ಸತತ ಮಳೆಗೆ ತತ್ತರಿಸಿದ ಬಳ್ಳಾರಿ ಜನತೆ
Team Udayavani, Oct 28, 2019, 10:42 AM IST
ಬಳ್ಳಾರಿ: ದೀಪಾವಳಿ ಹಬ್ಬದ ಅಮವಾಸ್ಯೆ ದಿನವಾದ ಸೋಮವಾರ ಬೆಳಗಿನಜಾವ ಸತತವಾಗಿ ಸುರಿದ ಮಹಾಮಳೆಗೆ ಗಣಿನಾಡು ಬಳ್ಳಾರಿ ಜಿಲ್ಲೆ ತತ್ತರಿಸಿದೆ.
ಬಳ್ಲಾರಿ ತಾಲೂಕಿನ ಸಂಜೀವರಾಯನಕೊಪಟೆ, ಇಬ್ರಾಹಿಂಪುರ ಬಹುತೇಕ ಗ್ರಾಮಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ. ಸಂಜೀವರಾಯನಕೊಪಟೆ ಗ್ರಾಮದಿಂದ ಸಮೀಪದ ಚರಕುಂಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲ್ಸೆತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ರಸ್ತೆಯುದ್ಧಕ್ಕೂ ಇರುವ ವಿದ್ಯುತ್ ಕಂಬಗಳು ಮಳೆಯ ಅಬ್ಬರದಿಂದ ಒಂದು ಕಡೆ ವಾಲಿವೆ. ಮಳೆಯ ನೀರಿನಿಂದ ಕಂಬಗಳು ಯಾವ ಸಂದರ್ಭದಲ್ಲಾದ್ರೂ ಧರೆಗೆ ಉರುಳುವ ಸಾಧ್ಯತೆ ಹೆಚ್ಚಿದೆ. ಇನ್ನು ಚರಕುಂಟೆ ಗ್ರಾಮಸ್ಥರು ಅತ್ತ ದೀಪಾವಳಿ ಹಬ್ಬದ ಆಚರಣೆಗೂ ಸಿದ್ಧರಾಗದೇ, ಕೃಷಿ ವಟುವಟಿಕೆಯಲ್ಲಿ ತಟಸ್ಥರಾಗಿದ್ದಾರೆ.
ಅಲ್ಲದೇ, ಇಬ್ರಾಹಿಂಪುರ ಗ್ರಾಮದಲ್ಲಂತೂ ಈ ಮಹಾಮಳೆಯ ನೀರಿನಿಂದ ಇಡೀ ಗ್ರಾಮವೆಲ್ಲ ಜಲಾವೃತಗೊಂಡಿದೆ. ಗ್ರಾಮದ ರಾಜ ಬೀದಿ ಹಾಗೂ ಪ್ರಮುಖ ರಸ್ತೆಯೆಲ್ಲೆಲ್ಲಾ ನೀರು ನುಗ್ಗಿದೆ. ಅದರಿಂದ ಗ್ರಾಮಸ್ಥರಿಗೆ ದೀಪಾವಳಿ ಹಬ್ಬವನ್ನು ಈ ಮಳೆಯ ನೀರಿನಲ್ಲೇ ಕಳೆಯುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.