ರೋಹಿತ್‌ ಶರ್ಮಾ: ಎದ್ದಿದೆ ಮಲಗಿದ ಹುಲಿ, ಶುರುವಾಗಿದೆ ಅಬ್ಬರ

ಟೆಸ್ಟ್‌ನಲ್ಲಿ ಆರಂಭಿಕರಾಗಿ ಬಡ್ತಿ, ಶುರುವಾಗಿದೆ ಅಬ್ಬರ

Team Udayavani, Oct 26, 2019, 4:03 AM IST

rohit-sha

ವಿಶ್ವಕ್ರಿಕೆಟ್‌ನಲ್ಲಿ ಅತೀ ಅನಿರೀಕ್ಷಿತ ಬ್ಯಾಟ್ಸ್‌ಮನ್‌ ಎಂದರೆ ಯಾರು? ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಹೇಳುವುದಾದರೆ ಅದು ರೋಹಿತ್‌ ಶರ್ಮ ಹೊರತು ಬೇರಾರೂ ಆಗಿರಲು ಸಾಧ್ಯವಿಲ್ಲ. ಭಾರತದ ಹಳ್ಳಿಕಡೆ ಒಂದು ಮಾತು ಚಾಲ್ತಿಯಲ್ಲಿದೆ-ಅವನು ಎದ್ದರೂ ಕುಂಭಕರ್ಣ, ಬಿದ್ದರೂ ಕುಂಭಕರ್ಣ! ಕುಂಭಕರ್ಣ ಮಲಗಿಬಿಟ್ಟರೆ ಅವನನ್ನು ಮತ್ತೆ ಆರು ತಿಂಗಳು ಎಬ್ಬಿಸಲು ಸಾಧ್ಯವಿಲ್ಲ. ಒಮ್ಮೆ ಅವನು ಎದ್ದರೆ ಅವನನ್ನು ತಡೆಯಲೂ ಸಾಧ್ಯವಿಲ್ಲ. ರೋಹಿತ್‌ ಶರ್ಮ ಆಟದ ರೀತಿ ಕುಂಭಕರ್ಣನನ್ನೇ ಹೋಲುತ್ತದೆ.

ರಾಕ್ಷಸನಿಗೆ ಹೋಲಿಸುತ್ತೀರಲ್ಲ ಎಂದು ವಿವಾದವೆಬ್ಬಿಸುವ ಅಗತ್ಯವಿಲ್ಲ. ಇಲ್ಲಿ ಹೋಲಿಸುತ್ತಿರುವುದು ಕುಂಭಕರ್ಣನ ಸಾಮರ್ಥ್ಯಕ್ಕೆ, ಸ್ವಭಾವಕ್ಕೆ. ರೋಹಿತ್‌ ಕೂಡ ಹಾಗೆಯೇ. ಕೆಲವೊಮ್ಮೆ ಅವರ ಬ್ಯಾಟ್‌ ಮಲಗಿಬಿಟ್ಟರೆ, ಅವರ ಸಾಮರ್ಥ್ಯದ ಬಗ್ಗೆಯೇ ಅನುಮಾನ ಬರುವಷ್ಟು ತಣ್ಣಗಾಗುತ್ತಾರೆ. ಸಿಡಿಯಲು ಆರಂಭಿಸಿದರೆ, ಆಗಲೂ ಅನುಮಾನ ಬರುವಷ್ಟು ಸಿಡಿಯುತ್ತಾರೆ. ರೋಹಿತ್‌ ಅಬ್ಬರಿಸುವಾಗ ಇವನು ನಿಜಕ್ಕೂ ಮನುಷ್ಯನಾ ಅಥವಾ ಮಾಯಗಾರನಾ ಎನ್ನುವಂತೆ ಕಾಣಿಸುತ್ತಾರೆ! ಇಂತಹ ರೋಹಿತ್‌ ಶರ್ಮಗಿದ್ದ ಏಕೈಕ ಕಳಂಕ ಟೆಸ್ಟ್‌ನಲ್ಲಿ ಅವರ ಆಟ ಏನೇನೂ ಇಲ್ಲ ಎನ್ನುವುದು.

ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಆರಂಭಿಕನಾಗಿ ಬಂದು ಅನಭಿಷಿಕ್ತ ಸಾಮ್ರಾಟನಂತೆ ಮಿಂಚಿದ ಅವರು ಟೆಸ್ಟ್‌ನಲ್ಲಿ ಮಾತ್ರ 5-6ನೆ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದು ಪದೇ ಪದೇ ವಿಫ‌ಲವಾಗಿದ್ದರು. ಅದರ ಪರಿಣಾಮ ರೋಹಿತ್‌ ಶಾಶ್ವತವಾಗಿ ಟೆಸ್ಟ್‌ನಲ್ಲಿ ಸ್ಥಾನ ಕಳೆದುಕೊಳ್ಳುವುದು ಖಚಿತ ಎಂಬ ಅಭಿಪ್ರಾಯ ನಿರ್ಮಾಣವಾಗಿತ್ತು. ಸ್ವತಃ ರೋಹಿತ್‌ ಶರ್ಮ ಕೂಡ ನಾನು ಅರ್ಧ ಕ್ರಿಕೆಟ್‌ ಜೀವನ ಮುಗಿಸಿದ್ದೇನೆ, ಈಗ ನನಗೆ ಟೆಸ್ಟ್‌ನಲ್ಲಿ ಆಡಲೇಬೇಕೆಂದೇನಿಲ್ಲ ಎಂದು ಒಂದೆರಡು ವರ್ಷಗಳ ಹಿಂದೆಯೇ ಹೇಳಿದ್ದರು. ಹೀಗೆ ಟೆಸ್ಟ್‌ನಿಂದ ಹೊರಬಿದ್ದೇ ಬಿಟ್ಟಂತಿದ್ದ ಅವರ ಪಾಲಿಗೆ ಪವಾಡವೊಂದು ಜರುಗಿತು.

ಪವಾಡವೇನು?: ಭಾರತ ಟೆಸ್ಟ್‌ ತಂಡದಲ್ಲಿ ಹಿಂದೆ ಮುರಳಿ ವಿಜಯ್‌ ಹಾಗೂ ಶಿಖರ್‌ ಧವನ್‌ ಆರಂಭಿಕರಾಗಿ ಯಶಸ್ವಿಯಾಗಿದ್ದರು. ಈ ಹಂತದಲ್ಲಿ ಮುರಳಿ ವಿಜಯ್‌ ಲಯ ಕಳೆದುಕೊಂಡು ತಂಡದಿಂದ ಹೊರಬಿದ್ದರು. ಮತ್ತೆ ಹಿಂತಿರುಗಿದರೂ ಅವರಿಗೆ ಟೆಸ್ಟ್‌ನಲ್ಲಿ ನೆಲೆಕಂಡುಕೊಳ್ಳಲು ಆಗದೇ ಪೂರ್ಣವಾಗಿ ಹೊರಬಿದ್ದಿದ್ದಾರೆ. ಆ ಹಂತದಲ್ಲಿ ಕರ್ನಾಟಕದ ಕೆ.ಎಲ್‌.ರಾಹುಲ್‌ ಆರಂಭಿಕರಾಗಿ ಬಡ್ತಿ ಪಡೆದು ಮಿಂಚಿದರು. ಅಷ್ಟರಲ್ಲಿ ಇನ್ನೊಬ್ಬ ಆರಂಭಿಕ ಶಿಖರ್‌ ಧವನ್‌ ಲಯ ಕಳೆದುಕೊಂಡು ತಂಡದಿಂದ ಹೊರಬಿದ್ದರು. ರಾಹುಲ್‌ರನ್ನು ಮುಂಬೈನ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಕೂಡಿಕೊಂಡು ಭರ್ಜರಿಯಾಗಿ ಆಡಿದರು.

ಆಗಿನ್ನೂ ಕೇವಲ 19 ವರ್ಷದ ಹುಡುಗ ಪೃಥ್ವಿ ಶಾ ಬಗ್ಗೆ ಭಾರೀ ಭರವಸೆಗಳು ಶುರುವಾದವು. ಮುಂದಿನ ಆಸ್ಟ್ರೇಲಿಯ ಪ್ರವಾಸಕ್ಕೆ ಆಯ್ಕೆಯಾದರೂ, ಅನುಮಾನಾಸ್ಪದವೆಂಬಂತೆ ಅವರಲ್ಲಿ ಕಣಕ್ಕಿಳಿಯದೇ ದಿಢೀರ್‌ ದೇಶಕ್ಕೆ ಹಿಂತಿರುಗಿದರು. ಮುಂದೆ ಕೆಲವು ತಿಂಗಳ ನಂತರ ಅವರು ಉದ್ದೀಪನ ಸೇವನೆ ಮಾಡಿ 8 ತಿಂಗಳ ನಿಷೇಧಕ್ಕೊಳಗಾದರು! ಆಸ್ಟ್ರೇಲಿಯದಲ್ಲಿ ರಾಹುಲ್‌ರನ್ನು ಕೂಡಿಕೊಂಡಿದ್ದು ಮತ್ತೂಬ್ಬ ಕನ್ನಡಿಗ ಮಾಯಾಂಕ್‌ ಅಗರ್ವಾಲ್‌. ಇಲ್ಲಿಂದ ಹೊಸ ತಾಪತ್ರಯ ಶುರುವಾಯಿತು. ಮಾಯಾಂಕ್‌ ಮಿಂಚತೊಡಗಿದರೆ, ರಾಹುಲ್‌ ಸಂಪೂರ್ಣ ಕಳಾಹೀನರಾಗಿ ತಂಡದಿಂದ ಹೊರಬಿದ್ದರು.

