ಐತಿಹಾಸಿಕ ನಗರದಲ್ಲಿ ಎತ್ತಂಗಡಿ ಗ್ರಂಥಾಲಯ


Team Udayavani, Oct 26, 2019, 11:54 AM IST

bk-tdy-1

ತೇರದಾಳ: ಗೊಂಕರಸರ ಕಾಲದ ಪ್ರಸಿದ್ಧ ವ್ಯಾಪಾರಿ ಕೇಂದ್ರವೆನಿಸಿದ್ದ ತೇರದಾಳ ನಗರವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹೋಬಳಿ ಹಾಗೂ ವಿಧಾನಸಭಾ ಮತಕ್ಷೇತ್ರದ ಕೇಂದ್ರಸ್ಥಳ, ನೂತನ ತಾಲೂಕೆಂದು ಘೋಷಣೆಯಾದ ನಗರದಲ್ಲಿ ಜಿಲ್ಲಾ ಕೇಂದ್ರ ಸಾರ್ವಜನಿಕ ಗ್ರಂಥಾಲಯದ ಶಾಖೆಯಿದೆ. ಆದರೆ ಸ್ವಂತ ಕಟ್ಟಡವಿಲ್ಲದೆ ಗ್ರಂಥಾಲಯಕ್ಕೆ ಅಸ್ಥಿರತೆ ಕಾಡುತ್ತಿದೆ.

ಸ್ಥಳಾಂತರಿ ವಾಚನಾಲಯ: ನಗರದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದ್ದಕ್ಕೆ ಎಲ್ಲ ಕಡೆಗೂ ಸ್ಥಳಾಂತರವಾಗುತ್ತಲೆ ಇದೆ. ಮೊದಲು ಪುರಸಭೆ ವತಿಯಿಂದ ನಡೆಯುತ್ತಿದ್ದ ಗ್ರಂಥಾಲಯ ಪ್ರತ್ಯೇಕಗೊಂಡು 1978ರಲ್ಲಿ ಕೇಂದ್ರ ಗ್ರಂಥಾಲಯ ಅಧಿಧೀನಕ್ಕೆ ಬಂದ ಬಳಿಕ ಪುರಸಭೆಯ ಸಿಬ್ಬಂದಿಯಿಂದ ಪೇಠೆ ಭಾಗದ ಹನುಮಾನ್‌ ದೇವಸ್ಥಾನದ ಬಳಿಯ ಮಹಡಿ ಮೇಲಿನ ಕಟ್ಟಡದಲ್ಲಿತ್ತು. ನಂತರ ಬಹು ವರ್ಷದವರೆಗೆ ನಗರದ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿತ್ತು. ಅಲ್ಲಿಂದ ಪುರಸಭೆಯ ಮುಖ್ಯ ಕಟ್ಟಡದ ಹಿಂಭಾಗದಲ್ಲಿ ಸ್ಥಳಾಂತರಗೊಂಡಿತು. ಹೀಗೆ ಸ್ವಂತ ಕಟ್ಟಡವಿಲ್ಲದೆ ಅಲ್ಲಲ್ಲಿ ಸ್ಥಳಾಂತರಗೊಂಡು ಈಗ ಪುರಸಭೆ ಆವರಣದಲ್ಲಿನ ಹೊಸ ಕಟ್ಟಡದ ಸುಮಾರು 20×40 ಅಡಿ ಅಳತೆಯ ಒಂದು ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೆಲ ಮುಖಂಡರ ಪರಿಶ್ರಮದಿಂದ ನಗರದ ಒಂದು ಸ್ಥಳದಲ್ಲಿ ಗ್ರಂಥಾಲಯಕ್ಕೆ ನಿಗದಿಗೊಳಿಸಿ ಕಟ್ಟಡ ಪ್ರಾರಂಭಿಸಲಾಗಿತ್ತು.

