ಭಾರತ ರತ್ನ: ಯಾರಿಗೆ ಬೇಕು, ಯಾರಿಗೆ ಬೇಡ?
ಭಾರತ ರತ್ನ ಗೌರವವನ್ನು ಮರಣೋತ್ತರವಾಗಿ ನೀಡುವ ಪದ್ಧತಿಯನ್ನು ಸರಕಾರ ರದ್ದು ಮಾಡುವುದು ಒಳ್ಳೆಯದು
Team Udayavani, Oct 26, 2019, 4:53 AM IST
ವೀರ ಸಾವರ್ಕರ್ ಎಂದೇ ಖ್ಯಾತರಾಗಿರುವ ಉತ್ಕಟ ದೇಶಪ್ರೇಮಿ ವಿನಾಯಕ ದಾಮೋದರ್ ಸಾವರ್ಕರ್ (1883-1966) ಅವರಿಗೆ ಭಾರತ ರತ್ನ ನೀಡಬೇಕೆಂಬ ಪ್ರಸ್ತಾವ ನಿರೀಕ್ಷೆಯಂತೆ ವಿರೋಧ, ಅಚ್ಚರಿ ಹಾಗೂ ಮೆಚ್ಚುಗೆಗಳನ್ನು ಹುಟ್ಟುಹಾಕಿದೆ.
ಈ ಪ್ರಸ್ತಾವ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳಿಗೆ, ಹಾಗೆಯೇ ಬುದ್ಧಿಜೀವಿಗಳ ಪೈಕಿ ಕೆಲವರಿಗೆ ಸರಕಾರದ ವಿರುದ್ಧ ಪ್ರಯೋಗಿಸಲು ಒಂದು ಅಸ್ತ್ರವಾಗಿ ಪರಿಣಮಿಸಿದೆ. ವಿಶೇಷವಾಗಿ ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿಯವರ ಹತ್ಯೆಗೆ ಸಂಬಂಧಿಸಿದಂತೆ ಬಜೆಪಿಯನ್ನು ಅಲ್ಲವಾದರೂ ಆರ್ ಎ ಸ್ ಎಸ್ ಮೇಲೆ ಗೂಬೆ ಕೂರಿಸುತ್ತಲೇ ಇದ್ದಾರೆ.
ಆದರೂ ಗಾಂಧೀಜಿಯ 150ನೆಯ ಜನ್ಮ ವರ್ಷಾಚರಣೆಯನ್ನು ನಡೆಸುವುದಕ್ಕೆ ಇಂಥ ಯಾವ ಆರೋಪಗಳೂ ಬಿಜೆಪಿ ಸರಕಾರಕ್ಕೆ ಅಡ್ಡಿಯಾಗಿ ಪರಿಣಮಿಸಿಲ್ಲ. ಒಂದು ವೇಳೆ ವಿಪಕ್ಷೀಯರ ಹಾಗೂ ಬುದ್ಧಿಜೀವಿಗಳ ಆರೋಪ ನಿಜವೇ ಆಗಿದ್ದಿದ್ದರೆ ಸರಕಾರ ಗಾಂಧೀಜಿಯವರ 150ನೆಯ ಜಯಂತಿಯನ್ನು ಆಚರಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಹಾಗಿದ್ದರೂ ಗಾಂಧೀಜಿಯ ಹೆಸರನ್ನು ಸ್ವತ್ಛ ಭಾರತ್ ಕಾರ್ಯಕ್ರಮದ ಸಂದರ್ಭದಲ್ಲಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ; ಧರ್ಮ, ನಂಬಿಕೆ, ಹಿಂದೂ-ಮುಸ್ಲಿಂ ಏಕತೆ ಹಾಗೂ ರಾಷ್ಟ್ರ ವಿಭಜನೆಗಳಿಗೆ ಸಂಬಂಧಿಸಿದ ಗಾಂಧೀಜಿ ಯವರ ಬರಹ-ಚಿಂತನೆಗಳೆಲ್ಲವನ್ನೂ “ಸ್ವತ್ಛ ಭಾರತ್ ಪೊರಕೆ’ಯಿಂದ ಗುಡಿಸಿಹಾಕಲಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ, ಸಾವರ್ಕರ್ ಅವರಿಗೆ ಮಾತ್ರವಲ್ಲ , 19ನೆಯ ಶತಮಾನದ ಸಮಾಜ ಸುಧಾರಕರಾದ ಜ್ಯೋತಿಬಾ ಫುಲೆ ಹಾಗೂ ಅವರ ಪತ್ನಿ ಸಾವಿತ್ರೀಬಾೖ ಫುಲೆ ಇವರುಗಳಿಗೂ ಮರಣೋತ್ತರವಾಗಿ ಭಾರತ ರತ್ನ ಬಿರುದನ್ನು ಪ್ರದಾನಿಸಲಾಗುವುದೆಂದು ಭರವಸೆ ನೀಡಿತ್ತು. ಜ್ಯೋತಿ ರಾವ್ ಗೋವಿಂದ ರಾವ್ ಫುಲೆ (1827-90) ಅವರು ಜಾತೀಯತೆಯ ವಿರುದ್ಧ ಹೋರಾಡಿದವರು; ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದುಡಿದವರು; ಅಸ್ಪೃಶ್ಯತೆಯ ನಿವಾರಣೆಗಾಗಿ ಶ್ರಮಿಸಿದವರು. ಅವರ ಪತ್ನಿ ಸಾವಿತ್ರೀಬಾೖ ಫುಲೆ (1831-97) ಹೆಣ್ಣು ಮಕ್ಕಳ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದವರು. ಹಾಗೆಯೇ ಭಾರತೀಯ ಮಹಿಳೆಯರ ಜೀವನ ಶೈಲಿಯ ಸುಧಾರಣೆಗಾಗಿ ದುಡಿದವರು. ಫುಲೆ ದಂಪತಿ ಹಿಂದುಳಿದ ಮಾಲಿ ಸಮುದಾಯಕ್ಕೆ ಸೇರಿದವರಾಗಿದ್ದರು; ಮೇಲು ಜಾತಿಯವರಿಂದ ದೌರ್ಜನ್ಯಕ್ಕೆ ಒಳಗಾಗಿದ್ದವರು.
ವೀರ ಸಾವರ್ಕರ್ ಅವರ ತ್ಯಾಗ ಜೀವನ ಹಾಗೂ ರಾಷ್ಟ್ರಕ್ಕಾಗಿ ಅವರು ಸಲ್ಲಿಸಿದ್ದ ಸೇವೆಯನ್ನು ಅವರ ಟೀಕಾಕಾರರು ಗಾಂಧೀಜಿಯ ಹತ್ಯಾ ಪ್ರಕರಣದಲ್ಲಿ ಅವರು ವಿಚಾರಣೆಗೊಳಗಾದ ಪ್ರಸಂಗದ ಹಿನ್ನೆಲೆಯಲ್ಲಿ ನೇತ್ಯಾತ್ಮಕವಾಗಿ ಲೆಕ್ಕಹಾಕುತ್ತಾರೆ. ಗಾಂಧೀಜಿಯ ಹತ್ಯೆಯ ಸಂಚಿನ ಆರೋಪದಲ್ಲಿ ಅವರು ನಾಥೂರಾಂ ಗೋಡ್ಸೆ, ನಾರಾಯಣ್ ಆಪ್ಟೆ ಹಾಗೂ ಇತರರೊಂದಿಗೆ ತನಿಖಾಧಿಕಾರಿಗಳ ವಿಚಾರಣೆಗೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಸಾವರ್ಕರ್ 7ನೆಯ ಆರೋಪಿಯಾಗಿದ್ದರು. “”ಹತ್ಯೆಯ ಸಂಚಿನ ಮುಖ್ಯ ರೂವಾರಿಯೇ ಅವರು; ಗೋಡ್ಸೆ ಹಾಗೂ ಮುಂಬಯಿಯಲ್ಲಿದ್ದ ಇತರ ಆರೋಪಿಗಳೊಂದಿಗೆ ಅವರಿಗೆ ಸಂಪರ್ಕವಿತ್ತು” ಎಂಬುದು ಅವರ ಮೇಲಿನ ಆರೋಪ. ಈ ವಿಚಾರಣೆ ನಡೆಸಿದ್ದ ಐಸಿಎಸ್ ಅಧಿಕಾರಿ ಆತ್ಮಚರಣ್ ಅಗರ್‌ವಾಲ್ ನೇತೃತ್ವದ ವಿಶೇಷ ನ್ಯಾಯಾಲಯ ಸಾವರ್ಕರ್‌ರನ್ನು 1949ರ ಕೊನೆಯಲ್ಲಿ ಖುಲಾಸೆಗೊಳಿಸಿದ್ದರು. ಕೊಲೆ ಸಂಚು ಹಾಗೂ ಮುಖ್ಯ ಆರೋಪಿಗಳೊಂದಿಗಿನ ಸಂಪರ್ಕಕ್ಕೆ ಸಂಬಂಧಿಸಿದ ಪುರಾವೆಗಳ ಕೊರತೆಯೇ ಖುಲಾಸೆಗೊಳಿಸಲು ಕಾರಣ. ಇದಾದ 20 ವರ್ಷಗಳ ಬಳಿಕ, ಗಾಂಧೀಜಿ ಹತ್ಯೆ ಕುರಿತ ತನಿಖೆ/ಪರಿಶೀಲನೆಗಾಗಿ ಆಯೋಗವೊಂದನ್ನು ರೂಪಿಸಿದ್ದ ಸರ್ವೋಚ್ಚ ನ್ಯಾಯಾಲಯದ ಭೂತಪೂರ್ವ ನ್ಯಾಯಾಧೀಶ ಜೀವನ್‌ಲಾಲ್ ಕಪೂರ್, ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಪ್ರಕರಣದ ಪ್ರಧಾನ ಆರೋಪಿಗಳಿಬ್ಬರನ್ನು ಹೇಳಿಕೆ ನೀಡುವಂತೆ ಮಾಡಿದಲ್ಲಿ ಮಾತ್ರ ಸಾವರ್ಕರ್‌ರನ್ನು ಈ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಬಹುದಾಗಿತ್ತು ಎಂದಿದ್ದರು. ಆ ಇಬ್ಬರು ಪ್ರಧಾನ ಆರೋಪಿಗಳೆಂದರೆ ಸಾವರ್ಕರ್‌ರ ಅಂಗರಕ್ಷಕ ಅಪ್ಪಾ ರಾಮಚಂದ ಕಾಸಾರ್ ಹಾಗೂ ಅವರ ಕಾರ್ಯದರ್ಶಿ ಗಜಾನನ ವಿಷ್ಣು ದಾಮ್ಲೆ. ಆ ಇಬ್ಬರನ್ನು ಸಾಕ್ಷಿಗಳಾಗಿ ತನ್ನೆದುರು ಯಾಕೆ ಹಾಜರಿಪಡಿಸಲಿಲ್ಲವೆಂದು ಆಯೋಗ ಪೊಲೀಸಾಧಿಕಾರಿಗಳನ್ನು (ಮುಂಬೈ) ತರಾಟೆಗೆ ತೆಗೆದುಕೊಂಡಿತ್ತು. ಈ ಕೇಸಿನಲ್ಲಿ ಇದುವರೆಗೆ ಕಲೆಹಾಕಲಾದ ಮಾಹಿತಿ ಸಾವರ್ಕರ್ ಹಾಗೂ ಅವರ ತಂಡ ಈ ಸಂಚು ನಡೆಸಿದೆ ಎಂದೇನೋ ಹೇಳುತ್ತಿದೆ; ಆದರೆ ಈ ಸಂಚಿನ ಹೊರತಾದ ಯಾವುದೇ ವಿಚಾರವನ್ನು ಕಡೆಗಣಿಸಿದೆ ಎಂದು ನ್ಯಾ| ಕಪೂರ್ ಅವರು ವರದಿಯಲ್ಲಿನ ತಮ್ಮ ಸಂಕೀರ್ಣ ವಾಕ್ಯದಲ್ಲಿ ಅಭಿಪ್ರಾಯಪಟ್ಟಿದ್ದರು.
