ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು ಪರಾಭವ
Team Udayavani, Oct 27, 2019, 5:12 AM IST
ಪ್ಯಾರಿಸ್: ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ನಲ್ಲಿ ಸೋತು “ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ’ಯಿಂದ ನಿರ್ಗಮಿಸಿದ್ದಾರೆ.
ವಿಶ್ವದ 6ನೇ ಶ್ರೇಯಾಂಕಿತೆ ಸಿಂಧು ಶುಕ್ರವಾರ ತಡರಾತ್ರಿ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕಠಿನ ಹೋರಾಟದ ಹೊರತಾಗಿಯೂ ಚೈನೀಸ್ ತೈಪೆೆಯ ಅಗ್ರ ಶ್ರೇಯಾಂಕಿತೆ ತೈ ಜು ಯಿಂಗ್ ವಿರುದ್ಧ 16 21, 26 24, 17 21 ಅಂತರದಲ್ಲಿ ಸೋಲು ಅನುಭವಿಸಿದರು. ಇವರಿಬ್ಬರ ಸುದೀರ್ಘ ಹೋರಾಟ ಒಂದು ಗಂಟೆ, 15 ನಿಮಿಷಗಳ ಕಾಲ ಸಾಗಿತು.
ಎರಡನೇ ಮತ್ತು ಅಂತಿಮ ಗೇಮ್‌ನಲ್ಲಿ ಸಿಂಧು ಯಿಂಗ್ ನಡುವೆ ಪ್ರಬಲ ಹೋರಾಟವೇ ನಡೆದಿತ್ತು. ಇಬ್ಬರೂ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದರು. ಆದರೆ ಅದೃಷ್ಟ ಚೈನೀಸ್ ತೈಪೆ ಆಟಗಾರ್ತಿಯ ಕೈ ಹಿಡಿಯಿತು. ಇದಕ್ಕೂ ಮುನ್ನ ಭಾರತದ ಮತ್ತೋರ್ವ ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.