ಅಯೋಧ್ಯೆಯಲ್ಲಿ ಬೆಳಕಿನ ಚಿತ್ತಾರ
ಮೂರು ದಿನಗಳ ದೀಪೋತ್ಸವಕ್ಕೆ ಚಾಲನೆ
Team Udayavani, Oct 27, 2019, 6:50 AM IST
ಲಕ್ನೋ: ದೇಶಾದ್ಯಂತ ದೀಪಾವಳಿಯ ಸಂಭ್ರಮ ಮನೆಮಾಡಿರುವಂತೆಯೇ ದೇಗುಲಗಳ ನಗರಿ ಅಯೋಧ್ಯೆಯು ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ. 3 ದಿನಗಳ ಕಾಲ ನಡೆಯಲಿರುವ ಅದ್ದೂರಿ ದೀಪೋತ್ಸವಕ್ಕೆ ಶನಿವಾರ ಚಾಲನೆ ದೊರಕಿದ್ದು, ಕಣ್ಣು ಹಾಯಿಸಿದಲ್ಲೆಲ್ಲ ದೀಪದ ಬೆಳಕು ಮುದ ನೀಡುತ್ತಿದೆ.
ಅಯೋಧ್ಯೆ ನಗರಾದ್ಯಂತ 5 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸುವ ಮೂಲಕ ತಾವೇ ಮಾಡಿದ ಹಿಂದಿನ ದಾಖಲೆಯನ್ನು ಸರಿಗಟ್ಟಿ, ಹೊಸದಾಗಿ ಗಿನ್ನೆಸ್ ದಾಖಲೆಯಲ್ಲಿ ಹೆಸರು ಪಡೆಯಲು ಉತ್ತರ ಪ್ರದೇಶ ಸರಕಾರ ಉದ್ದೇಶಿಸಿದೆ. 2017ರಲ್ಲಿ ಉ.ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಆ ವರ್ಷದಿಂದಲೇ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದೆ. ಇದು 3ನೇ ವರ್ಷದ ಕಾರ್ಯ ಕ್ರಮವಾಗಿದ್ದು, ಸದ್ಯದಲ್ಲೇ ಅಯೋಧ್ಯೆ ತೀರ್ಪು ಬರುವ ಹಿನ್ನೆಲೆಯಲ್ಲಿ ಇಡೀ ದೇಶದ ಗಮನ ಇತ್ತ ನೆಟ್ಟಿದೆ. 3 ದಿನಗಳ ಕಾಲ ದೀಪೋತ್ಸವ ನಡೆಯಲಿದ್ದು, ಶನಿವಾರದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಫಿಜಿ ಸಂಸತ್‌ನ ಡೆಪ್ಯುಟಿ ಸ್ಪೀಕರ್ ವೀಣಾ ಭಟ್ನಾಗರ್ ಪಾಲ್ಗೊಂಡಿದ್ದಾರೆ.
ವಿದೇಶಿ ಗಣ್ಯರು ಭಾಗಿ
ಥಾಯ್ಲೆಂಡ್‌ನ ಥಾಯ್-ಇಂಡಿಯಾ ಕಲ್ಚರ್ ಲಾಡ್ಜ್ನ ಅಧ್ಯಕ್ಷರು, ಮಾರಿಷಿಯಸ್‌ನ ರಾಮಾಯಣ ಸೆಂಟರ್‌ನ ಸ್ಥಾಪಕರು, ಚೀನ, ನೇಪಾಲ ಮತ್ತಿತರ ದೇಶಗಳ ರಾಮಾಯಣ ತಜ್ಞರು ಮತ್ತಿತರ ಗಣ್ಯರು ದೀಪೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ.
ಗಿನ್ನೆಸ್ ದಾಖಲೆ
ಹಿಂದಿನ ದಾಖಲೆಹಿಂದಿನ ದಾಖಲೆ 3,51,000 ದೀಪಗಳು
ಈ ಬಾರಿ 5,51,000 ದೀಪಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.