ಪಾಚಿ ನಿಗ್ರಹಿಸಲು ಸಿದ್ಧಗೊಂಡಿದೆ “ಸಸ್ಯನಾಶಕ’


Team Udayavani, Oct 27, 2019, 4:49 AM IST

z-12

ಸಾಂದರ್ಭಿಕ ಚಿತ್ರ

ಕರಾವಳಿ ಭಾಗದ ಭತ್ತ ಕೃಷಿಗೆ ಅಂಟಿಕೊಳ್ಳುತ್ತಿದ್ದ ಹಸುರು-ಹಳದಿ ಮುಕ್ತ ಪಾಚಿ ಸಮಸ್ಯೆಗೆ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರದ (ZAHRS) ಕೃಷಿ ವಿಜ್ಞಾನಿಗಳು ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 5 ಸಾವಿರ ಎಕ್ರೆ ಭತ್ತದ ಗದ್ದೆಗಳಲ್ಲಿ ಈ ಬಾರಿ ಹಳದಿ ಹಸುರು ಪಾಚಿಗಳು ಮುತ್ತಿಕೊಂಡಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರತೀವರ್ಷ ಈ ಸಮಸ್ಯೆ ಕಂಡುಬರುತ್ತಿದ್ದು, ಹಳದಿ ಹಸುರು ಪಾಚಿಗಳಿಂದ ಪಾರ್ಶ್ವವಾಯುವಿಗೆ ಒಳಗಾದ ಭತ್ತದ ಗದ್ದೆಗಳಿಂದ ರೈತರು ಅವುಗಳನ್ನು ಕೈಯಾರೆ ತೆಗೆದು ಹಾಕಲು ಪ್ರಯತ್ನಿಸಿದರೂ, ಅದು ಪಕ್ಕದ ಭತ್ತದ ಗದ್ದೆಗಳಿಗೆ ಹರಡಿಕೊಳ್ಳುತ್ತಿರುವುದರಿಂದ ರೈತರು ಹಲವಾರು ರೀತಿಯ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ ಇದರಿಂದ ಭತ್ತದ ಪೈರುಗಳ ಬೆಳವಣಿಗೆಯೂ ಕುಂಠಿತಗೊಳ್ಳುತ್ತಿತ್ತು. ಈ ಕಾರಣಕ್ಕಾಗಿ ಇದೀಗ ಭತ್ತದ ಗದ್ದೆಗಳಲ್ಲಿ ಕಂಡುಬರುವ “ಹಳದಿ ಹಸುರು ಪಾಚಿ’ಗಳ ಬೆಳವಣಿಗೆಯನ್ನು ನಿಯಂತ್ರಿಸಲು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರದ ಕೃಷಿ ವಿಜ್ಞಾನಿಗಳು ಸಸ್ಯನಾಶಕವನ್ನು ಪ್ರಯೋಗಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಭತ್ತ ಬೆಳೆಗಾರರಿಗೆ ಉಂಟಾಗುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದಾರೆ.

ಪೆಂಡಿಮೆಥಾಲಿನ್‌ ಸಸ್ಯನಾಶಕ
“ಪೆಂಡಿಮೆಥಾಲಿನ್‌’ ಎಂಬ ಸಸ್ಯನಾಶಕದೊಂದಿಗೆ ಪಾಚಿಗಳನ್ನು ನಿಯಂತ್ರಿಸಲು ತಂತ್ರವನ್ನು ರೂಪಿಸಿದೆ. ಕಸಿ ಮಾಡಿದ ಮೂರು ದಿನಗಳಲ್ಲಿ ಇದನ್ನು ಸಿಂಪಡಿಸಬೇಕು. ಒಂದು ಎಕ್ರೆ ಭತ್ತದ ಗದ್ದೆಯಲ್ಲಿ ಸಿಂಪಡಿಸಲು 330 ಮಿ.ಲೀ. ಸಸ್ಯನಾಶಕವನ್ನು 120 ಲೀಟರ್‌ ನೀರಿನಲ್ಲಿ ಬೆರೆಸಬೇಕು. ಇದರಲ್ಲಿ ಸಸ್ಯನಾಶಕವನ್ನು ಬಳಸುವ ಸಮಯ ಮತ್ತು ಪ್ರಮಾಣ ಮುಖ್ಯವಾಗಿದೆ.