ಆಗ ರೋಹಿತ್‌ ಪಾಲಿಗೆ ಭಾಗ್ಯದ ಬಾಗಿಲು ತೆರೆಯಿತು. ಕೆಳಕ್ರಮಾಂಕದಲ್ಲಿ ಬರುವ ರೋಹಿತ್‌ ಆರಂಭಿಕರಾಗಲೀ ಎಂದು ಸೌರವ್‌ ಗಂಗೂಲಿ ಧ್ವನಿಯೆತ್ತಿದರು. ಕೂಡಲೇ ಮುಂದಿನ ಸಭೆಯಲ್ಲಿ ಅದು ಜಾರಿಯಾಯಿತು. ಹೀಗಾದರೂ ಭಾರತ ಟೆಸ್ಟ್‌ ತಂಡಕ್ಕಿದ್ದ ಆರಂಭಿಕರ ಸಮಸ್ಯೆ ಬಗೆಹರಿಯಲಿ ಎನ್ನುವುದು ಎಲ್ಲರ ಆಶಯವಾಗಿತ್ತು. ಹಿಂದೆ ವೀರೇಂದ್ರ ಸೆಹ್ವಾಗ್‌ ಆರಂಭಿಕರಾಗಿ ನಿರ್ವಹಿಸಿದ್ದ ಪಾತ್ರವನ್ನು ರೋಹಿತ್‌ರಿಂದ ನಾಯಕ ಕೊಹ್ಲಿ ಬಯಸಿದ್ದರು. ಎಲ್ಲರೂ ನಿರೀಕ್ಷೆಗಳ ಮಹಾಪೂರ ಹೊಂದಿದ್ದರೂ ಪವಾಡಸದೃಶ ಆಟವನ್ನೇನು ನಿರೀಕ್ಷಿಸಿರಲಿಲ್ಲ. ತಂಡದಲ್ಲಿ ಅವರ ಸ್ಥಾನ ಗಟ್ಟಿಯಾದರೆ ಸಾಕು, ಆರಂಭಿಕ ಸ್ಥಾನದಲ್ಲಿದ್ದ ಕೊರತೆಯನ್ನು ತುಂಬಿದರೆ ಸಾಕು, ಇಷ್ಟು ಮಾತ್ರ ಬಯಕೆಯಿದ್ದಿದ್ದು. ಆದರೆ ನಡೆದಿದ್ದೇ ಬೇರೆ!

ಅಸಾಮಾನ್ಯ ಬ್ಯಾಟಿಂಗ್‌, ಅಸದೃಶ ಪ್ರತಿಭೆ!: ಟೆಸ್ಟ್‌ನಲ್ಲಿ ಆರಂಭಿಕರಾಗಿ ಬಡ್ತಿ ಪಡೆದ ರೋಹಿತ್‌ ಎದುರಾಳಿಗಳು ಬೆಚ್ಚಿಬೀಳುವಂತಹ ಆಟವಾಡಿದರು. ತಾವು ಆರಂಭಿಕರಾಗಿ ಕಣಕ್ಕಿಳಿದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 176 ರನ್‌ ಬಾರಿಸಿದರೆ, 2ನೆ ಇನಿಂಗ್ಸ್‌ನಲ್ಲಿ 127 ರನ್‌ ಚಚ್ಚಿದರು. ಇದು ವಿಶ್ವದಾಖಲೆಯಾಯಿತು. ಆರಂಭಿಕರಾಗಿ ಕಣಕ್ಕಿಳಿದ ಮೊದಲ ಪಂದ್ಯದ ಮೊದಲೆರಡು ಇನಿಂಗ್ಸ್‌ನಲ್ಲೇ ಶತಕ ಬಾರಿಸಿದ ವಿಶ್ವದ ಮೊದಲಿಗ ರೋಹಿತ್‌. ಆ ಪಂದ್ಯವನ್ನು ಭಾರತ 203 ರನ್‌ಗಳಿಂದ ಜಯಿಸಿತು. 2ನೆ ಟೆಸ್ಟ್‌ನಲ್ಲಿ ರೋಹಿತ್‌ಗೆ ಆಡಲು ಸಿಕ್ಕಿದ್ದೇ ಒಂದು ಇನಿಂಗ್ಸ್‌. ಅಲ್ಲಿ 14 ರನ್‌ಗೆ ಔಟಾದರು.