ಗಮನಿಸಿ-ಗೋಡ್ಸೆ ಹಾಗೂ ಆಪ್ಟೆಗೆ ವಿಧಿಸಲಾದ ಮರಣದಂಡನೆ ಆದೇಶವನ್ನು ದೃಢಪಡಿಸಿದ್ದು ಶಿಮ್ಲಾ (ಹಿಮಾಚಲ ಪ್ರದೇಶ)ದಿಂದ ಕಾರ್ಯಾಚರಿಸುತ್ತಿದ್ದ ಪೂರ್ವ ಪಂಜಾಬ್ ಉಚ್ಚ ನ್ಯಾಯಾಲಯ. ಅಂದು ನ್ಯಾಯಪೀಠದಲ್ಲಿದ್ದವರು ನ್ಯಾ| ಭಂಡಾರಿ, ನ್ಯಾ| ಅಚೂfರಾಂ ಹಾಗೂ ನ್ಯಾ| ಖೋಸ್ಲಾ. ಇವರ ಪೈಕಿ ಖೋಸ್ಲಾ ಅವರು ಚಲನಚಿತ್ರ ಸೆನ್ಸಾರ್‌ಶಿಪ್ ಕುರಿತ ವಿಚಾರಣಾ ಸಮಿತಿ ಸೇರಿದಂತೆ 13 ಸಮಿತಿಗಳ ಹಾಗೂ ಆಯೋಗಗಳ ಮುಖ್ಯಸ್ಥರಾಗಿ ಕೆಲಸ ಮಾಡಿದವರು. ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದವರು ಸಿ. ಕೆ. ದಫ¤ರಿಯವರು. ಇವರು ಮುಂದೆ ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದರು.
ಹಾಗೆ ನೋಡಿದರೆ ಮೋದಿ ಸರಕಾರ ಸಾವರ್ಕರ್ ಮಾತ್ರವಲ್ಲ , ಗಂಭೀರ ಆರೋಪ ಹೇರಲ್ಪಟ್ಟಿರುವ ಯಾವ ವ್ಯಕ್ತಿಗೂ ಭಾರತ ರತ್ನ ಬಿರುದನ್ನು ಕೊಡಮಾಡುವ ಬಗೆಗಿನ ಯೋಜನೆಯನ್ನು ಕೈಬಿಡುವುದೇ ಒಳ್ಳೆಯದು. ಸಾವರ್ಕರ್ ಬಗ್ಗೆ ಹೇಳುವುದಾದರೆ, ಗಾಂಧೀಜಿ ಹತ್ಯೆಯ ಪ್ರಕರಣದಲ್ಲಿ ಬಂಧನಕ್ಕೊಳಗಾದವರು ಎಂಬ ಕಳಂಕವೊಂದು ಅವರಿಗೆ ಅಂಟಿಕೊಂಡಿತೆಂಬುದನ್ನು ಬಿಟ್ಟರೆ ಅವರು ಭಾರತದ ಸ್ವಾತಂತ್ರ್ಯ ಆಂದೋಲನಕ್ಕೆ ಸಲ್ಲಿಸಿದ ಕೊಡುಗೆ, ದೇಶಕ್ಕಾಗಿ ಮಾಡಿದ ತ್ಯಾಗ ಹಾಗೂ ಅವರ ವೈಚಾರಿಕ ಸಿದ್ಧಾಂತದ ಬದುಕು – ಇವೆಲ್ಲವೂ ಬಹುತೇಕ ಎಲ್ಲರಿಗೂ ಗೊತ್ತಿರುವಂಥವೇ. ಗಾಂಧೀಜಿ ಹತ್ಯೆಯ ಕೇಸಿನಲ್ಲಿ ಅವರ ಮೇಲೆ ಸುಳ್ಳು ಸುಳ್ಳೇ ಆಪಾದನೆ ಹೊರಿಸಲಾಯಿತು ಎಂದೂ ವಾದಿಸಲು ಸಾಧ್ಯವಿದೆ. ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷಕ್ಕೆ ಸಾವರ್ಕರ್‌ರನ್ನು ಕಂಡರಾಗುತ್ತಿರಲಿಲ್ಲ. ಅವರ ಬಗ್ಗೆ ಅದರ ತೀವ್ರ ಗೊಣಗಾಟ ಇದ್ದೇ ಇರುತ್ತಿತ್ತು.ಏಕೆಂದರೆ ಸಾವರ್ಕರ್ ಕಾಂಗ್ರೆಸ್ ಹಾಗೂ ಅದರ ಕಾರ್ಯಕ್ರಮಗಳ ಸಂಬಂಧವಾಗಿ ಯಾವ ರೀತಿಯ ರಾಜಿಗೂ ಸಿದ್ಧರಿರಲಿಲ್ಲ . ಹಿಂದೂ ಮಹಾಸಭಾ ಹಾಗೂ ಮುಸ್ಲಿಂ ಲೀಗ್ – ಈ ಎರಡನ್ನೂ ಕಾಂಗ್ರೆಸ್ ಪಕ್ಷ ತನ್ನ ಶತ್ರುಗಳೆಂಬಂತೆ ನೋಡುತ್ತಿತ್ತು. ವೀರ ಸಾವರ್ಕರ್ ಅವರಂಥ ಉನ್ನತ ವ್ಯಕ್ತಿತ್ವದ ಮಹನೀಯರಿಗೆ ಭಾರತ ರತ್ನ ಬಿರುದನ್ನು ನೀಡುವ ಅಗತ್ಯವೇ ಇಲ್ಲ !
