ಪ್ರವಾಹಕ್ಕೆ ತೋಟಗಾರಿಕೆ ಬೆಳೆ ನೀರುಪಾಲು
Team Udayavani, Oct 27, 2019, 12:47 PM IST
ನರಗುಂದ: ಮಲಪ್ರಭಾ ಮತ್ತು ಬೆಣ್ಣೆಹಳ್ಳ ದಂಡೆಯಲ್ಲಿರುವ ಗ್ರಾಮಗಳ ತೋಟಗಾರಿಕೆ ಬೆಳೆಗಳು ಪ್ರವಾಹಕ್ಕೆ ತುತ್ತಾಗಿದೆ.
ನಿರಂತರ ಸುರಿದ ಮಳೆಯಿಂದಾಗಿ ಹಾನಿಗೊಳಗಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಆ. 7ರಂದು ಮೊದಲ ಬಾರಿಗೆ ಉಕ್ಕಿ ಹರಿದ ಮಲಪ್ರಭಾ-ಬೆಣ್ಣೆಹಳ್ಳ ಪ್ರವಾಹ ಸಾಕಷ್ಟು ಬೆಳೆಗಳನ್ನು ನೀರಲ್ಲಿ ಹೋಮ ಮಾಡಿದ್ದು, ಬಳಿಕ ಎರಡು ಸಾರಿ ಮತ್ತೆ ಬಂದ ಪ್ರವಾಹ ಅಳಿದುಳಿದ ತೋಟಗಾರಿಕೆ ಬೆಳೆಗಳನ್ನೂ ಆಹುತಿ ತೆಗೆದುಕೊಂಡಿತು. ಹೀಗಾಗಿ ಸತತ ಮೂರು ಬಾರಿ ಉಕ್ಕಿ ಹರಿದ ಪ್ರವಾಹ ಸ್ಥಿತಿಯಿಂದಾಗಿ ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳ ಪಾತ್ರದ ರೈತರು ಚಿಂತೆಗೀಡಾಗಿದ್ದಾರೆ. ನದಿ ಮತ್ತು ಬೆಣ್ಣೆಹಳ್ಳ ಪ್ರದೇಶ ಹೊರತುಪಡಿಸಿ ಬಯಲು ಪ್ರದೇಶದಲ್ಲಿ ಅತಿಯಾಗಿ ನಿರಂತರ ಸುರಿದ ಮಳೆಯಿಂದಾಗಿ ರೈತರ ಬೆಳೆಗಳು ನಾಶವಾಗಿವೆ. ಇದರಿಂದಾಗಿ ಕೈಗೆಟುಕುವ ಬೆಳೆಗಳನ್ನು ಕಳೆದುಕೊಂಡ ರೈತರು ನಿತ್ಯ ಸಂಕಟ ಪಡುವಂತಾಗಿದೆ.
834 ಹೆಕ್ಟೇರ್ ಬೆಳೆನಾಶ: ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳದ ಪಾತ್ರ ಸೇರಿ ತಾಲೂಕಿನಲ್ಲಿ ಒಟ್ಟು 834 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಪ್ರವಾಹ ಮತ್ತು ವರುಣನ ಅವಕೃಪೆಗೆ ಹಾನಿಯಾಗಿವೆ. 724 ಹೆಕ್ಟೇರ್ ಪ್ರದೇಶ ಈರುಳ್ಳಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ರೈತರು ಕಣ್ಣೀರು ಹರಿಸುವಂತಾಗಿದೆ. ಇದಲ್ಲದೇ ಟೊಮೆಟೋ, ಬದನೆಕಾಯಿ, ಹೀರೆಕಾಯಿ, ಹಾಗಲಕಾಯಿ, ಮೂಲಂಗಿ ಸೇರಿ 94 ಹೆಕ್ಟೇರ್ ಪ್ರದೇಶದ ತರಕಾರಿ ಬೆಳೆಗಳು ಹಾಗೂ ಎರಡು ಬಾರಿ ಪ್ರವಾಹ ತೀರಿದ ಬಳಿಕ ಹೊಸದಾಗಿ ನಾಟಿ ಮಾಡಿದ್ದ 16 ಹೆಕ್ಟೇರ್ ಪ್ರದೇಶದ ಪೇರಲ ಗಿಡಗಳು ನಾಶವಾಗಿವೆ. ಅ. 23ರಂದು ನಡೆಸಲಾದ ಸಮೀಕ್ಷೆಯನ್ವಯ ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ
-ಸಿದ್ಧಲಿಂಗಯ್ಯ ಮಣ್ಣೂರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.