ಹೊಸದಿಲ್ಲಿ: 833 ಡೆಂಗ್ಯೂ ಪ್ರಕರಣ
Team Udayavani, Oct 28, 2019, 7:50 PM IST
ಹೊಸದಿಲ್ಲಿ: ಈ ವರ್ಷ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 833 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಅವುಗಳ ಪೈಕಿ ಕಳೆದ ವಾರ 189 ಪ್ರಕರಣಗಳು ದಾಖಲಾಗಿದೆ ಎಂದು ದಿಲ್ಲಿ ಮಹಾನಗರ ಪಾಲಿಕೆ ವರದಿಯಲ್ಲಿ ತಿಳಿಸಿದೆ. ಅಕ್ಟೋಬರ್ 26ರ ತನಕ 574 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ.
ಅಕ್ಟೋಬರ್ 19ರ ತನಕ 644 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಬಳಿಕ 189 ಪ್ರಕರಣಗಳು ಕಳೆದ ವಾರ ದಾಖಲಾಗಿದೆ. ಪರಿಣಾಮವಾಗಿ ಈ ವರ್ಷ 833 ಪ್ರಕರಣಗಳನ್ನು ಕಂಡಂತಾಗಿದೆ. ಒಟ್ಟು 833 ಡೆಂಗ್ಯೂ ಪ್ರಕರಣಗಳಲ್ಲಿ 551 ಅಕ್ಟೋಬರ್, 190 ಸೆಪ್ಟಂಬರ್, 52 ಅಗಸ್ಟ್, 18 ಜುಲೈ 11 ಪ್ರಕರಣಗಳು ಜೂನ್ ತಿಂಗಳಲ್ಲಿ ಕಂಡುಬಂದಿದೆ. ಉಳಿದ ಪ್ರಕರಣಗಳು ಜನವರಿ-ಮೇ ತಿಂಗಳಲ್ಲಿ ದಾಖಲಾಗಿದೆ. ಕಳೆದ ವರ್ಷ ದಿಲ್ಲಿಯಲ್ಲಿ 2,798 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 4 ಸಾವು ಸಂಭವಿಸಿತ್ತು.
56 ಮಲೇರಿಯಾ ಪ್ರಕರಣಗಳು ಅಗಸ್ಟ್ ತಿಂಗಳಲ್ಲಿ ದಾಖಲಾಗಿವೆ. ಜುಲೈನಲ್ಲಿ 54, ಜೂನ್ 35, ಮೇ ತಿಂಗಳಲ್ಲಿ 8 ಮತ್ತು ಅಗಸ್ಟ್ ತಿಂಗಳಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.