ಗಾಂಧಿ ಹತ್ಯಾ ಪ್ರಕರಣದ ಆರೋಪಿಗಳಲ್ಲೊಬ್ಬ ಗೋಪಾಲ್ ಗೋಡ್ಸೆ. ಈತ ನಾಥೂರಾಂನ ತಮ್ಮ . ಈತ ತನ್ನ “ಮೇ ಇಟ್ ಪ್ಲೀಸ್ ಯುವರ್ ಆನರ್’ ಎಂಬ ಪುಸ್ತಕದಲ್ಲಿ ಹೇಳಿರುವುದನ್ನು ನೋಡಿ. ಆರೋಪಿಗಳ ಪಟ್ಟಿಯಲ್ಲಿ ಮೊದಲಿಗೆ ಸಾವರ್ಕರ್ ಹೆಸರೇ ಇರಲಿಲ್ಲವಂತೆ. ಅವರನ್ನು ಈ ಕೇಸಿನಲ್ಲಿ ಸಿಲುಕಿಸುವಂತೆ ಪೊಲೀಸರೇ ಈ ಕೇಸಿನಲ್ಲಿ ಅಪ್ರೂವರ್ ಆಗಿದ್ದ ದಿಗಂಬರ್ ಬಾಡೆY ಅವರ ಮೇಲೆ ಒತ್ತಡ ಹೇರಿದರಂತೆ. ಸ್ವಲ್ಪ ಕಾಲ ಸರಕಾರದಿಂದ ನಿಷೇಧಕ್ಕೊಳಗಾಗಿದ್ದ ಈ ಪುಸ್ತಕದ ಅನುವಾದ ಮಾರುಕಟ್ಟೆಯ ಲ್ಲಿಂದು ಲಭ್ಯವಿದೆ. ಗಮನಿಸಲೇಬೇಕಾದ ಅಂಶ – ಸರ್ದಾರ್ ವಲ್ಲಭ ಭಾç ಪಟೇಲರ ಹೆಸರನ್ನು ಕೂಡ ಈ ಕೇಸಿನಲ್ಲಿ ಸಿಲುಕಿಸಲು ಪ್ರಯತ್ನಗಳು ನಡೆದಿದ್ದವು. ಆ ದಿನಗಳಲ್ಲಿ ಅವಿಭಜಿತ ಬಾಂಬೆ ಪ್ರಾಂತ್ಯದ ಗೃಹ ಸಚಿವರಾಗಿದ್ದ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದಿರುವುದನ್ನು ನೋಡಿ – “ಬಾಪೂ ಹತ್ಯೆಯ ಬಳಿಕ, ಬಾಪೂ ಅವರಿಗೆ ಭದ್ರತೆ ಒದಗಿಸುವ ವಿಷಯದಲ್ಲಿ ಸರ್ದಾರ್ ಸಾಹೇಬರು ನಿರ್ಲಕ್ಷ್ಯ ತೋರಿದರೆಂದು ಕೆಲವರು ಆರೋಪಿಸಿದರು. ಪಾಕಿಸ್ಥಾನಕ್ಕೆ 55 ಕೋಟಿ ರೂ. ಪಾವತಿಸುವಂತೆ ಬಾಪೂ ಅವರು ಸರಕಾರದ ಮೇಲೆ ಒತ್ತಡ ಹೇರಿದ್ದರೆಂಬ ಕಾರಣದಿಂದಲೇ ಸರ್ದಾರ್ ಅವರು ಬಾಪೂ ಮೇಲೆ ನಡೆದಂಥ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬುದು ಸರ್ದಾರ್ ಮೇಲಿನ ಆರೋಪ. ಈ ಆರೋಪ ನಿರಾಧಾರಿತ ಎಂದು ನನಗೆ ಗೊತ್ತಿತ್ತು…’ ಮೊರಾರ್ಜಿಯವರೂ ಸಾವರ್ಕರ್ ಅವರನ್ನು “ವೀರ ಸಾವರ್ಕರ್’ ಎಂದೇ ಕರೆದಿದ್ದಾರೆ.
