ರಾಜ್ಯ ಸರಕಾರ ಕೋಮಾದಲ್ಲಿದೆ: ದಿನೇಶ್
Team Udayavani, Oct 26, 2019, 3:57 AM IST
ಮಂಗಳೂರು: ರಾಜ್ಯದಲ್ಲಿ ಯಾವುದೇ ಜನಪರ ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿಲ್ಲ. ಸರಕಾರ ಇನ್ನೂ ಟೆಕಾಫ್ ಆಗಿಲ್ಲ. ಸಚಿವ ಸಂಪುಟದಲ್ಲಿ ಟೀಂವರ್ಕ್ ಇಲ್ಲ. ಉಸ್ತುವಾರಿ ಸಚಿವರು, ಸಚಿವರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿಲ್ಲ. ಒಟ್ಟಾರೆಯಾಗಿ ರಾಜ್ಯ ಸರಕಾರ ಕೋಮಾಸ್ಥಿತಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆಯಿಂದ ಲಕ್ಷಾಂತರ ಮಂದಿ ಮನೆ, ಆಸ್ತಿ-ಪಾಸ್ತಿ, ಕೃಷಿ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ರಾಜ್ಯ ಸರಕಾರದಿಂದ ಆಗುತ್ತಿಲ್ಲ. ನೆರವಿಗೆ ಬರಬೇಕಾದ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಮೋದಿ ಜತೆ ಮಾತನಾಡುವ ಧೈರ್ಯವಿಲ್ಲದ ಯಡಿಯೂರಪ್ಪ ಅವರ ಅಸಹಾಯಕ ಸ್ಥಿತಿ ನೋಡಿ ನಮಗೆ ಕನಿಕರ ಹುಟ್ಟುತ್ತಿದೆ ಎಂದರು. 2009ರಲ್ಲಿ ನೆರೆ ಪರಿಸ್ಥಿತಿ ವೇಳೆ ಆಗಿನ ಪ್ರಧಾನಿ ಡಾ| ಮನಮೋಹನ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯಕ್ಕೆ 1500 ಕೋ.ರೂ. ಮಂಜೂರು ಮಾಡಿಸಿದ್ದರು ಎಂದವರು ಹೇಳಿದರು.
ಮರಳಿ ಸೇರ್ಪಡೆ ಇಲ್ಲ
ಅನರ್ಹ ಶಾಸಕರಲ್ಲಿ ಕೆಲವು ಮಂದಿ ಮರಳಿ ಕಾಂಗ್ರೆಸ್ ಸೇರಲು ಉತ್ಸುಕತೆ ತೋರ್ಪಡಿಸುತ್ತಿದ್ದಾರೆ. ಪಕ್ಷಕ್ಕೆ ದ್ರೋಹವೆಸಗಿದವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಗೊಳಿಸುವ ಪ್ರಶ್ನೆಯೇ ಇಲ್ಲ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ, ಕೆಪಿಸಿಸಿ ವೀಕ್ಷಕರಾದ ವಿ.ಆರ್. ಸುದರ್ಶನ್, ಸೂರಜ್ ಹೆಗ್ಡೆ, ಎಐಸಿಸಿ ಕಾರ್ಯ ದರ್ಶಿ ವಿಷ್ಣುನಾಥನ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ , ಜೆ.ಆರ್.ಲೋಬೋ, ಶಕುಂತಳಾ ಶೆಟ್ಟಿ, ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ , ಮೋಹನ್ ಪಿ.ವಿ., ಮಿಥುನ್ ರೈ, ಧನಂಜಯ ಅಡ³ಂಗಾಯ, ಶಾಲೆಟ್ ಪಿಂಟೋ, ಶಶಿಧರ ಹೆಗ್ಡೆ, ನವೀನ್ ಡಿ’ಸೋಜಾ, ಪ್ರಸಾದ್ ರಾಜ್ ಕಾಂಚನ್, ಟಿ.ಕೆ.ಸುಧೀರ್, ನಜೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಬುಧವಾರ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಬುಧವಾರ ಪ್ರಕಟಿಸಲಾಗುವುದು. ಹಿಂದಿನ ಸಿದ್ಧರಾಮಯ್ಯ ಸರಕಾರ ಮಂಗಳೂರಿಗೆ ಸಾಕಷ್ಟು ಅನುದಾನ ನೀಡಿದೆ. ಕಳೆದ 5 ವರ್ಷಗಳಲ್ಲಿ ಮಹಾನಗರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಪಕ್ಷ ಒಗ್ಗಟ್ಟಿನಿಂದ, ಆತ್ಮವಿಶ್ವಾಸದಿಂದ ಚುನಾ ವಣೆಗೆ ಎದುರಿಸುತ್ತಿದ್ದು ಕಳೆದ ಸಾಲಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.