2 ವರ್ಷಗಳ ಕಾಲ ಪ್ರಯೋಗ
ಹಲವಾರು ವರ್ಷಗಳಿಂದ ಕರಾವಳಿ ಭಾಗಗಳಲ್ಲಿ ಭತ್ತದ ರೈತರಿಗೆ ಹಳದಿ ಹಸುರು ಪಾಚಿಗಳು ತೀವ್ರ ತೊಂದರೆ ಉಂಟುಮಾಡುತ್ತಿತ್ತು. ಈ ಬಗ್ಗೆ ವಿವಿಧ ರೀತಿಯ ಸಸ್ಯನಾಶಕಗಳನ್ನು ಹೊಂದಿರುವ ಪ್ರಯೋಗಾಲಯದಲ್ಲಿ ಎರಡು ವರ್ಷಗಳ ಕಾಲ ಮಾಡಿದ ಪ್ರಯೋಗಗಳ ಅನಂತರ, “ಹಳದಿ ಹಸುರು ಪಾಚಿ’ಗಳ ಹರಡುವಿಕೆಯನ್ನು ತಡೆಯಲು ಪೆಂಡಿಮೆಥಾಲಿನ್‌ ಎಂಬ ಸಸ್ಯನಾಶಕ ಕೆಲಸ ಮಾಡುತ್ತದೆ ಎಂಬ ವಿಚಾರ ವಿಜ್ಞಾನಿಗಳಿಗೆ ತಿಳಿಯಿತು. ಇದರಿಂದ ರೈತರಿಗೆ ಮತ್ತಷ್ಟು ಅನುಕೂಲಕರವಾಗಲಿದೆ.

ಸಸಿಗಳಿಗೆ ಸಿಗಲಿದೆ ಶಕ್ತಿ
ಈ “ಪೆಂಡಿಮೆಥಾಲಿನ್‌’ ಜತೆಗೆ 15 ದಿನ ಗಳ ಅಂತರದ ಅನಂತರ ಹೊರಹೊಮ್ಮುವ ಸಸ್ಯನಾಶಕ- “ಪೆನಾಕ್ಸ್ಯುಲಮ್’ ಅನ್ನು ಬಳಸಬೇಕು. ಒಂದು ಎಕ್ರೆ ಭತ್ತದ ಗದ್ದೆಯಲ್ಲಿ ಸಿಂಪಡಿಸಲು 25 ಮಿ.ಲೀ. ‘ ಪೆನಾಕ್ಸ್ಯುಲಮ್’ ಅನ್ನು 120 ಲೀಟರ್‌ ನೀರಿನಲ್ಲಿ ಬೆರೆಸಬೇಕು. ಭತ್ತದ ಸಸಿಗಳು ಸುಮಾರು 20 ದಿನಗಳ ವರೆಗೆ ಬೆಳೆದಂತೆ, ಅವುಗಳು ತಾವಾ ಗಿಯೇ ಉಳಿಸಿಕೊಳ್ಳುವ ಶಕ್ತಿಯನ್ನು ಪಡೆಯುತ್ತವೆ ಎನ್ನುತ್ತಾರೆ ಬ್ರಹ್ಮಾವರದ ಕೃಷಿ ವಿಜ್ಞಾನಿ ಡಾ| ನವೀನ್‌.

ಶೀಘ್ರ ರೈತರಿಗೆ ಶಿಫಾರಸು
ವಿಜ್ಞಾನಿಗಳು ಈಗಾಗಲೇ ಈ ಸಸ್ಯನಾಶಕದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪ್ರಾಯೋಗಿಕವಾಗಿ ಕೆಲವೆಡೆ ಇದನ್ನು ಸಿಂಪಡಿಸಲಾಗಿದೆ. ಉತ್ತಮ ಪ್ರಯೋಜನಕಾರಿ ಎಂಬ ಅಂಶ ತಿಳಿದುಬಂದಿದೆ. ವಿಜ್ಞಾನಿಗಳ ವಲಯ ಸಭೆಯಲ್ಲಿ ಇದಕ್ಕೆ ಅನುಮೋದನೆಯೂ ದೊರಕಿದೆ. ಶೀಘ್ರದಲ್ಲೇ ಸಸ್ಯನಾಶಕವನ್ನು ಅಧಿಕೃತವಾಗಿ ಬಳಸುವಂತೆ ಇಲಾಖೆ ರೈತರಿಗೆ ಶಿಫಾರಸು ಮಾಡಬಹುದು.
– ಸತೀಶ್‌ ಬಿ., ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ

-  ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.