ಭಾರತಕ್ಕೆ ಇನಿಂಗ್ಸ್‌ ಮತ್ತು 137 ರನ್‌ಗಳಿಂದ ಜಯ ಲಭಿಸಿತು. 3ನೆ ಟೆಸ್ಟ್‌ನಲ್ಲಿ ಮತ್ತೆ ರೋಹಿತ್‌ ಅಬ್ಬರಿಸಿದರು. ಬರೀ 255 ಎಸೆತದಲ್ಲಿ 28 ಬೌಂಡರಿ, 6 ಸಿಕ್ಸರ್‌ಗಳ ನೆರವಿನಿಂದ 212 ರನ್‌ ಚಚ್ಚಿದರು. 2ನೆ ಟೆಸ್ಟ್‌ನಲ್ಲಿ ಅವರು 14 ರನ್‌ಗೆ ಔಟಾಗಿದ್ದನ್ನು ನೋಡಿದಾಗ ಮೊದಲ ಟೆಸ್ಟ್‌ನಲ್ಲಿ ಅವರು ಆಡಿದ್ದು ಆಕಸ್ಮಿಕವೇ ಎಂಬ ಅನುಮಾನ ಮೂಡಿತ್ತು. ಮೂರನೆ ಟೆಸ್ಟ್‌ನಲ್ಲಿ ಅದನ್ನು ಸಂಪೂರ್ಣ ಸುಳ್ಳು ಮಾಡಿ ತನ್ನ ಆಟ ಸತ್ವಯುತವಾದದ್ದೇ ಎಂದು ಸಾಬೀತು ಮಾಡಿದರು! ಅಲ್ಲಿಗೆ ಕ್ರಿಕೆಟ್‌ ಮಟ್ಟಿಗೆ 32 ವರ್ಷದ ಇಳಿವಯಸ್ಸಿನಲ್ಲಿ ರೋಹಿತ್‌ ಶರ್ಮ ಟೆಸ್ಟ್‌ನಲ್ಲಿ ತನ್ನ ಸ್ಥಾನವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಇನ್ನೂ ಮುಂಚೆಯೇ ಅವರಿಗೆ ಆರಂಭಿಕನಾಗಿ ಸ್ಥಾನ ನೀಡಿದ್ದರೆ, ಇನ್ನಷ್ಟು ಅದ್ಭುತ ಫ‌ಲಿತಾಂಶಗಳು ಸಾಧ್ಯವಿತ್ತು ಎಲ್ಲರೂ ಮಾತನಾಡಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ.

ಹೀಗೆ ಯೋಚಿಸಿದರೆ, ಅದು ಸತ್ಯ ಕೂಡ. ಈಗಿನ ತೀವ್ರ ಪೈಪೋಟಿಯ ಯುಗದಲ್ಲಿ ರೋಹಿತ್‌ ಶರ್ಮ ಇನ್ನೊಂದು ಆರುವರ್ಷ ಸಕ್ರಿಯರಾಗಿರಲು ಸಾಧ್ಯವಿದೆ. ಅಷ್ಟರಲ್ಲಾಗಲೇ ಅವರು ಹೊಸಬರಿಂದ ಪೈಪೋಟಿ ಎದುರಿಸುತ್ತಿರುತ್ತಾರೆ. ಅವರ ಲಯ ಕೂಡ ಕಡಿಮೆಯಾಗಿರುತ್ತದೆ. ಅಲ್ಲಿಯವರೆಗೆ ಅವರು ಗರಿಷ್ಠ 60 ಟೆಸ್ಟ್‌ಗಳನ್ನು ಆಡಲು ಸಾಧ್ಯವಿದೆ. ಇಲ್ಲಿ ರೋಹಿತ್‌ ಏನು ಸಾಧಿಸುತ್ತಾರೋ ಅದನ್ನು ಅಂಕಿಸಂಖ್ಯೆಗಳ ಗಾತ್ರದಿಂದ ಅಳೆಯಲು ಸಾಧ್ಯವಿಲ್ಲ. ಆ ಲೆಕ್ಕಾಚಾರದಲ್ಲಿ ಬಹಳ ಸಾಧ್ಯವಾಗಿರುವುದಿಲ್ಲ. ಆದರೆ ಪರಿಣಾಮದಲ್ಲಿ ಮಾತ್ರ ರೋಹಿತ್‌ ಬ್ರಾಡ್ಮನ್‌ರಂತೆ ಅದ್ಭುತ ಸಾಧಿಸಲು ಅವಕಾಶವಿದೆ. ಮಲಗಿದ ಹುಲಿ ಎದ್ದಿದೆ, ಇನ್ನು ಅದರ ಬೇಟೆಯನ್ನು ನೋಡುವುದಷ್ಟೇ ಕೆಲಸ.

* ನಿರೂಪ

ಟಾಪ್ ನ್ಯೂಸ್

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.