ಸ್ನಾಯುಗಳಿಗೆ ವ್ಯಾಯಾಮ
Team Udayavani, Oct 29, 2019, 5:10 AM IST
ಆಕರ್ಷಕವಾಗಿರುವ ಮೈಕಟ್ಟನ್ನು ಪಡೆಯುವುದು ಅಷ್ಟು ಸುಲಭವಲ್ಲ. ಕಾರಣ-ನಮ್ಮ ಹೊಟ್ಟೆ ಮತ್ತು ಸೊಂಟ. ಈ ಭಾಗದಲ್ಲಿ ಅತಿ ಹೆಚ್ಚಾಗಿ ಸಂಗ್ರಹವಾಗಿರುವ ಕೊಬ್ಬು ಕರಗಿದ ಬಳಿಕವೇ ಆಕರ್ಷಕವಾಗಿರುವ ಮೈಕಟ್ಟನ್ನು ಹೊಂದಲು ಸಾಧ್ಯ. ಹಾಗಾಗಿ ಕೊಬ್ಬು ತುಂಬಿರುವ ಸ್ನಾಯುಗಳಿಗೆ ಅತಿ ಹೆಚ್ಚಿನ ಸೆಳೆತ ನೀಡಿ ಹೆಚ್ಚಿನ ಬೆಳವಣಿಗೆಯನ್ನು ಪಡೆಯುವಂತೆ ಮಾಡುವ ಕೆಲವು ಫಲಪ್ರದವಾದ ವ್ಯಾಯಾಮಗಳು
ಕೈಗಳಿಂದ ದೇಹವನ್ನು (Pull Ups) ಮೇಲೆಳೆದುಕೊಳ್ಳುವುದು
ಸುಮಾರು ಆರಡಿ ಎತ್ತರದಲ್ಲಿ ಅಡ್ಡಲಾಗಿರುವ ಸರಳು ಅಥವಾ ಪೈಪನ್ನು ಹಾರಿ ಹಿಡಿದು ಇಡಿಯ ದೇಹವನ್ನು ಮೇಲಕ್ಕೆತ್ತುವ ಮೂಲಕ ಭುಜ, ಬೆನ್ನು, ರಟ್ಟೆ ಹಾಗೂ ಎದೆಯ ಸ್ನಾಯುಗಳ ಕೊಬ್ಬನ್ನು ಕರಗಿಸುತ್ತದೆ. ಇದರಲ್ಲಿ ಎರಡು ವಿಧಾನಗಳಿವೆ. ಮೊದಲನೆಯದು ಹಸ್ತ ನಮ್ಮ ಕಡೆಗೆ ನೋಡುತ್ತಿರುವಂತೆ ಹಾರಿ ಸರಳನ್ನು ಹಿಡಿದು ದೇಹವನ್ನು ಮೇಲಕ್ಕೆತ್ತಿ ಗದ್ದವನ್ನು ಸರಳಿಗೆ ತಾಕುವಷ್ಟು ಮೇಲಕ್ಕೆತ್ತುವುದು. ಎರಡನೆಯದು ಹಸ್ತದ ಹಿಂಭಾಗ ನಮಗೆ ಕಾಣುವಂತೆ ಹಾರಿ ಸರಳನ್ನು ಹಿಡಿದು ದೇಹವನ್ನು ಮೇಲಕ್ಕೆತ್ತಿ ಕುತ್ತಿಗೆಯ ಹಿಂಭಾಗ ಸರಳಿಗೆ ತಾಕುವಷ್ಟು ಬಳಿ ತರುವುದು. ಈ ಎರಡೂ ತರಹದ ವ್ಯಾಯಾಮಗಳನ್ನು ಒಂದಾದ ಒಂದರಂತೆ ಮಾಡುವುದು ಒಳ್ಳೆಯದು. ಪ್ರಾರಂಭದಲ್ಲಿ ಕೊಂಚ ನೋವುಂಟಾದರೂ ಕ್ರಮೇಣ ದೇಹ ಉತ್ತಮವಾಗಿ ಸ್ಪಂದಿಸಲು ಪ್ರಾರಂಭಿಸುತ್ತದೆ.
ಡಂಬೆಲ್ ಪ್ರಸ್
ಬೆಂಚ್ ಪ್ರಸ್ ನಲ್ಲಿದ್ದ ಭಂಗಿಯಲ್ಲಿಯೇ ಸರಳಿನ ಬದಲು ಎರಡೂ ಕೈಗಳಿಗೆ ಸಮತೂಕದ ಡಂಬೆಲ್ಲುಗಳನ್ನು ಉಪಯೋಗಿಸಿ ವ್ಯಾಯಾಮ ನಡೆಸುವುದರಿಂದ ಬೆಂಚ್ ಪ್ರಸ್ ನಲ್ಲಿ ಉಳಿದು ಹೋದ ಸ್ನಾಯುಗಳಿಗೆ ಸೆಳೆತ ಸಿಗುತ್ತದೆ. ಡಂಬೆಲ್ಲುಗಳನ್ನು ಮೇಲಿನಿಂದ ಕೈಗಳನ್ನು ಮಡಿಚಿ ನೇರ ಎದೆಯ ಪಕ್ಕಕ್ಕೆ ಅಥವಾ ಕೈಗಳನ್ನು ಚಾಚಿ ಎರಡೂ ಕಡೆಗಳಿಗೆ ಇಳಿಸುವ ಮೂಲಕ ಎದೆಯ ಪಕ್ಕದ ಸ್ನಾಯುಗಳು ಹುರಿಗಟ್ಟುತ್ತವೆ.
ಬೆಂಚ್ ಪ್ರಸ್
ಬೆಂಚಿನ ಮಲಗಿ ಮೊಣಕಾಲನ್ನು ತೊಂಭತ್ತು ಡಿಗ್ರಿಯಲ್ಲಿ ಮಡಚಿರುವ ಭಂಗಿಯಲ್ಲಿ ಸರಳಿನ ಎರಡೂ ಬದಿಗೆ ತೂಕವನ್ನು ಹಾಕಿ ಎರಡೂ ಕೈಗಳ ಮೂಲಕ ಎದೆಮಟ್ಟದಿಂದ ಮೇಲೆತ್ತುವ ಈ ವ್ಯಾಯಾಮದ ಮೂಲಕ ಎದೆ, ಭುಜ ಮತ್ತು ರಟ್ಟೆಯ ಸ್ನಾಯುಗಳು, ಹುರಿಗಟ್ಟುತ್ತವೆ. ಎದೆಯ ಸ್ನಾಯುಗಳಿಗೆ ಈ ವ್ಯಾಯಾಮ ಅತ್ಯುತ್ತಮವಾಗಿದೆ. ಆದರೆ ಈ ವ್ಯಾಯಾಮದ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಒಬ್ಬರು ಬಳಿ ಇರಲೇ ಬೇಕು, ಏಕೆಂದರೆ ಒಂದು ವೇಳೆ ತ್ರಾಣ ಉಡುಗಿದರೆ ಸರಳಿನಲ್ಲಿರುವ ತೂಕ ಪ್ರಾಣಕ್ಕೇ ಕುತ್ತು ತರಬಲ್ಲದು.
- ಕಾರ್ತಿಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.