ಸಂಸತ್ತ‌ಲ್ಲಿ ರಾಜ್ಯ ಪ್ರತಿನಿಧಿಸುವವರ ಸಂಖ್ಯೆ ಕ್ಷೀಣಿಸುವ ಆತಂಕ


Team Udayavani, Oct 26, 2019, 3:10 AM IST

samsattali

ಬೆಂಗಳೂರು: ಇಲ್ಲಿ ಪ್ರತಿ ವರ್ಷದಂತೆ ನಾವು ಕನ್ನಡ ರಾಜ್ಯೋತ್ಸವದ ಅದ್ದೂರಿ ಆಚರಣೆಗೆ ಸಜ್ಜಾಗುತ್ತಿದ್ದೇವೆ. ಆದರೆ, ಅಲ್ಲಿ ಸದ್ದಿಲ್ಲದೆ ಕನ್ನಡಿಗರ ರಾಜಕೀಯ ಅಸ್ತಿತ್ವವನ್ನೇ ಅಲುಗಾಡಿಸುವ ಪ್ರಯತ್ನಗಳು ನಡೆಯುತ್ತಿವೆ. 2026ಕ್ಕೆ ಜನಸಂಖ್ಯೆ ಆಧರಿತ ಲೋಕಸಭಾ ಕ್ಷೇತ್ರಗಳ ವಿಂಗಡಣೆ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬರಲಿದೆ. ಒಂದು ವೇಳೆ ಇದಕ್ಕೆ ಸರ್ಕಾರ ಕೈಹಾಕಿದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಹಲವು ಸೀಟುಗಳನ್ನು ಕಳೆದುಕೊಳ್ಳಲಿದ್ದು, ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವವರ ಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ರಾಜಕೀಯ ಪ್ರಾಬಲ್ಯ ಮತ್ತಷ್ಟು ಕ್ಷೀಣಿಸುವ ಸಾಧ್ಯತೆ ಇದೆ.

1971 ಮತ್ತು 2001ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಹಂಚಿಕೆ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿತ್ತು. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕ್ರಮವಾಗಿ 30 ವರ್ಷ ಹಾಗೂ 25 ವರ್ಷಗಳ ಮಟ್ಟಿಗೆ ಇದನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಮುಂದಿನ ಆರು ವರ್ಷಗಳಲ್ಲಿ ಮತ್ತೆ ಇದು ಚರ್ಚೆಗೆ ಬರಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯದ ರಾಜಕೀಯ ಅಸ್ತಿತ್ವ ಅವಲಂಬಿಸಿದೆ. ಹಾಗೊಮ್ಮೆ ಜನಸಂಖ್ಯೆ ಆಧರಿಸಿ ವಿಂಗಡಣೆಗೆ ಮುಂದಾದರೆ, ಈಗಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ ಕೆಲವು ಸೀಟುಗಳಿಗೆ ಕತ್ತರಿ ಬೀಳುವುದು ಖಂಡಿತ. ಇದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಹರಿಯಾಣ, ಗುಜರಾತ್‌, ರಾಜಸ್ಥಾನ ಸೇರಿ ಉತ್ತರ ಭಾರತದ ಸೀಟುಗಳ ಸಂಖ್ಯೆ ಹೆಚ್ಚಲಿದೆ.

ಯಾಕೆಂದರೆ, ದಕ್ಷಿಣ ಭಾರತದ ಬಹುತೇಕ ಎಲ್ಲ ರಾಜ್ಯಗಳ ಹೆರುವಣಿಕೆ(ಜನನ) ಪ್ರಮಾಣ ರಾಷ್ಟ್ರೀಯ ಮಟ್ಟಕ್ಕಿಂತ ಸಾಕಷ್ಟು ಕಡಿಮೆ ಇದೆ. ಉತ್ತರ ಭಾರತದಲ್ಲಿ ಇದರ ಪ್ರಮಾಣ ಹೆಚ್ಚಿದೆ. ನೀತಿ ಆಯೋಗ ಪ್ರಕಟಿಸಿದ ಅಂಕಿ-ಅಂಶಗಳ ಪ್ರಕಾರವೇ 2016ರಲ್ಲಿ ದೇಶದ ಹೆರುವಣಿಕೆ ಪ್ರಮಾಣ (ಟಿಎಫ್ಆರ್‌) 2.3ರಷ್ಟಿದ್ದು, ಕರ್ನಾಟಕದಲ್ಲಿ ಕೇವಲ 1.8ರಷ್ಟು ದಾಖಲಾಗಿದೆ. ಅದರಲ್ಲೂ ಉಡುಪಿ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಇದೇ ರೀತಿ ಮುಂದುವರಿದರೆ, ಕನ್ನಡಿಗರ ಅಸ್ತಿತ್ವಕ್ಕೂ ಕುತ್ತು ಬರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.