ಸಾವರ್ಕರ್‌ರಿಗೆ ಭಾರತ ರತ್ನ ನೀಡುವ ವಿಷಯದಲ್ಲಿಂದು ಕೊಂಚ ವಿವಾದ ಉದ್ಭವಿಸಿರುವುದು ನಿಜವಾದರೂ ಹಿಂದಿನ ದಿನಗಳ ಮೇಲೊಮ್ಮೆ ಕಣ್ಣು ಹಾಯಿಸಿದರೆ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸಿŒಯವರು ಸಾವರ್ಕರ್ ವಿಷಯದಲ್ಲಿ ಹೇಗೆ ನಡೆದುಕೊಂಡರು ಎಂಬುದು ಗೊತ್ತಾದೀತು. ಶಾಸ್ತ್ರೀಜಿಯವರು ಸದ್ದಿಲ್ಲದೆ ಸಾವರ್ಕರ್‌ರಿಗೆ ಪಿಂಚಣಿ ಮೊತ್ತವೊಂದನ್ನು ನೀಡಿದ್ದರು. ಸ್ವಲ್ಪ ಕಾಲದ ಬಳಿಕ ಸಾವರ್ಕರ್ ತೀರಿಕೊಂಡರು. ಕ್ರಾಂತಿಕಾರಿ ಯೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಸಾವರ್ಕರ್ ಓರ್ವ ವಿದ್ವಾಂಸ ಹಾಗೂ ಚಿಂತಕರಾಗಿದ್ದರು. 1923ರಷ್ಟು ಹಿಂದೆಯೇ ಅವರು “ಹಿಂದುತ್ವ’ದ ಬಗೆಗೊಂದು ಗ್ರಂಥವನ್ನು ಪ್ರಕಟಿಸಿದ್ದರು. ಬ್ರಿಟಿಷರು ಹೇಳಿದ ಚರಿತ್ರೆಯನ್ನು ಅವರು ಪುನಾರಚಿಸಿದ್ದನ್ನು; ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕುರಿತ ಅವರ ಪ್ರಖ್ಯಾತ ಪುಸ್ತಕವನ್ನು ಮರೆಯುವುದಾದರೂ ಹೇಗೆ? ಬ್ರಿಟಿಷರು ಮಾತ್ರವಲ್ಲ ನಮ್ಮ ಇತಿಹಾಸಕಾರರ ಪೈಕಿ ಕೆಲವರು ಇಂದು ಕೂಡ ಅಂದು ನಡೆದದ್ದು ಸ್ವಾತಂತ್ರ್ಯ ಸಂಗ್ರಾಮವಲ್ಲ; ಅದು ದಂಗೆ ಅಥವಾ ಬಂಡಾಯ ಎಂದೇ ವ್ಯಾಖ್ಯಾನಿಸುತ್ತಾರೆ; ಸಿಪಾಯಿ ದಂಗೆಗೆ ಕಾರಣ ಬ್ರಾಹ್ಮಣ ಸಿಪಾಯಿಗಳ ಪ್ರೇರಣೆ ಎನ್ನುವ ಮೂಲಕ ಈ ಸಂಗ್ರಾಮಕ್ಕೆ ಜಾತಿ ಬಣ್ಣವನ್ನೂ ಬಳಿಯುತ್ತಾರೆ. ಹಿಂದುತ್ವವಾದಿ ಎಂದು ಬಣ್ಣಿಸಲ ³ ಟ್ಟಿದ್ದರೂ ಸಾವರ್ಕರ್ ಅವರು ಸ್ವತಃ ಓರ್ವ ತರ್ಕ ಶುದ್ಧ ವಿಚಾರವಾದಿಯಾಗಿದ್ದರು; ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಜ್ಯೋತಿಬಾ ಫುಲೆ -ಸಾವಿತ್ರಿ ಫುಲೆಯವರಂತೆ ಸಾವರ್ಕರ್ ಅಸ್ಪೃಶ್ಯತೆ ಹಾಗೂ ಜಾತೀಯತೆಯ ವಿರುದ್ಧ ಹೋರಾಡಿದರು. ಆದರೆ ಮುಸ್ಲಿಮರ ತುಷ್ಟೀಕರಣವನ್ನು ಖಂಡತುಂಡವಾಗಿ ವಿರೋಧಿಸಿದರು.
ತಿಲಕ್ – ಶ್ಯಾಮಾ ಪ್ರಸಾದ್ ಮುಖರ್ಜಿಗೆ ಯಾಕಿಲ್ಲ?