ಆದರೆ ಕೆಲವರು ನ್ಯಾಯಾಲಯ ಕಟ್ಟೆ ಏರಿದ್ದರಿಂದ ಆ ಕಾಮಗಾರಿ ಅರ್ಧಕ್ಕೆ ನಿಂತಿತು. ಬಳಿಕ ಪೇಠೆ ಭಾಗದ ಪ್ರಧಾನ ಅಂಚೆ ಕಚೇರಿಯ ಹಿಂಭಾಗದಲ್ಲಿನ ಜಾಗೆಯನ್ನು ಗ್ರಂಥಾಲಯಕ್ಕೆಂದು ಮೀಸಲಿಟ್ಟು, ಗ್ರಂಥಾಲಯ ಇಲಾಖೆಯ ಹೆಸರಿಗೆ ಹಸ್ತಾಂತರಿಸಲಾಗಿದೆ ಎನ್ನಲಾಗುತ್ತಿದೆ. ಅದು ನಗರದ ಕೇಂದ್ರ ಸ್ಥಳವಾಗಿದ್ದರಿಂದ ಅಲ್ಲಿ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಿ ಗ್ರಂಥಾಲಯ ಸ್ಥಳಾಂತರಗೊಂಡರೆ ಓದುಗರಿಗೆ ತುಂಬಾ ಅನುಕೂಲವಾಗುವುದು ಎಂದು ಅನೇಕ ಓದುಗರು ಅಭಿಪ್ರಾಯಪಡುತ್ತಿದ್ದಾರೆ. ಸದ್ಯಕ್ಕಂತು ಪುರಸಭೆ ಒಡೆತನದ ಕಟ್ಟಡದಲ್ಲೇ ಗ್ರಂಥಾಲಯವಿದೆ.

ಒಟ್ಟು ಪತ್ರಿಕೆ-ಪುಸ್ತಕಗಳು: 8 ದಿನಪತ್ರಿಕೆಗಳು, 4 ವಾರ ಪತ್ರಿಕೆಗಳು, ಒಂದು ಪಾಕ್ಷಿಕ ಪತ್ರಿಕೆ, 7 ಮಾಸ ಪತ್ರಿಕೆಗಳು  ತಪ್ಪದೆ ಗ್ರಂಥಾಲಯಕ್ಕೆ ಬರುತ್ತವೆ. ಗ್ರಂಥಾಲಯದಲ್ಲಿ 25,753 ವಿವಿಧ ಪುಸ್ತಕಗಳು ಇಲ್ಲಿವೆ. ಒಟ್ಟು 810 ಪುರುಷರು, 131 ಮಹಿಳೆಯರು ಸೇರಿದಂತೆ ಒಟ್ಟು 944 ಸದಸ್ಯರಿದ್ದಾರೆ.

ಸೆಸ್‌ ಬಾಕಿ: ಸಾರ್ವಜನಿಕರ ಆಸ್ತಿ ತೆರಿಗೆಯಲ್ಲಿಶೇ.3ರಷ್ಟು ಗ್ರಂಥಾಲಯ ಸೆಸ್‌ ಎಂದು ವಸೂಲಿ ಮಾಡುವ ಪುರಸಭೆಯವರು ನಿಯಮಾನುಸಾರ ತಿಂಗಳಿಗೊಮ್ಮೆ ಗ್ರಂಥಾಲಯ ಇಲಾಖೆಗೆ ಸೆಸ್‌ ಹಣ ಭರಿಸಬೇಕು. ಆದರೆ ಸುಮಾರು 6ರಿಂದ 7ಲಕ್ಷ ರೂ. ಸೆಸ್‌ ಹಣ ತುಂಬುವುದನ್ನು ಪುರಸಭೆ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪವಿದೆ.

ಸೌಲಭ್ಯ ಕೊರತೆ: ಸಾಕಷ್ಟು ಜನವಸತಿ ಇರುವ ಪ್ರದೇಶದ ಕೇಂದ್ರ ಸ್ಥಳದಲ್ಲಿ ಗ್ರಂಥಾಲಯವಿದ್ದರೆ ಮಹಿಳೆಯರು, ವೃದ್ಧರು ಸೇರಿದಂತೆ ನಗರದ ಹೆಚ್ಚಿನ ಸಂಖ್ಯೆಯ ಜನರು ಬರುತ್ತಾರೆ. ಮೂತ್ರಾಲಯ, ಶೌಚಾಲಯ, ಕುಡಿಯುವ ನೀರಿನ, ಆಸನಗಳ, ಬೆಳಕು-ಗಾಳಿಯ ವ್ಯವಸ್ಥೆ ಅತ್ಯವಶ್ಯಕ. ಪುಸ್ತಕಗಳ ವಿಭಾಗ, ಪತ್ರಿಕೆಗಳ ವಿಭಾಗ, ಎಳೆಯರ ವಿಭಾಗ ಹೀಗೆ ವಿಭಾಗವಾರು ಕೊಠಡಿಗಳೊಂದಿಗೆ ಗ್ರಂಥಾಲಯ ಇರಬೇಕು. ಮಧ್ಯಾಹ್ನ ದಲ್ಲಿಯೂ ಗ್ರಂಥಾಲಯ ತೆರೆದಿರಬೇಕು.