4 ಸೀಟು ಕಳೆದುಕೊಳ್ಳಲಿದೆ; ಅಶ್ವಿ‌ನ್‌ ಮಹೇಶ್‌: ಸಂವಿಧಾನದಲ್ಲಿ ಉಲ್ಲೇಖೀಸಿರುವ ಪ್ರಕಾರ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳ ವಿಂಗಡಣೆ ಮಾಡಬೇಕು. 1971ರಲ್ಲಿ ಈ ಬದಲಾವಣೆಗೆ ಮುಂದಾದಾಗ ವಿರೋಧ ವ್ಯಕ್ತವಾಯಿತು. ಹಾಗಾಗಿ, ಸಂವಿಧಾನಕ್ಕೆ ತಿದ್ದುಪಡಿ ತಂದು 30 ವರ್ಷ ಮುಂದೂಡಲಾಯಿತು. 2001ಕ್ಕೆ ಮತ್ತೆ ಈ ಪ್ರಸ್ತಾವನೆ ಮುನ್ನೆಲೆಗೆ ಬಂದಾಗ, ಮತ್ತೆ ತಿದ್ದುಪಡಿ ಮಾಡಿ 25 ವರ್ಷಗಳ ಕಾಲ ಈ ಹಿಂದಿನ ಸ್ಥಿತಿಯನ್ನೇ ಮುಂದುವರಿಸಲಾಗಿದೆ. ಅದರಂತೆ 2026ಕ್ಕೆ ಇದು ಮತ್ತೂಮ್ಮೆ ಚರ್ಚೆಗೆ ಬರಲಿದ್ದು, ಒಂದು ವೇಳೆ ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹಂಚಿಕೆಯಾದರೆ, ರಾಜ್ಯವು ನಾಲ್ಕು ಸೀಟುಗಳನ್ನು ಕಳೆದುಕೊಳ್ಳಲಿದೆ ಎಂದು “ಫೆಡರಲ್‌ ಮೆನಿಫೆಸ್ಟೊ’ ಲೇಖಕ ಅಶ್ವಿ‌ನ್‌ ಮಹೇಶ್‌ ತಿಳಿಸುತ್ತಾರೆ.

“ಇದು ಅಧಿಕಾರದ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಲಿದೆ. ಆದ್ದರಿಂದ ಅಧಿಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರಾದೇಶಿಕವಾರು ಹಂಚಿಕೆ ಆಗಬೇಕು. ಉದಾಹರಣೆಗೆ ಮೊದಲ ಮೂರು ವರ್ಷಗಳು ಉತ್ತರ ಭಾರತದ ರಾಜ್ಯಗಳ ನಾಯಕ ಪ್ರಧಾನಿಯಾದರೆ, ತದನಂತರ ದಕ್ಷಿಣ ಹಾಗೂ ಉಳಿದ ಪ್ರದೇಶಗಳಿಗೆ ಅವಕಾಶ ಕಲ್ಪಿಸಬೇಕು. ಯೂರೋಪ್‌ ಯೂನಿಯನ್‌ ಕೌನ್ಸಿಲ್‌ನಲ್ಲಿ ಈ ವ್ಯವಸ್ಥೆಯಿದೆ. ಅಷ್ಟೇ ಯಾಕೆ, ಬಿಸಿಸಿಐನಲ್ಲೂ ಈ ಹಿಂದೆ ಇದೇ ಪದ್ಧತಿ ಇತ್ತು’ ಎಂದು ಅಶ್ವಿ‌ನ್‌ ಮಹೇಶ್‌ ಅಭಿಪ್ರಾಯಪಡುತ್ತಾರೆ.

“ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷೆ ಕೊಡ್ಬೇಡಿ’: ಇತ್ತೀಚೆಗೆ ಸ್ವತಃ ರಾಜ್ಯಸಭೆಯಲ್ಲಿ ಸದಸ್ಯ ಜೈರಾಂ ರಮೇಶ್‌ ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳು ರಾಜಕೀಯ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. “ಉತ್ತರ ಭಾರತದ ಆರು ರಾಜ್ಯಗಳ ಹೆರುವಣಿಕೆ(ಜನನ) ಪ್ರಮಾಣ 2.1 (ಇದು ರಿಪ್ಲೇಸ್‌ಮೆಂಟ್‌ ಲೆವೆಲ್‌) ಇದ್ದು, 2050ರ ವೇಳೆಗೆ ಇವುಗಳ ಜನಸಂಖ್ಯೆ ಪ್ರಮಾಣ ಶೇ. 40ರಿಂದ 44ಕ್ಕೆ ಏರಿಕೆ ಆಗಲಿದೆ. ಆದರೆ, ದಕ್ಷಿಣದ ಐದು ರಾಜ್ಯಗಳ ಸ್ಥಿತಿ ಇದಕ್ಕೆ ವಿರುದ್ಧವಾಗಿದ್ದು, ಮುಂದಿನ ಮೂರು ದಶಕಗಳಲ್ಲಿ ಜನಸಂಖ್ಯೆ ಶೇ.15ರಿಂದ ಶೇ.12ಕ್ಕೆ ಇಳಿಕೆ ಆಗಲಿದೆ. ಜನಸಂಖ್ಯೆ ನಿಯಂತ್ರಣ ಮಾಡಿದ್ದಕ್ಕಾಗಿ ಆ ಭಾಗದ ರಾಜ್ಯಗಳಿಂದ ಲೋಕಸಭೆಗೆ ಪ್ರತಿನಿಧಿಸುವ ಸದಸ್ಯರ ಸಂಖ್ಯೆಗೆ ಕೇಂದ್ರ ಸರ್ಕಾರ ಕತ್ತರಿ ಹಾಕಬಾರದು. ಪ್ರಸ್ತುತ 1971ರ ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ವಿಂಗಡಣೆ ಆಗಿದೆ’ ಎಂದು ಅವರು ಆಗ್ರಹಿಸಿದ್ದರು.

