ಹವಾಮಾನ ವೈಪರೀತ್ಯ; ಮೀನುಗಾರಿಕೆಗೆ ಅಡ್ಡಿ; ಹೊರ ರಾಜ್ಯದ ಕಾರ್ಮಿಕರು ವಾಪಾಸ್
Team Udayavani, Oct 26, 2019, 4:54 AM IST
ಮಹಾನಗರ: ಅರಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮೀನುಗಾರರನ್ನು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕಾ ಕ್ಷೇತ್ರ ತತ್ತರಿಸಿದೆ.
ಮೀನುಗಾರಿಕೆಯ ರಜೆಯ ಅವಧಿ ಮುಗಿದು ಋತು ಆರಂಭವಾದಗಿನಿಂದಲೂ ಚಂಡಮಾರುತ, ಮೀನಿನ ಅಲಭ್ಯತೆ ಯಿಂದಾಗಿ ಕರಾವಳಿಯ ಮೀನುಗಾರಿಕೆಗೆ ತೊಂದರೆಯಾಗುತ್ತಿದ್ದು, ಪರ್ಸಿನ್, ಯಾಂತ್ರೀಕೃತ ಬೋಟುಗಳು ನಷ್ಟವನ್ನು ಅನುಭವಿಸುತ್ತಿದೆ. ಇದೀಗ ಚಂಡಮಾರುತದಿ ಂದಾಗಿ ರೆಡ್ ಅಲರ್ಟ್ ಘೋಷಿಸಿರುವುದು ಮೀನುಗಾರಿಕೆಗೆ ಮತ್ತಷ್ಟು ಹೊಡೆತ ನೀಡಿದೆ.
ಇದೀಗ ಮತ್ತೆ ಚಂಡಮಾರುತ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.ಜಿಲ್ಲೆಯಲ್ಲಿ 1,134 ಪಸೀìನ್ ಮತ್ತು ಟ್ರಾಲ್ ಬೋಟ್, 1,396 ಗಿಲ್‌ನೆಟ್ ಬೋಟ್, 531 ಸಾಂಪ್ರದಾಯಿಕ ಬೋಟ್‌ಗಳಿವೆ. ಯಾಂತ್ರೀಕೃತ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳುವ ಸಂದರ್ಭ ಇಂಧನ, ಕೆಲಸಗಾರರ ವೆಚ್ಚ, ಬೋಟಿನ ತಪಾಸಣೆ ಸಹಿತ ಇನ್ನಿತರ ಖರ್ಚುಗಳು ಸೇರಿ ಲಾಭಕ್ಕಿಂತ ಖರ್ಚು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಮೀನುಗಾರರು.
ಮೀನುಗಾರಿಕಾ ಬೋಟಿನಲ್ಲಿ ಭಾಗಶಃ ಉತ್ತರ ಭಾಗದ ಕೆಲಸಗಾರರು ಇರುವುದರಿಂದ ಅವರು ಈಗಾಗಲೇ ಮರಳಿ ತಮ್ಮ ಊರಿಗೆ ತೆರಳಿದ್ದಾರೆ. ಅವರಿಗೆ ಮೀನುಗಾರಿಕೆಗೆ ತೆರಳಿದಾಗ ಅದರಲ್ಲಿ ಬರುವ ಲಾಭದ ಶೇಕಡಾವಾರು ಹಣ ನೀಡಲಾಗುತ್ತದೆ. ಈಗ ಮೀನುಗಾರಿಕೆಗೆ ನಿಧಾನ ಗತಿಯಲ್ಲಿ ಸಾಗುತ್ತಿರುವುದರಿಂದ ಹಲವು ಬೋಟುಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಇದರಿಂದ ಅವರು ಕೆಲಸವಿಲ್ಲದೆ ಊರಿಗೆ ತೆರಳಿದ್ದಾರೆ.
ಮೀನು ದರ ಏರಿಕೆ ಸಾಧ್ಯತೆ
ಈ ವರ್ಷಾರಂಭದಿಂದಲೇ ಮೀನುಗಾರಿಕೆಗೆ ಹಲವು ಸಮಸ್ಯೆಗಳು ಎದುರಾಗಿರುವುದರಿಂದ ಮೀನುಗಾರರಿಗೆ ನಿರೀಕ್ಷಿತ ಲಾಭ ದೊರೆತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಕಾರ್ಗಿಲ್ ಮೀನಿನ ಕಾಟ
ಮೀನುಗಾರಿಕೆಗೆ ವೇಳೆ ಬಾಕಿ ಮೀನುಗಿಂತಲೂ ಹೆಚ್ಚಾಗಿ ನಿರುಪಯುಕ್ತ ಕಾರ್ಗಿಲ್ ಮೀನುಗಳು ಟನ್‌ಗಟ್ಟಲೇ ಸಿಗುತ್ತಿದ್ದು, ಮೀನುಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾರ್ಗಿಲ್ ಮೀನು ಇತರ ಮೀನುಗಳನ್ನು ತಿನ್ನುವುದರಿಂದ ಅವುಗಳಿರುವಲ್ಲಿ ಮನುಷ್ಯರಿಗೆ ತಿನ್ನಲು ಯೋಗ್ಯವಾದ ಮೀನುಗಳು ಇರುವುದಿಲ್ಲ. ಕಾರ್ಗಿಲ್ ಮೀನುಗಳನ್ನು ಫಿಶ್‌ಮಿಲ್‌ನವರು ಕೆ.ಜಿ.ಗೆ 12 ರೂ. ನಂತೆ ಖರೀದಿ ಮಾಡುತ್ತಿದ್ದಾರೆ. 15ರಿಂದ 20 ನಾಟಿಕಲ್ ದೂರದಲ್ಲೇ ಈ ಮೀನುಗಳು ಸಿಗುತ್ತಿವೆ. ಆಳಸಮುದ್ರ ಮೀನುಗಾರಿಕೆ ಹೋಗಿ ಬರಲು 5 ಲಕ್ಷ ರೂ. ಡಿಸೇಲ್ ಬೇಕಾಗುತ್ತಿದ್ದು, ಕಾರ್ಗಿಲ್ ಮೀನು ಸಿಗುತ್ತಿರುವುದರಿಂದ ಸಾಕಷ್ಟು ನಷ್ಟವಾಗುತ್ತಿದೆ ಎಂದು ಮೀನುಗಾರರು ಹೇಳುತ್ತಾರೆ.
ಮೀನುಗಾರರಿಗೆ ಸಂಕಷ್ಟ
ಹವಾಮಾನ ಏರಿಳಿತದಿಂದಾಗಿ ಸಮುದ್ರದಲ್ಲಾಗುತ್ತಿರುವ ಬದಲಾವಣೆಯಿಂದ ಈ ಬಾರಿ ನಿರೀಕ್ಷಿತ ಮೀನುಗಾರಿಕೆಯಾಗಿಲ್ಲ. ಬಹುತೇಕ ಬೋಟುಗಳು ನಷ್ಟದಲ್ಲಿದೆ. ಕೆಲಸದವರು ವಾಪಾಸ್ ಊರಿಗೆ ತೆರಳಿದ್ದಾರೆ.
- ನಿತಿನ್ ಕುಮಾರ್,
ಮಂಗಳೂರು ಟ್ರಾಲ್‌ಬೋಟು ಮೀನುಗಾರರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.