ಸೇತುವೆ ಮುಳುಗಿದರೆ ಬದುಕು ದುಸ್ತರ
Team Udayavani, Oct 29, 2019, 10:46 AM IST
ಸೇಡಂ: ಇಲ್ಲಿನ ಶಾಲಾ ಮಕ್ಕಳಿಗೆ ರಜೆ ಅವಶ್ಯಕತೆ ಇಲ್ಲ. ನದಿ ನೀರು ಬಂದರೆ ಸಾಕು ಶಾಲೆಗೆ ರಜೆ. ತಾಲೂಕಿನ ಸಂಗಾವಿ(ಟಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಬ್ರಿಡ್ಜ್ ನ ನದಿ ನೀರಿನಿಂದ ಮುಳಗಡೆಯಾಗಿ ದಿನಗಳೇ ಕಳೆದಿವೆ.
ಟೊಂಕದೆತ್ತರಕ್ಕೆ ನೀರು ಬಂದು ನಿಂತಿದೆ. ಅದೇ ನೀರಲ್ಲಿ ಜೀವದ ಹಂಗು ತೊರೆದು ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು. ಗ್ರಾಮಸ್ಥರು ದಿನನಿತ್ಯ ತೆರಳಬೇಕು. ಸ್ವಲ್ಪ ಯಾಮಾರಿದರೂ ಯಮನ ಪಾದ ಗ್ಯಾರಂಟಿ.
ನದಿ ಬ್ರಿಡ್ಜ್ ಪ್ರವಾಹದಿಂದ ಮುಳುಗಡೆಯಾಗಿದೆ ಎಂದು ಅರ್ಥೈಸಿದ್ದರೆ ಅದು ಸುಳ್ಳು, ಈ ಬ್ರಿಡ್ಜ್ ಮುಳುಗಿರುವುದು ಸ್ವಲ್ಪ ದೂರದಲ್ಲೇ ಇರುವ ಬ್ರಿಡ್ಜ್ ಕಂ ಬ್ಯಾರೇಜ್ ಬಾಗಿಲು ಮುಚ್ಚಿರುವುದರಿಂದ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೇಲಧಿ ಕಾರಿಗಳ ನಿರ್ದೇಶನದಂತೆ ಬ್ರಿಡ್ಜ್ ಮುಚ್ಚಲಾಗಿದೆ. ಏನೂ ಮಾಡೋಕ್ಕಾಗಲ್ಲ ಎಂಬ ಉತ್ತರ ದೊರೆಯುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಒಟ್ಟಾರೆಯಾಗಿ ಬದುಕಿನ ಬಂಡಿ ಸಾಗಿಸುವ ಬಡ ಜನರಿಗೆ ಸೌಕರ್ಯಗಳೂ ಸಹ ಹೆಚ್ಚುತ್ತಿವೆ. ಸಮಸ್ಯೆಗಳು ಸಹ ಉಲ್ಬಣಿಸುತ್ತಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಅನೇಕ ದಿನಗಳಿಂದ ಬ್ರಿಡ್ಜ್ ಮೇಲೆ ನೀರು ಬಂದಿವೆ. ನೀರಾವರಿ ಇಲಾಖೆಯವರು ಬ್ಯಾರೇಜ್ ಬಂದ್ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ. ಶಾಸಕರು, ಮೇಲಧಿಕಾರಿಗಳನ್ನು ಕೋರಿ ಕೋರಿ ಸಾಕಾಗಿದೆ. ಯಾರೂ ಸಹ ಸಹಾಯಕ್ಕೆ ಬರುತ್ತಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಬ್ಯಾರೇಜ್ ತೆರೆದು ನೀರು ಬಿಟ್ಟರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಸಂಚಾರಕ್ಕೆ ಮುಕ್ತವಾಗುತ್ತದೆ. -ಅಕ್ರಮ್, ಗ್ರಾಮಸ್ಥ
ಬ್ರಿಡ್ಜ್ ತೆರೆಯಿರಿ ಎಂದು ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಸಹ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಪ್ರತಿನಿತ್ಯ ಮಕ್ಕಳು ನದಿಯಲ್ಲಿ ಜೀವದ ಹಂಗು ತೊರೆದು ಶಾಲೆಗೆ ತೆರಳುವ ದುಸ್ಥಿತಿ ಎದುರಾಗಿದೆ. –ವಿಜಯಕುಮಾರ ಮುಗಟಿ, ನಿವಾಸಿ
-ಶಿವಕುಮಾರ ಬಿ. ನಿಡಗುಂದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.