ಲಾಹೋರ್; ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ಹೃದಯಾಘಾತ? ವರದಿ
Team Udayavani, Oct 26, 2019, 4:40 PM IST
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಲಾಹೋರ್ ನ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿರುವ ಘಟನೆ ಕುರಿತು ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮೀರ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಹೃದಯಾಘಾತಕ್ಕೆ ಒಳಗಾಗಿರುವುದಾಗಿ ಲಾಹೋರ್ ನ ಸರ್ವೀಸಸ್ ಹಾಸ್ಪಿಟಲ್ ವೈದ್ಯರು ತಿಳಿಸಿರುವುದಾಗಿ ಮೀರ್ ಟ್ವೀಟ್ ಮಾಡಿದ್ದಾರೆ. ಆದರೆ ಕೆಲವು ಮಾಧ್ಯಮಗಳಲ್ಲಿ ನವಾಜ್ ಷರೀಫ್ ಹೃದಯಾಘಾತದ ಸುದ್ದಿ ಸತ್ಯವಲ್ಲ ಎಂದು ತಿಳಿಸಿವೆ.
ಜಿಯೋ ನ್ಯೂಸ್ ವರದಿ ಪ್ರಕಾರ, ಕಳೆದ ವಾರದಿಂದ ಲಾಹೋರ್ ನ ಸರ್ವೀಸಸ್ ಆಸ್ಪತ್ರೆಗೆ ಮಾಜಿ ಪ್ರಧಾನಿ ನವಾಜ್ ಷರೀಫ್ ದಾಖಲಾಗಿದ್ದು, ದಿನದಿಂದ ದಿನಕ್ಕೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ತೀವ್ರ ನಿಶ್ಯಕ್ತಿಗೊಳಗಾಗಿರುವುದಾಗಿ ತಿಳಿಸಿದೆ.
ಷರೀಫ್ ಅವರಿಗೆ ರಕ್ತದ ಕಣಗಳನ್ನು ನೀಡಲಾಗುತ್ತಿದೆ. ಚಿಕಿತ್ಸೆಯಿಂದಾಗಿ ಷರೀಫ್ ತೀವ್ರ ಅಸ್ವಸ್ಥರಾಗಿದ್ದು, ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿದೆ ಎಂದು ಮತ್ತೊಂದು ವರದಿ ತಿಳಿಸಿದೆ. ಚೌಧರಿ ಶುಗರ್ ಮಿಸ್ ಪ್ರಕರಣದಲ್ಲಿ ಲಾಹೋರ್ ಹೈಕೋರ್ಟ್ ಶುಕ್ರವಾರವಷ್ಟೇ ಷರೀಫ್ ಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.