸ್ಫೋಟ!

Manipur: Protest for justice with empty coffins

Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.