ದೀಪಾವಳಿ: ಮಾರುಕಟ್ಟೆಗಳಲ್ಲಿ ಗೂಡುದೀಪಗಳ ಹವಾ!
Team Udayavani, Oct 26, 2019, 5:00 AM IST
ಸುಳ್ಯ: ದೀಪಾವಳಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಬಿರುಸು ಪಡೆದಿದೆ.
ಮನೆ-ಮನೆಗಳಲ್ಲಿ ಸಂಭ್ರಮ-ಸಡಗರದ ಹಬ್ಬ ಇದಾಗಿದ್ದು, ಈ ಹಿನ್ನೆಲೆಯಲ್ಲಿ ತಯಾರಿಗಾಗಿ ಅಗತ್ಯ ವಸ್ತುಗಳ ಖರೀದಿ ನಡೆಯುತ್ತಿದ್ದು, ಶಾಲಾ-ಕಾಲೇಜು ರಜೆ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಜನರ ಓಡಾಟ ತುಸು ಹೆಚ್ಚಳ ಕಂಡಿತ್ತು.
ಗಮನ ಸೆಳೆದ ಗೂಡುದೀಪ
ಪಟಾಕಿ, ಗೂಡುದೀಪ, ಹೂವು, ಹಣ್ಣು, ಹಣತೆ, ವಸ್ತ್ರ ಖರೀದಿ ಹಿನ್ನೆಲೆಯಲ್ಲಿ ಮಾರುಕಟ್ಟೆ ಗ್ರಾಹಕರನ್ನು ಸೆಳೆಯಲು ಬಗೆ – ಬಗೆಯಲ್ಲಿ ಸಿದ್ಧವಾಗಿದೆ. ಗೂಡುದೀಪಗಳ ಮಾರಾಟ ನಗರದ ಅಲ್ಲಲ್ಲಿ ನಡೆಯುತ್ತಿದ್ದು, ಹೆಚ್ಚಿನ ಫ್ಯಾನ್ಸಿ ಅಂಗಡಿಗಳು ಗೂಡುದೀಪದಿಂದ ಅಲಕೃತಗೊಂಡು ಸ್ವಾಗತಿಸುತ್ತಿವೆ. 80 ರೂ.ಧಾರಣೆಯಿಂದ ತೊಡಗಿ 300 ರೂ. ತನಕದ ಗೂಡುದೀಪಗಳು ಮಾರಾಟ ಇದ್ದು, ಖರೀದಿ ಇನ್ನಷ್ಟೇ ಜಿಗಿತುಕೊಳ್ಳಬೇಕಿದೆ ಎನ್ನುತ್ತಾರೆ ವ್ಯಾಪಾರಿ ಅಖೀಲೇಶ್.
ಮಲ್ಲಿಗೆ ಅಟ್ಟೆಗೆ 1,200 ರೂ.
ಬಲೀಂದ್ರ, ಗೋಪೂಜೆ ಮೊದಲಾದಿ ನಡೆಯುವ ಕಾರಣ ಹೂವಿನ ಬೇಡಿಕೆ ಹೆಚ್ಚಿದ್ದು, ಧಾರಣೆ ಏರಿಕೆ ಕಂಡಿದೆ. ಮಲ್ಲಿಗೆ ಧಾರಣೆ ಅಟ್ಟೆಗೆ 1,200 ರೂ. ಇದ್ದು, ಶನಿವಾರದ ಬಳಿಕ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು. ಸೇವಂತಿ ಮಾರಿಗೆ 80 ರೂ., ತುಳಸಿ 50 ರೂ., ಸಣ್ಣ ಗುಲಾಬಿ ಮಾಲೆಗೆ 80 ರೂ. ಇದೆ.
ಹಣತೆ ದೀಪ
ಈ ಬಾರಿ ಹಣತೆ ದೀಪಕ್ಕೂ ಬೇಡಿಕೆ ಇದೆ. ಮಣ್ಣಿನ ಹಣತೆ ಜತೆಗೆ ವಿವಿಧ ಮಾದರಿಯ ದೀಪಗಳು ಮಾರುಕಟ್ಟೆ ಪ್ರವೇಶಿಸಿದೆ. ಪರಿಸರ ಸ್ನೇಹಿ ಪರಿಕರ ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ದೀಪ ಬೆಳಗಿಸುವ ಪ್ರಯತ್ನ ಪ್ರಾರಂಭಗೊಂಡಿದ್ದು, ಹಣತೆ ದೀಪಕ್ಕೆ ಬೇಡಿಕೆ ಇರಬಹುದು ಎಂದು ವ್ಯಾಪಾರಿಗಳು ನಿರೀಕ್ಷೆ ವ್ಯಕ್ತಪಡಿಸುತ್ತಾರೆ.
ಹೊಸ ಬಟ್ಟೆ ಖರೀದಿ
ಹೊಸ ಬಟ್ಟೆ ಖರೀದಿಗೆ ಜವುಳಿ ಮಳಿಗೆಗಳು ಬಗೆ-ಬಗೆಯ ಆಫರ್ ನೀಡಿದ ಹಿನ್ನೆಲೆಯಲ್ಲಿ ಗ್ರಾಹಕರು ಬಟ್ಟೆ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಆಫರ್ ಮೂಲಕ ಖರೀದಿಗೆ ಒತ್ತು ನೀಡಿದ್ದು, ಮಳಿಗೆಗಳಲ್ಲಿ ಜನರ ಭೇಟಿ ಕೊಂಚ ಹೆಚ್ಚಿದೆ.
ಪಟಾಕಿ
ದೀಪಾವಳಿಗೆ ಬಣ್ಣ ತುಂಬುವ ಪಟಾಕಿ ಖರೀದಿ ಬಿರುಸಾಗಿದೆ. ಉಳಿದ ಎಲ್ಲ ವಸ್ತುಗಳ ಖರೀದಿಗಿಂತ ಪಟಾಕಿಗೆ ಬೇಡಿಕೆ ಹೆಚ್ಚಾಗಿದೆ. ನಗರ ಹಾಗೂ ಹೊರವಲಯ ಅಲ್ಲಲ್ಲಿ ಪಟಾಕಿ ಅಂಗಡಿಗಳು ತಲೆ ಎತ್ತಿದ್ದು, ಶನಿವಾರದಿಂದ ಮಾರಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.