ಸಿದ್ದುರದ್ದು ಹೊಲಸು ನಾಲಿಗೆ: ಆಯನೂರು
Team Udayavani, Oct 26, 2019, 9:12 PM IST
ಶಿವಮೊಗ್ಗ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿರುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಇಲ್ಲವೇ ಸಭಾಧ್ಯಕ್ಷರು ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿರಿಯ ರಾಜಕಾರಣಿ. ಮುಖ್ಯಮಂತ್ರಿಯಾಗಿದ್ದವರು. ಅವರು ಕೂಡ ಸಾಂವಿಧಾನಿಕ ಹುದ್ದೆಯಲ್ಲೇ ಇದ್ದಾರೆ. ವಿಧಾನಸಭಾಧ್ಯಕ್ಷ ಸ್ಥಾನದ ಮಹತ್ವವೂ ಗೊತ್ತಿದೆ. ಹೀಗಿದ್ದರೂ ಅಧ್ಯಕ್ಷರ ಕುರಿತು ಏಕವಚನದಲ್ಲಿ “ಅವನ್ಯಾವನೋ’ ಎಂದು ಕೀಳುಮಟ್ಟದಲ್ಲಿ ಹೇಳಿದ್ದಾರೆ. ಇದು ವ್ಯಕ್ತಿಗಾದ ಅವಮಾನವಲ್ಲ. ಸಂವಿಧಾನ ಪೀಠಕ್ಕೆ ಆದ ಅವಮಾನ. ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಲೇಬೇಕು ಎಂದರು.
ಕತ್ತೆಗೆ ವಯಸ್ಸಾದರೆ ಏನು ಬಂತು ಎಂದು ಸಿದ್ದರಾಮಯ್ಯ ಅವರ ಹಿರಿತನದ ಬಗ್ಗೆ ವ್ಯಂಗ್ಯವಾಡಿದ ಆಯನೂರು, ಸಿದ್ದರಾಮಯ್ಯನವರದ್ದು ಹೊಲಸು ನಾಲಿಗೆ. ಅವರ ಮಾತುಗಳು ಅಯೋಗ್ಯತನದ ಮಾತುಗಳು. ಇದು ಪರಮಾವಧಿ ಎಂದು ಕಿಡಿಕಾರಿದರು.
ಸಂವಿಧಾನಿಕ ಹುದ್ದೆಯನ್ನು ಕಾಪಾಡಬೇಕಾದ ಹೊಣೆ ಎಲ್ಲ ಶಾಸಕರಿಗೂ ಇರುತ್ತದೆ. ಸದನದಲ್ಲಿ ವಿಧಾನಸಭಾಧ್ಯಕ್ಷರೇ ಸುಪ್ರೀಂ. ಸದನವನ್ನು ಹೇಗೆ ನಡೆಸಿಕೊಂಡು ಹೋಗಬೇಕೆಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ. ಇದೆಲ್ಲ ಗೊತ್ತಿದ್ದು, ಈ ಸಣ್ಣ ಮನುಷ್ಯನಿಂದ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ ಎಂದು ಟೀಕಿಸಿದರು.
ತಮಗೆ ವ್ಯಾಕರಣ ಗೊತ್ತಿದೆ ಎಂದು ಹೇಳುವ ಸಿದ್ದರಾಮಯ್ಯ. ಬಹುವಚನವನ್ನೇ ಕಲಿತಿಲ್ಲ. ಭಾಷೆಯೂ ಗೊತ್ತಿಲ್ಲ. ಕಾಗೇರಿಯವರು ಸಜ್ಜನರು. ಆರು ಬಾರಿ ಗೆದ್ದಿದ್ದಾರೆ. ಇಂತಹ ಹೊಲಸು ನಾಲಿಗೆಯ ಸಿದ್ದರಾಮಯ್ಯ ಅವರಿಗಿಂತ ಕಾಗೇರಿ ಎಷ್ಟೋ ಪಾಲು ಮೇಲು ಎಂದರು.
ಸಂಸತ್ ಹಾಗೂ ವಿಧಾನಮಂಡಲಗಳಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಎಲ್ಲರೂ ನಂತರ ಕ್ಷಮೆ ಕೇಳಿ ದೊಡ್ಡವರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪನವರೂ ಕೂಡ ಕ್ಷಮೆ ಕೇಳಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ಕೂಡ ಕ್ಷಮೆ ಕೇಳಬೇಕು. ಇಲ್ಲವೇ ಅವರ ವಿರುದ್ಧ ವಿಧಾನಸಭಾಧ್ಯಕ್ಷರು ಸುಮೊಟೋ ಕೇಸು ದಾಖಲಿಸಿಕೊಂಡು ಇಲ್ಲವೇ ಹಕ್ಕುಚ್ಯುತಿಗೆ ವರ್ಗಾಯಿಸಿ ಅವರಿಗೆ ನೋಟಿಸ್ ನೀಡಿ ಕಠಿಣ ಕ್ರಮ ತೆಗೆ ದುಕೊಳ್ಳಲೇಬೇಕು. ಇಂತಹ ಅಯೋಗ್ಯರಿಗೆ ಇದು ಪಾಠವಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್. ರುದ್ರೇಗೌಡ, ಕೆ.ಜಿ. ಕುಮಾರಸ್ವಾಮಿ,ಅನಿತಾ ರವಿಶಂಕರ್, ರತ್ನಾಕರ್ ಶೆಣೈ, ಕೆ.ವಿ. ಅಣ್ಣಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.