ಭಾರತ ರತ್ನ ಬಿರುದನ್ನು ಕೆಲವು ಸಂದರ್ಭಗಳಲ್ಲಿ ಅಯೋಗ್ಯರಿಗೆ ಹಾಗೂ ಅನರ್ಹ ವ್ಯಕ್ತಿಗಳಿಗೂ ನೀಡಲಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ . ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ. ಜಿ. ರಾಮಚಂದ್ರನ್ ಅವರು ತಮ್ಮ ಸಿನಿಮಾರಂಗದ ವರ್ಚಸ್ಸನ್ನು ರಾಜಕೀಯಕ್ಕೆ ಬಳಸಿಕೊಂಡವರು; ಆದರೂ ಅಂದಿನ ರಾಜೀವ್ ಗಾಂಧಿ ಸರಕಾರ ಎಂಜಿಆರ್‌ಗೆ ಭಾರತ ರತ್ನ ನೀಡಿ ಗೌರವಿಸಿತು. ಎಂಜಿಆರ್ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದವು; ವಿಶೇಷವಾಗಿ ದೇಶೀ ನಿರ್ಮಿತ ವಿದೇಶೀ ಮದ್ಯ ಮಾರಾಟದ ಹಕ್ಕಿನ ಬಟವಾಡೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಎಂಜಿಆರ್ ಅವರು ಶ್ರೀಮಂತ ವರ್ಗಕ್ಕೆ ಪ್ರಯೋಜನವಾಗಲೆಂದು ಬಡವರ ಹಾಗೂ ಮಧ್ಯಮ ವರ್ಗದವರ ಮೇಲೆ ತೆರಿಗೆ ವಿಧಿಸಿದರೆಂಬ ಮಾತೂ ಇದೆ. ಈ ಪ್ರಶಸ್ತಿಗೆ ಲಾಬಿ ನಡೆದಿರುವುದೂ ಇದೆ. ಹೀಗೆ ಲಾಬಿ ನಡೆಸಿದವರಲ್ಲಿ ಕೃತಿಚೌರ್ಯ ನಡೆಸಿದ ಓರ್ವ ಮಹಾಶಯರೂ ಇದ್ದರು. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಈ ಗೌರವ ನೀಡಲು ಸರಕಾರ ಮುಂದಾದಾಗಲೂ ಭಾರೀ ವಿವಾದ ಉಂಟಾಗಿತ್ತು. ಅವರಿಗೆ ಸಾಕಷ್ಟು “ವಯಸ್ಸಾಗಿಲ್ಲ’ ಎಂಬುದು ಇದಕ್ಕೆ ಕಾರಣವಾಗಿತ್ತು. ಕ್ರೀಡೆ ಹೊರತಾಗಿ ಈ ಪ್ರಶಸ್ತಿಗೆ ಅರ್ಹವಾದ ಅವರ ಸಾಧನೆಯೇನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಭಾರತ ರತ್ನ ಗೌರವವನ್ನು ಮರಣೋತ್ತರವಾಗಿ ನೀಡುವ ಪದ್ಧತಿಯನ್ನು ಸರಕಾರ ರದ್ದು ಮಾಡುವುದೊಳ್ಳೆಯದು. ಇದುವರೆಗೆ ಈ ಗೌರವಕ್ಕೆ ಪಾತ್ರರಾದ 45 ಮಂದಿಯ ಪೈಕಿ 12 ಮಂದಿಗೆ ಈ ಬಿರುದು ಮರಣೋತ್ತರವಾಗಿ ಸಂದಿದೆ. ಹೀಗೆ ಮರಣೋತ್ತರ ಗೌರವ ಪಡೆದವರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮೊದಲಿಗರು. ಅಂದ ಹಾಗೆ ಭಾರತ ರತ್ನ ಗೌರವಕ್ಕೆ ಮೋದಿ ಸರಕಾರ ಬಾಲ ಗಂಗಾಧರ ತಿಲಕ್, ಡಾ| ಶ್ಯಾಮಾ ಪ್ರಸಾದ್ ಮುಖರ್ಜಿಯಂಥವರನ್ನು ಯಾಕೆ ಆಯ್ಕೆ ಮಾಡಿಲ್ಲ ಎಂಬುದೇ ಅಚ್ಚರಿಯ ಸಂಗತಿ.
ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.