“ಕೇಳ್ಳೋರಿಲ್ಲದಂತಾಗಲಿದೆ’: “ಈಗಾಗಲೇ ಕೇಂದ್ರದಲ್ಲಿ ರಾಜ್ಯದ ರಾಜಕೀಯ ಅಸ್ತಿತ್ವ ಕಡಿಮೆ ಆಗುತ್ತಿದೆ. ಇದು ಹಲವು ಸಂದರ್ಭಗಳಲ್ಲಿ ಸಾಬೀತು ಕೂಡ ಆಗಿದೆ. ಈಗ ಸೀಟುಗಳಿಗೆ ಮತ್ತಷ್ಟು ಕತ್ತರಿ ಬಿದ್ದರೆ, ನಮ್ಮ ಧ್ವನಿಯನ್ನು ಕೇಳ್ಳೋರೇ ಇಲ್ಲದಂತಾಗುತ್ತದೆ. ಯಾವುದೇ ಕಾರಣಕ್ಕೂ ಈ ಸಾಹಸಕ್ಕೆ ಕೈಹಾಕಬಾರದು ಹಾಗೂ ಕೇಂದ್ರವು 2.3ರಷ್ಟಿರುವ ಹೆರುವಣಿಕೆ ಪ್ರಮಾಣವನ್ನು 2.1ಕ್ಕೆ ತಗ್ಗಿಸುವಲ್ಲಿ ನಿರತವಾಗಿದೆ. ಇದಕ್ಕಾಗಿ ದಕ್ಷಿಣದ ರಾಜ್ಯಗಳಿಗೆ ಜನಸಂಖ್ಯೆ ನಿಯಂತ್ರಣಕ್ಕೆ ಸೂಚಿಸುತ್ತಿದೆ. ಆದರೆ, ವಾಸ್ತವವಾಗಿ ಉತ್ತರದ ರಾಜ್ಯಗಳಲ್ಲಿ ಹೆಚ್ಚಿರುವ ಹೆರುವಣಿಕೆ ಪ್ರಮಾಣಕ್ಕೆ ಕಡಿವಾಣ ಹಾಕಬೇಕಿದೆ’ ಎಂದು ಬನವಾಸಿ ಬಳಗದ ಸದಸ್ಯ ಅರುಣ್‌ ಜಾವಗಲ್‌ ಒತ್ತಾಯಿಸುತ್ತಾರೆ.

ಪ್ರಧಾನಿ ಹುದ್ದೆಯಿಂದ ವಂಚಿತ: “ಪದೇಪದೆ ಜನಸಂಖ್ಯೆ ಆಧರಿಸಿ ಕ್ಷೇತ್ರಗಳ ವಿಂಗಡಣೆ ಮಾಡಿದರೆ, ಪ್ರಧಾನಿ ಹುದ್ದೆ ಬರೀ ಉತ್ತರದ ರಾಜ್ಯಗಳಿಗೇ ಸೀಮಿತವಾಗುತ್ತದೆ. ದಕ್ಷಿಣದ ರಾಜ್ಯಗಳು ಇದರಿಂದ ವಂಚಿತವಾಗಲಿವೆ’ ಎಂದು 1950ರ ದಶಕದಲ್ಲಿ ಅಂದಿನ ಮೈಸೂರು ರಾಜ್ಯವನ್ನು ಪ್ರತಿನಿಧಿಸಿದ್ದ ಟಿ. ಚೆನ್ನಯ್ಯ ಲೋಕಸಭೆಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

1952ರಿಂದ ಈವರೆಗಿನ ರಾಜ್ಯದ ಲೋಕಸಭಾ ಕ್ಷೇತ್ರಗಳು
ವರ್ಷ ಸೀಟುಗಳು
1952 11
1957 26
1962 26
1962 27
1971 27
1977ರ ನಂತರದಿಂದ 28

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.