ಕ್ಯೂಎಸ್ ರ್‍ಯಾಂಕಿಂಗ್: ಮಾಹೆಗೆ 26ನೇ ಸ್ಥಾನ
Team Udayavani, Oct 25, 2019, 12:33 AM IST
ಡಾ| ವಿನೋದ ಭಟ್ ಅವರು ರ್‍ಯಾಂಕಿಂಗ್ ಮಾನಪತ್ರವನ್ನು ಕೇಂದ್ರ ಸಚಿವ ಡಾ| ರಮೇಶ್ ಪೋಖ್ರಿಯಾಲ್ ಅವರಿಂದ ಸ್ವೀಕರಿಸಿದರು.
ಉಡುಪಿ: ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯವು ಕ್ಯೂಎಸ್ (ಕ್ವಾಕರೆಲಿ ಸೈಮಂಡ್ಸ್) ಇಂಡಿಯಾ ಯುನಿವರ್ಸಿಟಿ ರ್‍ಯಾಂಕಿಂಗ್ಸ್ 2020ರಲ್ಲಿ ಖಾಸಗಿ ವಿ.ವಿ.ಗಳ ವಿಭಾಗದಲ್ಲಿ ಮೂರನೆಯ ರ್‍ಯಾಂಕ್ ಮತ್ತು ಒಟ್ಟಾರೆ 26ನೆಯ ಸ್ಥಾನವನ್ನು ಪಡೆದುಕೊಂಡಿದೆ. ಇದರಿಂದ ಮಾಹೆ ಕಳೆದ ವರ್ಷದ ಸ್ಥಾನವನ್ನು ಉಳಿಸಿಕೊಂಡಿದೆ.
ಮಾಹೆ ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್ ಅವರು, ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ಡಾ| ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಂದ ರ್‍ಯಾಂಕಿಂಗ್ ಪ್ರಮಾಣಪತ್ರವನ್ನು ಗೋವಾದಲ್ಲಿ ನಡೆದ ಕ್ಯೂಎಸ್ ಇಂಡಿಯಾ ಸಮಾವೇಶದಲ್ಲಿ ಸ್ವೀಕರಿಸಿದರು. ನಿರ್ದೇಶಕ (ಗುಣಮಟ್ಟ) ಡಾ| ಕ್ರಿಸ್ಟೋಫರ್ ಸುಧಾಕರ್ ಉಪಸ್ಥಿತರಿದ್ದರು.
ಶೈಕ್ಷಣಿಕ ಮಟ್ಟ, ಮಾಲಕರ ವರ್ಚಸ್ಸು, ಬೋಧಕರು- ವಿದ್ಯಾರ್ಥಿಗಳ ಅನುಪಾತ, ಸಾಧನೆಗಳ ಮಾನದಂಡದಲ್ಲಿ ರ್‍ಯಾಂಕಿಂಗ್ ನೀಡಲಾಗಿದೆ. ಸಂಸ್ಥೆಯ ಹಿರಿತನ, ವಿಶಾಲ ಸ್ತರದ ಕೋರ್ಸುಗಳು, ಖಾಸಗಿಯಾದರೂ ಲಾಭ ಉದ್ದೇಶವಿಲ್ಲದ ಸ್ಥಾನಮಾನ, ಉನ್ನತ ದರ್ಜೆಯ ಸಂಶೋಧನೆ, ಸಮಗ್ರ ವಿಷಯವಾರು ಕ್ಷೇತ್ರಗಳು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು, ಬೋಧಕರು- ವಿದ್ಯಾರ್ಥಿಗಳ ಸೂಚಕದಲ್ಲಿಯೂ ಪ್ರತ್ಯೇಕ ವಿಶಿಷ್ಟ ಸ್ಥಾನವನ್ನು ಮಾಹೆ ಪಡೆದುಕೊಂಡಿದೆ. ಈ ವರ್ಷ 100 ವಿ.ವಿ.ಗಳನ್ನು ರ್‍ಯಾಂಕಿಂಗ್‌ಗೆ ಪರಿಗಣಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.