ಈ ಗ್ರಂಥಾಲಯದಲ್ಲಿ ಪುಸ್ತಕಗಳ ಬೀರುಗಳ (ಕಪಾಟು) ಕೊರತೆ ಯಿಂದ ಲಿಂಟಲ್‌ ರ್ಯಾಕರ್‌ ಮೇಲೆಯೆ ಪುಸ್ತಕ ಗಳನ್ನಿಡಬೇಕಾಗಿದೆ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಬೇಕಾಗಿದೆ.ಮಧ್ಯಾಹ್ನದಲ್ಲೂ ಕಾರ್ಯ ನಿರ್ವಹಿಸಿದರೆ ಆ ಸಮಯದಲ್ಲಿ ಬರುವ ಓದುಗರಿಗೆ ಅನುಕೂಲವಾಗುತ್ತದೆ. ನಿಯಮಗಳ ಸೂಚನಾಫಲಕ ಹಾಗೂ ಸಿಸಿ ಕಾಮೆರಾಗಳ ಅಳವಡಿಕೆಯಾಗಬೇಕು. ಕೇವಲ 15-20 ಜನ ಓದುಗರು ಕೂಡ್ರಿಸಲು ಆಸನಗಳಿವೆ. ಪ್ರತ್ಯೇಕ ಶೌಚಾಲಯಗಳು ಅವಶ್ಯಕ.

ಗ್ರಂಥಾಲಯವನ್ನು ಜನರು ಜೀವನಾಡಿಗಳಾಗಿ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮೂರ ಗ್ರಂಥಾಲಯಕ್ಕೆ ಸ್ವಂತ ಜಾಗೆ-ಕಟ್ಟಡವಿಲ್ಲದ್ದಕ್ಕೆ ಅದು ಸ್ಥಳಾಂತರಗೊಳ್ಳುವ ಸಾಧ್ಯತೆಯಿತ್ತು. ನಮ್ಮಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಅಂಚೆ ಕಚೇರಿ ಹಿಂಭಾಗದಲ್ಲಿ 40×60 ಅಡಿ ನಿವೇಶನ ಗುರುತಿಸಿ, ಅವರ ಹೆಸರಿಗೆ ಮಾಡಲಾಯಿತು. ಆದರೆ ಕಟ್ಟಡ ಮಾಡುವಷ್ಟರಲ್ಲಿ ಕೆಲವರು ತಕರಾರು ಮಾಡಿದ್ದಕ್ಕೆ ಅನುದಾನ ಬಳಸಿ ಪುರಸಭೆ ಆವರಣದಲ್ಲಿ ಹೊಸ ಕೊಠಡಿ ನಿರ್ಮಿಸಿ ಗ್ರಂಥಾಲಯ ಬಳಕೆಗೆ ಕೊಡಲಾಯಿತು. ಗ್ರಂಥಾಲಯಕ್ಕಾಗಿ ನಿಗದಿಪಡಿಸಿದ ಸ್ಥಳದಲ್ಲೇ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಿಸಲು ಪ್ರತಿಯೊಬ್ಬರು ಉತ್ಸುಕರಾಗಬೇಕಾಗಿದೆ. ಬಸವರಾಜ ಬಾಳಿಕಾಯಿ, ಪುರಸಭೆ ಮಾಜಿ ಅಧ್ಯಕ್ಷ

 

-ಬಿ.ಟಿ. ಪತ್ತಾರ

ಟಾಪ್ ನ್ಯೂಸ್

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.